ಯಡ್ಡಿ ನೇತೃತ್ವದ ಕೆಜೆಪಿ, ಕಾಂಗ್ರೆಸ್‌ನ ಬಿ ಟೀಮ್: ಶೆಟ್ಟರ್ ಲೇವಡಿ

ಮಂಗಳವಾರ, 30 ಏಪ್ರಿಲ್ 2013 (13:17 IST)
PR
PR
ತಮ್ಮ ಮೇಲಿರುವ ಪ್ರಕರಣಗಳಿಂದ ಪಾರಾಗುವ ಸಲುವಾಗಿ ಕಾಂಗ್ರೆಸ್ ಚಿತಾವಣೆಯಂತೆ ಕೆಜೆಪಿ ಸ್ಥಾಪಿಸಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೆಜೆಪಿ ಪಕ್ಷ ಕಾಂಗ್ರೆಸ್‌ನ ಬಿ ಟೀಮ್‌ನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.

ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಿಜೆಪಿ ಸೋಲಿಸುವ ಸಲುವಾಗಿ ಕೆಜೆಪಿ ಮತ್ತು ಕಾಂಗ್ರೆಸ್ ನಡುವೆ ಒಳ ಒಪ್ಪಂದ ಏರ್ಪಟ್ಟಿದೆ ಎಂದು ಆರೋಪಿಸಿದರಲ್ಲದೆ ಯಡಿಯೂರಪ್ಪನವರ ಕೆಜೆಪಿ ಮೂರ್ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೊಡೆತ ಕೊಡಬಹುದು ಎಂದು ಅಭಿಪ್ರಾಯಪಟ್ಟರು.

ಕೆಜೆಪಿಗೆ ಮತ ಹಾಕುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಾಗಿ ವ್ಯರ್ಥವಾಗುತ್ತದೆ ಎಂದು ಹೇಳಿದ ಶೆಟ್ಟರ್, ಕೆಜೆಪಿ ಅಭ್ಯರ್ಥಿಗಳಿಗೆ ತಾವು ಗೆಲ್ಲುವುದಕ್ಕಿಂತ ಬಿಜೆಪಿ ಸೋಲಿಸುವುದೇ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ