ಯುವತಿಯ ಅಶ್ಲೀಲಭಂಗಿಯ ಚಿತ್ರವನ್ನು ಫೇಸ್‌ಬುಕ್‌ಗೆ ಅಪ್‌ಲೋಡ್ ಮಾಡಿದ ಪ್ರಿಯಕರ

ಶುಕ್ರವಾರ, 10 ಜನವರಿ 2014 (15:03 IST)
PR
PR
ಉಡುಪಿ: ಯುವತಿಯೊಂದಿಗೆ ಅಶ್ಲೀಲಭಂಗಿಯಲ್ಲಿ ಸರಸವಾಡಿದ ಚಿತ್ರವನ್ನು ಕಟಪಾಡಿ ಮೂಲದ ಮಹಮ್ಮದ್ ಯಾಸಿನ್ ಎಂಬವನು ಫೇಸ್‌ಬುಕ್‌ಗೆ ಅಪಲೋಡ್ ಮಾಡಿದ ಘಟನೆ ನಡೆದಿದೆ. ಯುವಕ ಮಹಮ್ಮದ್ ಯಾಸಿನ್ ಮತ್ತು ಯುವತಿ ಆತ್ಮೀಯವಾಗಿ ಅಪ್ಪುಗೆಯಲ್ಲಿದ್ದ ಸಂದರ್ಭದ ಚಿತ್ರಗಳನ್ನು ಯಾಸಿನ್ ತೆಗೆದಿದ್ದ. ಆದರೆ ಏಕಾಏಕಿ ಕೆಲವು ಅಶ್ಲೀಲ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ಯುವತಿಯ ಮರ್ಯಾದೆಗೆ ಭಂಗ ತಂದಿದ್ದಾನೆ.

ಈ ಯುವತಿ ಪ್ರತಿಷ್ಠಿತ ಕಾಲೇಜಿಗೆ ಸೇರಿದವಳೆಂದು ಹೇಳಲಾಗಿದ್ದು, ಯುವತಿ ಪೊಲೀಸರಿಗೆ ದೂರು ನೀಡಿದ ಬಳಿಕ ಯಾಸಿನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ