ರಂಗನತಿಟ್ಟಿನಲ್ಲಿ ಹಕ್ಕಿಗಳ ಸಂಕಷ್ಟ

ಶನಿವಾರ, 14 ಜುಲೈ 2007 (12:23 IST)
ಹೆಸರಾಂತ ಪ್ರವಾಸೀ ತಾಣ ರಂಗನತಿಟ್ಟಿನಲ್ಲಿ ಇದೀಗ ವಲಸೆ ಹಕ್ಕಿಗಳ ಸಂಕಷ್ಟ ಹೇಳ ತೀರದು. ಪಕ್ಷಿಧಾಮದಲ್ಲಿ ನೀರಿನ ಮಟ್ಟ ದಿನೇದಿನೇ ಹೆಚ್ಚುತ್ತಿದ್ದು, ವಲಸೆ ಹಕ್ಕಿಗಳು ಅತಂತ್ರಂತೆ ಎದುರಿಸುವ ಭೀತಿ ಎದುರಾಗಿದೆ.

ಈ ನಡುವೆ ಶುಕ್ರವಾರ ಮುಂಜಾನೆಯಿಂದಲೇ ದೋಣಿ ವಿಹಾರವನ್ನು ರದ್ದುಗೊಳಿಸಲಾಗಿದೆ ಎಂದು ಪಕ್ಷಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

ಮಿತಿಮೀರಿದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಎಚ್ಚರಿಕೆಯನ್ನು ನೀಡಲಾಗಿದೆ. ಹಾಗಿದ್ದೂ ರಂಗನ ತಿಟ್ಟಿನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಕಡಿತವಾಗಿಲ್ಲ.

ನೀರಿನ ಮಟ್ಟ ಏರುತ್ತಿರುವ ಹಿನ್ನೆಲೆಯಲ್ಲಿ ವಲಸೆ ಹಕ್ಕಿಗಳು ಮರದ ಮೇಲೆ ಸುರಕ್ಷಿತ ಆಶ್ರಯ ಪಡೆಯುತ್ತಿವೆ. ತುಂಬಿತುಳುಕುತ್ತಿರುವ .ಆರ್.ಎಸ್.ಕನ್ನಂಬಾಡಿ ಜಲಾಶಯ ತುಂಬಿ ಹರಿಯುತ್ತಿದ್ದು ಜಲಾಶಯದ ಮಟ್ಟ 124 ಅಡಿ ತಲುಪಿದೆ.

ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳು. ಒಳ ಹರಿಯುವಿಕೆಯಲ್ಲಿ ಏರಿಕೆಯಾದ್ದರಿಂದ ಮುನ್ನೆಚಚರಿಕೆ ಕ್ರಮವಾಗಿ ಗುರುವಾರ ರಾತ್ರಿಯಿಂದಲೇ ಕ್ರಸ್ಟ್ ಗೇಟ್ ಗಳನ್ನು ತೆರೆದು ನದಿಗೆ ನೀರನ್ನು ಹರಿಯ ಬಿಡಲಾಗಿದೆ.

ವೆಬ್ದುನಿಯಾವನ್ನು ಓದಿ