ರಾಜ್ಯದಲ್ಲಿ ವರುಣನ ರೌದ್ರಾವತಾರಕ್ಕೆ 22 ಬಲಿ

ಬುಧವಾರ, 30 ಸೆಪ್ಟಂಬರ್ 2009 (17:49 IST)
NRB
ರಾಜ್ಯದ ಹಲವೆಡೆ ಗುಡುಗು,ಮಿಂಚು ಸಹಿತ ಭಾರೀ ಮಳೆಯಿಂದಾಗಿ ಸುಮಾರು22ಮಂದಿ ಬಲಿಯಾಗಿದ್ದು, ಜಾನುವಾರು ಸಾವು, ಮನೆ ಕುಸಿತ, ತಗ್ಗು ಪ್ರದೇಶಗಳು ಜಲಾವೃತಗೊಂಡು ಸಾವಿರಾರು ಎಕರೆ ಬೆಳೆ ನಾಶವಾಗಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳ ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಆತಂಕಕ್ಕೆ ಸಿಲುಕಿದ್ದಾರೆ. ವರುಣನ ರೌದ್ರಾವತಾರದಿಂದಾಗಿ ಬಿಜಾಪುರದಲ್ಲಿ-11, ಬೆಳಗಾವಿ-06, ಬಾಗಲಕೋಟೆ-03, ಕೊಪ್ಪಳ-02 ಸಾವನ್ನಪ್ಪಿದ್ದಾರೆ.

ಮುಂಗಾರು ಮಳೆ ಕೈಕೊಟ್ಟ ನಂತರ ಹುಬ್ಬಿ ಮಳೆ ಪ್ರಾರಂಭಗೊಂಡು ಉತ್ತರಿವರೆಗೂ ಎಡೆ ಬಿಡದೆ ಮಳೆ ಸುರಿದ ಪರಿಣಾಮ ಕೃಷಿಕರು ಕಂಗಾಲಾಗಿದ್ದಾರೆ. ಬಿಜಾಪುರ, ಗುಲ್ಬರ್ಗಾ, ಚಿಂಚೋಳಿಯಲ್ಲಿ ಬೆಳೆ ಸಂಪೂರ್ಣ ನಾಶವಾಗಿದೆ. ಹಲವೆಡೆ ಹಲವಾರು ಮನೆಗಳು ಕುಸಿದು ಬಿದ್ದಿದ್ದು, ಜಾನುವಾರು, ಕೋಳಿಗಳು ನೀರುಪಾಲಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ವೆಬ್ದುನಿಯಾವನ್ನು ಓದಿ