ರಾಜ್ಯಸರ್ಕಾರದ ಕಾರ್ಯವೈಖರಿಗೆ ರಾಜ್ಯಪಾಲರ ಶಹಭಾಸ್‌ಗಿರಿ

ಬುಧವಾರ, 22 ಜನವರಿ 2014 (15:47 IST)
PR
PR
ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯವೈಖರಿಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಸರ್ಕಾರದ ಪಾತ್ರವನ್ನು ಕೊಂಡಾಡಿದರು. ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಫಲವಾಗಿದೆ ಎಂದು ತಿಳಿಸಿದರು. ಪಿಯು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡುವ ವಿಷಯವನ್ನು ಅವರು ತಿಳಿಸಿದರು.. ವಿದ್ಯಾಸಿರಿ ಎಂಬ ನೂತನ ಯೋಜನೆಯನ್ನು ಸರ್ಕಾರ ಜಾರಿ ಮಾಡುತ್ತದೆಂದು ಹೇಳಿದರು. ಪಡಿತರ ವಿತರಣೆ, ರಾಜೀವ್ ಗಾಂಧಿ ಆರೋಗ್ಯ ಯೋಜನೆ ಜಾರಿ ಮುಂತಾದ ವಿಷಯಗಳನ್ನು ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿದರು. ವಿಧಾನಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ, ದುರ್ಬಲ ವರ್ಗದವರಿಗೆ ಸರ್ಕಾರ ಆದ್ಯತೆ ನೀಡುತ್ತದೆಂದು ತಿಳಿಸಿದರು.

ಪಾರದರ್ಶಕ , ಭ್ರಷ್ಟಾಚಾರ ಮುಕ್ತ ಆಡಳಿತವನ್ನು ನೀಡುತ್ತದೆಂದು ಭರವಸೆ ನೀಡಿದರು. ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಕಾವೇರಿ ನೀರು ಒದಗಿಸುತ್ತದೆ. ಮಹಿಳೆಯರ ವಿರುದ್ಧದ ಪ್ರಕರಣಗಳ ತ್ವರಿತ ವಿಲೇವಾರಿ ಮಾಡುತ್ತದೆ ಎಂದು ಹೇಳಿದರು. ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಜಾರಿ, ಏಪ್ರಿಲ್ 1ರಿಂದ ಕೃಷಿ ನೀತಿಯನ್ನು ಸರ್ಕಾರ ಜಾರಿಗೊಳಿಸುತ್ತದೆ ಎಂದು ತಿಳಿಸಿದರು. ಹೀಗೆ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಯಾವುದೇ ಲೋಪ, ದೋಷಗಳನ್ನು ಎತ್ತಿತೋರಿಸದೇ, ಸರ್ಕಾರದ ಕಾರ್ಯವೈಖರಿಗೆ ಶಹಭಾಸ್‌ಗಿರಿ ನೀಡಿದರು.

ವೆಬ್ದುನಿಯಾವನ್ನು ಓದಿ