ರಾಜ್ಯ ರಾಜಕಾರಣ: ಅಡ್ವಾಣಿ, ನಾಯ್ಡು ಪ್ರಧಾನಿ ಭೇಟಿ

ಬುಧವಾರ, 31 ಅಕ್ಟೋಬರ್ 2007 (12:47 IST)
ಕರ್ನಾಟಕ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು, ತಮ್ಮ ಪಕ್ಷದ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಅಧಿಕಾರ ವಹಿಸಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಪರಿಹರಿಸಬೇಕೆಂಬ ಬೇಡಿಕೆಯೊಂದಿಗೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಲಾಲಕೃಷ್ಣ ಅಡ್ವಾಣಿ, ರಾಜ್‌ನಾಥ್ ಸಿಂಗ್ ಮತ್ತು ವೆಂಕಯ್ಯ ನಾಯ್ಡು ಅವರನ್ನು ಒಳಗೊಂಡ ಉನ್ನತ ಆಯೋಗವು ಪ್ರಧಾನಿ ಮನ್‌ಮೋಹನ್ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು.

ಪ್ರಧಾನಿಯವರೊಂದಿಗೆ ನಡೆಸಿದ ಮಾತುಕತೆಯಲ್ಲಿ ರಾಜದಲ್ಲಿರುವ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರಕಾರ ಹಿಂತೆಗೆದುಕೊಂಡು ತಮ್ಮ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬರಲು ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಂಡಿದೆ.

ಭಾರತೀಯ ಜನತಾ ಪಕ್ಷದ ನಿಯೋಗಕ್ಕೆ ಕೇಂದ್ರ ಸರಕಾರವು ಸಂವಿಧಾನದ ಪ್ರಕಾರ ನಿರ್ಧಾರ ತೆಗೆದುಕೊಳ್ಳುವುದು ಎಂದು ಹೇಳಿದ್ದು. ಆದರೆ ಸಮಯ ಮಿತಿ ನೀಡಲು ನಿರಾಕರಿಸಿದರು ಎಂದು ವೆಂಕಯ್ಯ ನಾಯ್ಡು ಅವರು ಪತ್ರಿಕಾ ಪ್ರತಿನಿಧಿಗಳಿಗೆ ರಾಜ್ಯ ರಾಜಕಾರಣದಲ್ಲಿ ಆಗಿರುವ ಬೆಳವಣಿಗೆ ಕುರಿತು ಮಾಹಿತಿ ನೀಡಿದರು.

ವೆಬ್ದುನಿಯಾವನ್ನು ಓದಿ