ರಾಷ್ಟ್ರೀಯ ಪಕ್ಷಗಳಿಂದ ಚುನಾವಣೆಯಲ್ಲಿ ವೇಶ್ಯೆಯರ ಬಳಕೆ

ಗುರುವಾರ, 25 ಏಪ್ರಿಲ್ 2013 (15:24 IST)
PTI
ನಗರದ ಇಲಾವಾಲ ಬಡಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಮುಖಂಡರು ಮತದಾರರನ್ನು ಸೆಳೆಯಲು ವೇಶ್ಯೆಯರನ್ನು ಬಳಸುತ್ತಿದ್ದ ಆಘಾತಕಾರಿ ಸುದ್ದಿ ಬಯಲಿಗೆ ಬಂದಿದೆ.

ನಗರದ ಸಾಮಾಜಿಕ ಸಂಸ್ಥೆಯಾದ ಒಡನಾಡಿ ಸದಸ್ಯರು ಪೊಲೀಸರೊಂದಿಗೆ ವಸತಿಗೃಹದ ಮೇಲೆ ದಾಳಿ ನಡೆಸಿದಾಗ, ಕೋಲ್ಕತಾ, ರಾಜಸ್ಥಾನ ಸೇರಿದಂತೆ ಇತರ ರಾಜ್ಯಗಳಿಂದ ಕರೆತರಲಾಗಿದ್ದ ಅನೇಕ ಯುವತಿಯರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತ ಯುವತಿಯರ ವಿಚಾರಣೆ ನಡೆಸಿದಾಗ ರಾಷ್ಟ್ರೀಯ ಪಕ್ಷವೊಂದರ ಮುಖಂಡರು ಮತದಾರರೊಂದಿಗೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳಲು ಹಣವನ್ನು ನೀಡಿದ್ದಾರೆ ಎಂದು ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಸತಿಗೃಹದ ಮೇಲೆ ಪೊಲೀಸರು ದಾಳಿ ನಡೆಸಿದಾಗ ಕಾಂಡೋಮ್‌ಗಳು ಮತ್ತು ಅಶ್ಲೀಲದೃಶ್ಯಗಳನ್ನು ಹೊಂದಿರುವ ಸಿಡಿಗಳು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಯಾವ ರಾಷ್ಟ್ರೀಯ ಪಕ್ಷದವರು ಮತದಾರರನ್ನು ಸೆಳೆಯಲು ವೇಶ್ಯೆಯರ ಬಳಕೆ ಮಾಡಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ