ರಿಲೀಫ್: ಪ್ರತಿಪಕ್ಷಗಳ ಸಭಾತ್ಯಾಗ ನಡುವೆ ಬಜೆಟ್‌ಗೆ ಅಸ್ತು

ಶನಿವಾರ, 31 ಮಾರ್ಚ್ 2012 (11:05 IST)
PR
ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೂ 2012-13ನೇ ಸಾಲಿನ ಬಜೆಟ್‌ಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಅನುಮೋದನೆ ಪಡೆದುಕೊಂಡಿದ್ದಾರೆ.

ಏಪ್ರಿಲ್‌ನಿಂದ 4 ತಿಂಗಳ ಲೇಖಾನುದಾನಕ್ಕೂ ಸದನ ಒಪ್ಪಿಗೆ ಸೂಚಿಸಿದೆ. ರಾಜಕೀಯ ಸ್ಥಿತ್ಯಂತರಗಳ ಮಧ್ಯೆ ಬಜೆಟ್ ಮಂಡನೆಯೇ ಅನುಮಾನ ಎನ್ನುವ ಸ್ಥಿತಿಯಲ್ಲಿದ್ದ ಸಿಎಂ ಡೀವಿ ಈ ಮೂಲಕ ತಲೆಯ ಮೇಲಿದ್ದ ಬಹುದೊಡ್ಡ ಭಾರ ಇಳಿಸಿಕೊಂಡಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಸುದೀರ್ಘ ಉತ್ತರ ನೀಡಿದ ಮುಖ್ಯಮಂತ್ರಿ, ಹೊಸ ಕಾರ್ಯಕ್ರಮಗಳನ್ನು ಪ್ರಕಟಿಸಿದರು. ಬಳಿಕ ಅವರು ಮುಂಗಡ ಪತ್ರವನ್ನು ಸದನದ ಅಂಗೀಕಾರಕ್ಕೆ ಮಂಡಿಸಿದಾಗ ಪ್ರತಿಪಕ್ಷದವರು, ಬಜೆಟ್ ಜನ ಸಾಮಾನ್ಯರ ಬೇಡಿಕೆಗಳಿಗೆ ಪೂರಕವಾಗಿಲ್ಲ. ಇದು ರಾಜ್ಯವನ್ನು ಸಾಲದ ಸುಳಿಗೆ ಕೊಂಡೊಯ್ಯುವ ಬಜೆಟ್. ಈ ಬಜೆಟ್ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ ಎಂದು ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.

ವೆಬ್ದುನಿಯಾವನ್ನು ಓದಿ