ರೇಣುಕಾಚಾರ್ಯರದ್ದು 'ಮಹಾನ್ ಸಾಧನೆ': ನಾಣಯ್ಯ ವ್ಯಂಗ್ಯ

ಗುರುವಾರ, 29 ಮಾರ್ಚ್ 2012 (13:59 IST)
PR
ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ 100 ವರ್ಷಗಳಲ್ಲಿ ಯಾರೂ ಮುರಿಯಲಾಗದ ಮಹಾನ್ ದಾಖಲೆಗಳಿಗೆ ಅವರು ಪಾತ್ರರಾಗಿದ್ದಾರೆ...ಇದು ವಿಧಾನಪರಿಷತ್‌ನಲ್ಲಿ ಜೆಡಿಎಸ್ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಹಾಸ್ಯದ ದಾಟಿಯಲ್ಲಿ ಕೊಟ್ಟ ಟಾಂಗ್.

ಕೆಲವರು ಸದನದಲ್ಲಿಯೇ ಬ್ಲೂ ಫಿಲ್ಮ್ ನೋಡಿ ಖುಷಿ ಪಡುತ್ತಾರೆ. ಇನ್ನು ಕೆಲವರಿಗೆ ಅದನ್ನು ನೋಡಿ, ನೋಡಿ ಬೇಸರವಾಗಿ ಬಳಿಕ ಬಯೋಲಾಜಿಕಲ್ ಥ್ರಿಲ್ ಆಗುತ್ತದೆ ಎನಿಸುತ್ತದೆ, ಬಳಿಕ ಅವರೇ ಅದನ್ನು ಅಭ್ಯಸಿಸಲು ಮುಂದಾಗುತ್ತಾರೆ ಅಲ್ಲವೇ ರೇಣುಕಾಚಾರ್ಯರೇ ಎಂದು ನಾಣಯ್ಯ ಕೆಣಕಿದರು.

ಅಂತೂ ಪ್ರತಿಯೊಂದಕ್ಕೂ ಮೂಗು ತೂರಿಸಿ ಸಮರ್ಥನೆ ನೀಡುತ್ತಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ ನಾಣಯ್ಯನವರ ಮಾತಿನ ಏಟಿಗೆ ತೆಪ್ಪಗಾಗಿದ್ದು ವಿಶೇಷವಾಗಿ ಗಮನ ಸೆಳೆಯಿತು.

ವೆಬ್ದುನಿಯಾವನ್ನು ಓದಿ