ರೈತರಿಗೆ 'ಗಣೇಶ ಚತುರ್ಥಿ' ಕರೆಂಟ್ ಬೋನಸ್

ಬುಧವಾರ, 27 ಆಗಸ್ಟ್ 2008 (20:56 IST)
ಬಜೆಟ್‌ನಲ್ಲಿ ಘೋಷಿಸಿರುವಂತೆ 10ಎಚ್‌ಪಿವರೆಗಿನ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ತೆಗೆದುಕೊಳ್ಳುವ ಮೂಲಕ ರೈತರಿಗೆ ಗಣೇಶ ಚತುರ್ಥಿಯ ಕೊಡುಗೆಯನ್ನು ನೀಡಿದೆ.

ಉಚಿತ ವಿದ್ಯುತ್ ಪಡೆಯುವ ರೈತರು ಮೀಟರ್ ಹಾಗೂ ಪ್ಲೇಟಿಂಗ್ ಅಳವಡಿಸಿಕೊಳ್ಳಬೇಕು ಎಂದು ಸಂಪುಟ ಸಭೆಯ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಇದರ ಸಂಪೂರ್ಣ ವೆಚ್ಚವನ್ನು ಇಲಾಖೆಯಿಂದಲೇ ಭರಿಸಲು ತೀರ್ಮಾನಿಸಲಾಗಿದ್ದು, ಮೀಟರ್ ಕಡ್ಡಾಯ ಕಡ್ಡಾಯಗೊಳಿಸಲು ಒಂದು ವರ್ಷದ ಗಡುವು ನೀಡಲಾಗುವುದು. ಅಲ್ಲದೇ ವಿದ್ಯುತ್ ಬಿಲ್ ಬಾಕಿ ಪಾವತಿಸಿ,ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಅವಕಾಶ ನೀಡಲಾಗಿದೆ ಎಂದರು.

ಬಾಕಿ ಬಿಲ್ ಪಾವತಿಸಲು 2 ವರ್ಷಗಳ ತ್ರೈಮಾಸಿಕ 8ಕಂತಗಳಲ್ಲಿ ಪಾವತಿಸಬಹುದಾಗಿದೆ. ವಿದ್ಯುತ್ ಪ್ರಸರಣ ನಿಗಮ, ವಿವಿಧ ನಿಗಮಗಳ ಒಟ್ಟು 2682.33ಕೋಟಿ ರೂ.ಬಾಕಿ ಇದ್ದು, ಈ ಪೈಕಿ 664.70ಕೋಟಿ ರೂ.ಬಡ್ಡಿ ಬಾಕಿ ಇದೆ.

ಚತ್ತೀಸ್‌ಗಢದಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆ, ಭದ್ರಾ ಮೇಲ್ದಂಡೆ ಯೋಜನೆ, ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ವೆಬ್ದುನಿಯಾವನ್ನು ಓದಿ