ಲಾಲ್‌ಬಾಗ್‌ನಲ್ಲಿ ಶ್ರೀಗಂಧದ ಮರ ಕಳುವು : ಸಿಬ್ಬಂದಿಗಳಿಗೆ ಈ ಬಗ್ಗೆ ಗೊತ್ತೇ ಆಗಿಲ್ಲ

ಶನಿವಾರ, 30 ನವೆಂಬರ್ 2013 (12:18 IST)
PR
PR
ಸಸ್ಯಕಾಶಿ ಬೆಂಗಳೂರಿನ ಲಾಲ್‌ಭಾಗ್‌ ತೋಟದಲ್ಲಿ ಇದ್ದಂತಹ ಗಂಧದ ಮರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಬಿಗಿ ಭದ್ರತೆ ಇದ್ದರೂ ಕೂಡ ಪೋಲೀಸರ ಕಣ್ಣು ತಪ್ಪಿಸಿ 50 ವರ್ಷ ಹಳೆಯ ಶ್ರೀಗಂಧದ ಮರದ ನಾಲ್ಕು ಕೊಂಬೆಗಳನ್ನು ಕಳ್ಳರು ಕಡಿದು ಬೇರೆಡೆಗೆ ಸಾಗಿಸಿದ್ದಾರೆ. ಕಳ್ಳರು ಲಾಲ್‌ಭಾಗ್‌ ತೋಟದೊಳಗೆ ನುಗ್ಗಿ, ನಾಲ್ಕು ಕೊಂಬೆಗಳನ್ನು ಕಡಿದು ಬೇರೆಡೆಗೆ ಸಾಗಿಸುತ್ತಿದ್ದರೂ, ಯಾವ ಭದ್ರತಾ ಸಿಬ್ಬಂದಿಗಳಿಗೂ ಇದು ಗೊತ್ತೇ ಆಗಿಲ್ಲವಂತೆ..!

ಲಾಲ್‌ಬಾಗ್‌ ಒಳಗೆ ಪ್ರವೇಶಿಸಲು ನಾಲ್ಕು ಗೇಟುಗಳಿವೆ. ಅಲ್ಲಿ ಬಿಗಿ ಭದ್ರತೆ ಕೂಡ ಇದೆ. ಹೀಗಿದ್ದಾಗ್ಯೂ ಕಳ್ಳರು ಮರವನ್ನು ಹೇಗೆ ಹೊರಗೆ ಸಾಗಿಸಿದರು ಎಂಬುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. ಬೆಂಗಳೂರಿನ ಕೇಂದ್ರ ಬಿಂದುವಾಗಿರುವ ಲಾಲ್‌ಬಾಗ್ ಪ್ರದೇಶದಲ್ಲಿ ಶ್ರೀಗಂಧದ ಮರ ಕಳ್ಳತನವಾಗುತ್ತಿರುವುದು ಇದೇ ಮೊದಲಲ್ಲ.. ಈ ಹಿಂದೆ ಕೂಡ ಲಾಲ್ ಭಾಗ್‌ ಎಂಟ್ರೆನ್ಸ್ ನಲ್ಲಿ ಇದ್ದಂತಹ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದರು.. ಇದಾದ ನಂತರವೂ ಲಾಲ್‌ ಭಾಗ್ ಭದ್ರತಾ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳಲಿಲ್ಲ. ಪರಿಣಾಮವಾಗಿ ಮತ್ತೆ೩ ಶ್ರೀಗಂಧದ ಮರಕ್ಕೆ ಕೊಡಲಿ ಪೆಟ್ಟು ಹಾಕಿದ್ದಾರೆ ಖದೀಮರು

ಮೊದಲು ಮತ್ತು ಈಗ ಶ್ರೀಗಂದದ ಮರಕ್ಕೆ ಕೊಡಲಿ ಪೆಟ್ಟು ಕೊಟ್ಟವರು ಒಬ್ಬರೇ ಇರಬಹುದು ಎಂಬ ಊಹಾಪೋಹ ಪೋಲೀಸರಲ್ಲಿ ಮನೆ ಮಾಡಿದೆ. ಆದ್ರೆ ಯಾರು ಇಂತಹ ಕೃತ್ಯ ಎಸಗಿದ್ದಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತುಕೊಳ್ತಾರಾ? ಅಥವ ಮತ್ತೆ ಇಂತಹ ಕೃತ್ಯ ಮರುಕಳಿಸುತ್ತಾ ಅನ್ನೋದು ಸದ್ಯದ ಪ್ರೆಶ್ನೆ

ವೆಬ್ದುನಿಯಾವನ್ನು ಓದಿ