ಲಿವ್ ಇನ್ ರಿಲೇಷನ್‌ಷಿಪ್ ರೇಪ್ ಕೇಸ್ ಆಗಿದ್ದು ಹೇಗೆ, ಕೆಳಗಿದೆ ಓದಿ

ಮಂಗಳವಾರ, 1 ಏಪ್ರಿಲ್ 2014 (13:39 IST)
ಬೆಂಗಳೂರು: ಕೊಲ್ಕತ್ತಾದ ಮಹಿಳೆಯೊಬ್ಬಳ ಜತೆ ಲಿವ್ ಇನ್ ರಿಲೇಷನ್‌ಷಿಪ್ ಹೊಂದಿದ್ದ ವ್ಯಕ್ತಿಯೊಬ್ಬನನ್ನು ರೇಪ್ ಆರೋಪಗಳ ಮೇಲೆ ಪೊಲೀಸರು ಬಂಧಿಸಿದ್ದಾರೆ. 33 ವರ್ಷ ವಯಸ್ಸಿನ ಮಹಿಳೆ ಉದ್ಯೋಗ ಅರಸಿಕೊಂಡು ನಗರಕ್ಕೆ ಬಂದಿದ್ದಳು. ಬೆಂಗಳೂರಿನಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ವಿವೇಕಾನಂದನಗರದ ನಿವಾಸಿ ಪ್ರಶಾಂತ್ ಎಂಬವರ ಮಹಿಳೆಗೆ ಭರವಸೆ ನೀಡಿದ್ದ. ಇಬ್ಬರಲ್ಲೂ ಸ್ನೇಹ ಬೆಳೆಯಿತು. ಪ್ರಶಾಂತ್ ಅರಕೆರೆಯಲ್ಲಿರುವ ಮಹಿಳೆ ಮನೆಗೆ ಆಗಾಗ್ಗೆ ಹೋಗುತ್ತಿದ್ದರು. ಒಂದು ವರ್ಷದವರೆಗೆ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಮಹಿಳೆ ತನ್ನ 8 ವರ್ಷ ವಯಸ್ಸಿನ ಪುತ್ರಿಯನ್ನು ತವರು ಪಟ್ಟಣದಲ್ಲಿ ಬಿಟ್ಟು ಬರಲು ಹೋಗಿದ್ದಳು. ನಂತರ ಹಿಂತಿರುಗಿದಾಗ ಪ್ರಶಾಂತ್ ಅವಳ ಜತೆ ವಾಸಕ್ಕೆ ನಿರಾಕರಿಸಿದ.

ಇದರಿಂದ ಕ್ರುದ್ಧಳಾದ ಮಹಿಳೆ 10 ಲಕ್ಷ ರೂ. ಪರಿಹಾರವನ್ನು ಕೋರಿದಳು. ಪ್ರಶಾಂತ್ ಟಿಂಬರ್ ಡಿಪೋನಲ್ಲಿ ಕೆಲಸ ಮಾಡುತ್ತಿದ್ದು, ಅವಳ ಬೇಡಿಕೆಯಿಂದ ಬೇಸತ್ತು ಅವಳ ಭೇಟಿಯನ್ನೇ ತ್ಯಜಿಸಿದ. ಮಹಿಳೆ ಹುಳಿಮಾವು ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಕೆಲವು ದಾಖಲೆಗಳನ್ನು ಪೊಲೀಸರು ಕೇಳಿದ್ದರಿಂದ ಅವಳು ನೇರವಾಗಿ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದ ಬಳಿಕ ಅವರು ಎಸಿಪಿ ಓಬಳೇಶ್‌ಗೆ ಇದನ್ನು ಒಪ್ಪಿಸಿದರು. ಈಗ ಪ್ರಶಾಂತ್‌ನನ್ನು ಬಂಧಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ