ಲೋಕಾಯುಕ್ತ ಕಾಯ್ದೆ ದುರ್ಬಲಗೊಳಿಸುವ ಪ್ರಯತ್ನ: ಹಿರೇಮಠ್ ಆರೋಪ

ಸೋಮವಾರ, 24 ಫೆಬ್ರವರಿ 2014 (19:30 IST)
PR
PR
ಬೆಂಗಳೂರು: ಲೋಕಪಾಲ್ ಹುದ್ದೆಯಿಂದ ಸ್ಫೂರ್ತಿಯನ್ನು ಪಡೆದು ಲೋಕಾಯುಕ್ತಕ್ಕೆ ತಿದ್ದುಪಡಿ ತರ್ತೇವೆ ಎಂದು ಹೇಳಿರುವ ರಾಜ್ಯಸರ್ಕಾರ ಲೋಕಾಯುಕ್ತ ಕಾಯ್ದೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಲೋಕಾಯುಕ್ತಕ್ಕೆ ಬಲ ನೀಡುವ ನೆಪದಲ್ಲಿ ದುರ್ಬಲಗೊಳಿಸಲು ಪ್ರಯತ್ನಿಸಲಾಗಿದೆ ಎಂಬ ದೂರು ಕೇಳಿಬಂದಿದೆ. ಕಾಯ್ದೆಯ ತಿದ್ದುಪಡಿಯಲ್ಲಿ ಲೋಕಾಯುಕ್ತ ಹುದ್ದೆ ಲೋಕಾಯುಕ್ತ ಅಧ್ಯಕ್ಷ ಎಂದು ಬದಲಾಗುತ್ತದೆ. ಈ ಮಸೂದೆಯ ಪ್ರಕಾರ 8 ಸದಸ್ಯರನ್ನು ಲೋಕಾಯುಕ್ತಕ್ಕೆ ಆಯ್ಕೆಮಾಡಬೇಕು.

ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಇದಕ್ಕೆ ವಿರೋಧ ಸೂಚಿಸಿದ್ದಾರೆ. ಸಮಾಜ ಪರಿವರ್ತನೆ ಸಮುದಾಯದ ಅಧ್ಯಕ್ಷ ಎಸ್. ಆರ್. ಹಿರೇಮಠ್ ಕೂಡ ಲೋಕಾಯುಕ್ತವನ್ನು ಬಲಪಡಿಸುವ ಬದಲಿಗೆ ದುರ್ಬಲಗೊಳಿಸಲಾಗುತ್ತಿದೆ ಎಂದು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ