ಲೋಕಾಯುಕ್ತ ವರದಿಯಲ್ಲಿ ಸಂತೋಷ್ ಲಾಡ್ ಹೆಸರಿದೆ: ಬಿಜೆಪಿ, ಹೆಸರಿಲ್ಲ: ಸಿದ್ದರಾಮಯ್ಯ

ಶುಕ್ರವಾರ, 20 ಸೆಪ್ಟಂಬರ್ 2013 (13:55 IST)
PR
PR
ಬೆಂಗಳೂರು:. ರಾಜಭವನಕ್ಕೆ ಬಿಜೆಪಿ ನಾಯಕರು ಶುಕ್ರವಾರ ಭೇಟಿ ಮಾಡಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಸಚಿವ ಸಂತೋಷ್ ಲಾಡ್ ಅವರ ರಾಜೀನಾಮೆಗೆ ಸೂಚಿಸಬೇಕೆಂದು ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯಸರ್ಕಾರ ಸಚಿವ ಸಂತೋಷ್ ಲಾಡ್ ಅವರನ್ನು ವಜಾ ಮಾಡಬೇಕೆಂದೂ ಆಗ್ರಹಿಸಿದ್ದಾರೆ. ಅಕ್ರಮ ಗಣಿಗಾರಿಕೆಯಲ್ಲಿ ಲಾಡ್ ಭಾಗಿಯಾಗಿರುವುದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖವಾಗಿದೆ. ನಿಶ್ಚಿತವಾಗಿ ಎಲ್ಲ ದಾಖಲೆಗಳ ಮೂಲಕ ಲಾಡ್ ಹಗರಣದಲ್ಲಿ ಭಾಗಿಯಾಗಿದ್ದು 100ಕ್ಕೆ 100ರಷ್ಟು ಸಾಬೀತಾಗಿದೆ.

ಮುಖ್ಯಮಂತ್ರಿಗಳು ಹಿಂದೆ ಮಾಡಿದ ನಾಟಕಗಳನ್ನು ಮರೆತು ಲಾಡ್ ಅವರನ್ನು ಮುಂದುವರೆಸಲು ನಿಶ್ಚಯಿಸಿದರೆ ನಾವು ಹೋರಾಟದ ರೂಪು ರೇಷೆಗಳನ್ನು ನಿರ್ಧರಿಸಬೇಕಾಗುತ್ತದೆ ಎಂದು ಡಿವಿ ಸದಾನಂದಗೌಡ ಹೇಳಿದ್ದಾರೆ. ಲೋಕಾಯುಕ್ತ ವರದಿಯಲ್ಲಿ ಸಂತೋಷ್ ಲಾಡ್ ಹೆಸರಿಲ್ಲ. ಹೆಸರೇ ಇಲ್ಲದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಹೇಗೆ ಎಂದು ಸಂತೋಷ್ ಲಾಡ್ ರಾಜೀನಾಮೆ ವಿಷಯ ಕುರಿತು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ