ವಿದೇಶಿ ಯುವತಿಯರ ಹೈಟೆಕ್ ವೇಶ್ಯಾವಾಟಿಕೆ ಜಾಲ

ಶನಿವಾರ, 3 ಆಗಸ್ಟ್ 2013 (12:20 IST)
PR
PR
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಜಾಲ ಬಯಲಾಗಿದೆ. ವಿದೇಶಗಳಿಂದ ವಿದ್ಯಾಭ್ಯಾಸಕ್ಕಾಗಿ ಬಂದಿರುವ ಯುವತಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿರುವುದು ಬಯಲಾಗಿದೆ. ಬೆಂಗಳೂರಿನ ಶ್ರೀನಿವಾಸಪುರದಲ್ಲಿ ಉಂಗಾಡ ಮತ್ತು ಆಫ್ರಿಕಾ ಮೂಲದ ಯುವತಿಯರನ್ನು ಹೈಟೆಕ್ ವೇಶ್ಯಾವಾಟಿಕೆ ಜಾಲಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಶ್ರೀನಿವಾಸಪುರದಲ್ಲಿ 15 ಸಾವಿರ ರೂ. ಬಾಡಿಗೆಗೆ ಮನೆ ಪಡೆದಿದ್ದ ಈ ವಿದೇಶಿ ಯುವತಿಯರು ತಿಂಗಳಿಗೆ 15,000 ಬಾಡಿಗೆಯ ಮನೆಯನ್ನು ವೇಶ್ಯಾವಾಟಿಕೆ ಅಡ್ಡೆಯಾಗಿ ಮಾರ್ಪಡಿಸಿದ್ದರು. ಇಂಟರ್‌ನೆಟ್ ಮೂಲಕ ಈ ಯುವತಿಯರು ಗಿರಾಕಿಗಳನ್ನು ಸೆಳೆದು ವ್ಯವಹಾರ ಕುದುರಿಸುತ್ತಿದ್ದರು. ಉಗಾಂಡ ಮತ್ತು ಆಫ್ರಿಕಾ ಮೂಲದ ಯುವತಿಯರ ಚಲನವಲನಗಳ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿ ಈ ಮನೆಯ ಮೇಲೆ ದಾಳಿ ಮಾಡಿದಾಗ ಹೈಟೆಕ್ ವೇಶ್ಯಾವಾಟಿಕೆ ಜಾಲ ಬಯಲಾಗಿದೆ. ಈ ದಾಳಿಯಲ್ಲಿ ಕೆಲವು ಗಿರಾಕಿಗಳೂ ಸಿಕ್ಕಿಬಿದ್ದಿದ್ದಾರೆ.

ವೆಬ್ದುನಿಯಾವನ್ನು ಓದಿ