ವಿಧಾನಸಭೆಗೆ ಆಂಗ್ಲೋ ಇಂಡಿಯನ್ನ ಸದಸ್ಯರ ಆಯ್ಕೆ

ಸೋಮವಾರ, 23 ಡಿಸೆಂಬರ್ 2013 (09:36 IST)
PR
ವಿಧಾನಸಭೆಗೆ ಆಂಗ್ಲೋ ಇಂಡಿಯನ್ನ ಸದಸ್ಯರ ಆಯ್ಕೆಯಾಗಿದೆ. ಬೆಂಗಳೂರಿನ ಆಂಗ್ಲೋ ಇಂಡಿಯನ್‌‌ ಸಂಘದ ಸದಸ್ಯೆ ವಿನಿಷಾ ನೇರೋ ಅವರನ್ನು ಆಂಗ್ಲೋ ಇಂಡಿಯನ್‌ ಕೋಟಾದಡಿ ವಿಧಾನಸಭಾ ಸದಸ್ಯರನ್ನಾಗಿ ನಾಮಕರಣ ಮಾಡುವ ಪ್ರಸ್ತಾವಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ರಾಜ್ಯ ಚುನಾವಣಾ ಅಧಿಕಾರಿಗಳು ಅಧಿಸೂಸನೆ ಹೊರಡಿಸುವುದೊಂದು ಬಾಕಿ ಉಳಿದಿದೆ. ಇಂದು ಅಧಿಸೂಚನೆ ಪ್ರಕಟನೆ ಆಗುವ ಸಾಧ್ಯತೆಗಳು ಇವೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಂಗ್ಲೋ ಇಂಡಿಯನ್‌ ಸದಸ್ಯರನ್ನು ನಾಮಕರಣ ಮಾಡುವ ಪೂರ್ಣ ಅಧಿಕಾರ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ