ವಿಧಾನಸಭೆಯಲ್ಲಿ ಬಂಡೆ ಸಾವಿನ ಪ್ರಕರಣ ಪ್ರತಿಧ್ವನಿಸಿ ಗದ್ದಲ, ಗೌಜು

ಶುಕ್ರವಾರ, 24 ಜನವರಿ 2014 (12:49 IST)
PR
PR
ಬೆಂಗಳೂರು: ಬಂಡೆ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಬೇಕೆಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಒತ್ತಾಯಿಸಿದ್ದರಿಂದ ತೀವ್ರ ಗದ್ದಲ, ಗೊಂದಲದಲ್ಲಿ ಕಲಾಪ ಮುಳುಗಿತು. ಈ ಕುರಿತು ಹೇಳಿಕೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ಸಿಐಡಿ ತನಿಖೆ ಈಗಾಗಲೇ ಪ್ರಾರಂಭವಾಗಿದೆ. ಸಿಐಡಿ ತನಿಖೆ ಪ್ರಾರಂಭವಾಗಿರುವಾಗ ಮಧ್ಯದಲ್ಲಿ ಸಿಐಡಿ ಬಗ್ಗೆ ನಂಬಿಕೆಯಿಲ್ಲ ಎಂದು ಹೇಳುವುದು ಸರಿಯಲ್ಲ. ಸಿಬಿಐ ಬಗ್ಗೆ ನಮಗೆ ವಿರೋಧವಿಲ್ಲ. ಯಾವ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಮತ್ತು ಯಾವ ಪ್ರಕರಣವನ್ನು ಸಿಐಡಿಗೆ ವಹಿಸಬೇಕು ಎಂಬ ವಿವೇಚನೆ ಸರ್ಕಾರಕ್ಕೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಿಧಾನಸಭೆಯಲ್ಲಿ ಖಾರವಾಗಿ ಮಾತನಾಡಿದರು.

ನಮಗೆ ಯಾರಿಗೂ ರಕ್ಷಣೆ ಕೊಡಬೇಕಾದ ಅನಿವಾರ್ಯತೆ ಇಲ್ಲ. ಅವರಿಗೆ ಎಷ್ಟೇ ಪ್ರಭಾವ ಇದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯನ್ನು ಕೊಡ್ತೇವೆ. ಎಂದು ಸಿಎಂ ಹೇಳಿದರು. ಆದರೆ ಸರ್ಕಾರದ ಉತ್ತರ ಬಿಜೆಪಿಗೆ ತೃಪ್ತಿ ನೀಡಲಿಲ್ಲ. ನಿಮಗೆ ಸಿಬಿಐ ಅಂದ್ರೆ ಅಲರ್ಜಿ ಅಲ್ಲವೇ, ಒಂದೇ ಒಂದು ಕೇಸನ್ನೂ ಸಿಬಿಐಗೆ ವಹಿಸಲಿಲ್ಲ. ಈಗೇಕೆ ನಿಮಗೆ ಸಿಬಿಐ ಬಗ್ಗೆ ಮಮಕಾರ ಬಂದಿದೆ ಎಂದು ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು. ಸಿಎಂ ಉತ್ತರಕ್ಕೆ ವಿಪಕ್ಷ ಸದಸ್ಯರು ತೃಪ್ತರಾಗದೇ ಸದನದಲ್ಲಿ ಕೂಗಾಟ ನಡೆಸಿದ್ದರಿಂದ ಗದ್ದಲ, ಗೊಂದಲದಲ್ಲಿ ಸದನ ಮುಳುಗಿತು. ನಂತರ ಬಿಜೆಪಿ ಶಾಸಕರು ಸದನದಲ್ಲಿ ಧರಣಿ ನಡೆಸಿದ್ದರಿಂದ ಅರ್ಧ ಗಂಟೆ ಕಾಲ ಸದನವನ್ನು ಮುಂದೂಡಲಾಯಿತು.

ವೆಬ್ದುನಿಯಾವನ್ನು ಓದಿ