ವೇತನ ಕೊಟ್ಟಿಲ್ಲ. ವೋಲ್ವೋ ಬಸ್‌ ರೋಡಿಗೆ ಇಳೀತಿಲ್ಲ.!

ಮಂಗಳವಾರ, 10 ಸೆಪ್ಟಂಬರ್ 2013 (09:20 IST)
PR
PR
ವೋಲ್ವೋ ಬಸ್‌ ಸಿಬ್ಬಂದಿಗಳಿಗೆ ವೇತನದಲ್ಲಿ ತಾರತಮ್ಯ ಮಾಡಲಾಗುತ್ತದೆ. ಅಷ್ಟೇ ಅಲ್ಲ, ಮಾಡಿದ ಕೆಲಸಕ್ಕೆ ಸರಿಯಾದ ಸಂಬಳವನ್ನೇ ಕೊಡ್ತಿಲ್ಲ. ಆದ್ರೆ ಕೆಲಸ ಮಾತ್ರ ಹೆಚ್ಚು ಮಾಡಿಸಿಕೊಳ್ತಾರೆ. ನಮಗೆ ಬರಬೇಕಾದ ಸಂಬಳ ಮತ್ತು ಓಟಿ ಬರೋವರೆಗೂ ನಾವು ಬಸ್‌ ಹತ್ತುವುದಿಲ್ಲ ಎಂದು ವೋಲ್ವೋಬಸ್‌ ಡ್ರೈವರ್‌ ಖಡಕ್ಕಾಗಿ ಹೇಳಿದ್ರು.

ವೋಲ್ವೋಬಸ್‌ ಸಿಬ್ಬಂದಿಗಳು ಪ್ರತಿ ನಿತ್ಯ 12 ರಿಂದ 14 ಗಂಟೆಗಳ ಕಾಲ ಕೆಲಸ ಮಾಡ್ತಾರೆ. ಆದ್ರೆ ಹೆಚ್ಚುವರಿ ಸಮಯ ಮಾಡಿದ ಕೆಲಸಕ್ಕೆ ಇದುವರೆಗೂ ಯಾವುದೇ ಹೆಚ್ಚುವರಿ ವೇತನ ಸಿಕ್ಕಿಲ್ಲ. ಹೀಗಾಗಿ ವೇತನ ನೀಡುವವರೆಗೂ ವೋಲ್ವೋಬಸ್‌ ರೋಡಿಗೆ ಇಳಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.

ಮೆಜೆಸ್ಟಿಕ್‌ನ 7 ನೇ ಡಿಪೋದಲ್ಲಿ ಪ್ರತಿಭಟನೆ ನಡೆಸುತ್ತಿರುವ ವೋಲ್ವೋಬಸ್‌ ಸಿಬ್ಬಂದಿಗಳನ್ನು ಭೇಟಿ ಮಾಡಿದ ಬಿಎಂಟಿಸಿ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡಿದ್ರು. ಅದ್ರೆ ಅವರ ಪೊಳ್ಳು ಮಾತಿಗೆ ಸಿಬ್ಬಂದಿಗಳು ಒಪ್ಪಲಿಲ್ಲ. ಹೀಗಾಗಿ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಉಂಟಾಯಿತು.

ಬಿಎಂಟಿಸಿಯಲ್ಲಿ ಸಾಕಷ್ಟು ಸಿಬ್ಬಂದಿಗಳ ಕೊರತೆ ಇದೆ. ಆದರೆ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವಲ್ಲಿ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಇರುವವರಿಗೆ ಹೆಚ್ಚುವರಿ ಕೆಲಸದ ಹೊರೆಯನ್ನು ನೀಡಲಾಗುತ್ತಿದೆ. ಆದ್ರೆ ಅದಕ್ಕೆ ಸೂಕ್ತವಾದ ಸಂಭಾವನೆ ಮಾತ್ರ ಇದುವರೆಗೂ ಸಿಕ್ಕಿಲ್ಲ. ಹೀಗಾಗಿ ವೋಲ್ವೋ ಸಿಬ್ಬಂದಿಗಳು ಇಂದು ಪ್ರತಿಭಟನೆ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ