ವೇಶ್ಯಾವಾಟಿಕೆ ಜಾಲ ಪತ್ತೆ: 80 ವೇಶ್ಯೆಯರ ಬಂಧನ

ಬುಧವಾರ, 2 ಏಪ್ರಿಲ್ 2014 (15:02 IST)
ನಗರದ ಡಿಸಿ ನಗರದಲ್ಲಿ ವ್ಯವಸ್ಥಿತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ 80 ಯುವತಿಯರು ಸೇರಿದಂತೆ 20 ಪುರುಷರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದ ಹೊರವಲಯದಲ್ಲಿರುವ ಡಿ ಸಿ ನಗರದಲ್ಲಿ ಕಳೆದ ಹಲವು ತಿಂಗಳುಗಳಿಂದ ನಿರಂತರವಾಗಿ ವೇಶ್ಯಾಟಿಕೆ ನಡೆಸುತ್ತಿದ್ದು, ಇದೀಗ, ಪೊಲೀಸರು ದಾಳಿ ನಡೆಸಿ 32 ಅಪ್ರಾಪ್ತೆಯರು ಸೇರಿದಂತೆ 80 ಯುವತಿಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ವೇಶ್ಯಾವಾಟಿಕೆ ಜಾಲದಲ್ಲಿ ಭಾಗಿಯಾಗಿದ್ದವರಿಂದ 1 ಲಕ್ಷಕ್ಕೂ ಹೆಚ್ಚು ನಗದು ಹಣ ಸೇರಿದಂತೆ ಕಾಂಡೋಮ್ ಬಾಕ್ಸ್‌ಗಳು ಪತ್ತೆಯಾಗಿವೆ.

ಬಂಧಿತ ಯುವತಿಯರು ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ಗೋವಾ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ