ಶಾಸಕರಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ

ಗುರುವಾರ, 13 ಜೂನ್ 2013 (12:44 IST)
PR
PR
ಹಿರಿಯ ಕಾಂಗ್ರೆಸ್ ನಾಯಕ, ಕನಕಪುರ ಕ್ಷೇತ್ರದ ಶಾಸಕರಾಗಿ ಡಿ.ಕೆ. ಶಿವಕುಮಾರ್ ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕಸಿದರು.

ಅವರು ಇಂದು ಬೆಳಗ್ಗೆ 10 ಗಂಟೆಗೆ ವಿಧಾನಸಭೆಯ ಸ್ಪೀಕರ್ ಕೊಠಡಿಯಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಿರುವುದರಿಂದ ಅಸಮಾಧಾನಗೊಂಡಿದ್ದ ಡಿ.ಕೆ. ಶಿವಕುಮಾರ್, ಇದುವರೆಗೆ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಂಡಿರಲಿಲ್ಲ. ಈ ಅವಧಿಯಲ್ಲಿ ಅವರು ದಿಲ್ಲಿ ಸುತ್ತಾಡಿದರು. ಅಲ್ಲದೇ ವಿವಿಧೆಡೆಯ ದೇವಳಗಳಿಗೆ ಭೇಟಿ ನೀಡುತ್ತಿದ್ದರು.

ಇದೀಗ ಅವರ ಮನವೊಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೂಕ್ತ ಸಂದರ್ಭದಲ್ಲಿ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಇಂದು ಬೆಳಗ್ಗೆ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ಕೆಲವು ದಿನಗಳಿಂದ ಡಿಕೆಶಿ ನಡೆ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅವರ ಪದಗ್ರಹಣದೊಂದಿಗೆ ಎಲ್ಲದಕ್ಕೂ ತೆರೆ ಬಿದ್ದಿದೆ.

ಸಚಿವ ಸ್ಥಾನ ತಪ್ಪಿಸಲು ಪಿತೂರಿ: ತನಗೆ ಸಚಿವ ಸ್ಥಾನ ದೊರೆಯುವುದನ್ನು ತಪ್ಪಿಸಲು ಸ್ವಾತಂತ್ರ ಹೋರಾಟಗಾರರು, ಕೆಲವು ಬುದ್ಧಿಜೀವಿಗಳು ಹಾಗೂ ಮಾಧ್ಯಮದವರು ಸಂಚು ನಡೆಸಿದರು. ಅವರಿಗೆ ಅಭಿನಂದನೆಗಳು ಎಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಡಿ.ಕೆ. ಶಿವಕುಮಾರ್ ಕಟಕಿಯಾಡಿದರು.

ವೆಬ್ದುನಿಯಾವನ್ನು ಓದಿ