ಶಿವಾಜಿ-ಚಿತ್ರಮಂದಿರಗಳತ್ತ ತೆರಿಗೆಇಲಾಖೆ

ಇಳಯರಾಜ

ಮಂಗಳವಾರ, 19 ಜೂನ್ 2007 (12:40 IST)
ನಗರದ ವಿವಿಧ ಚಿತ್ರಮಂದಿರಗಳಲ್ಲಿ ಬಿಡುಗಡೆಕಂಡಿರುವ ರಜನೀಕಾಂತ್ ಅಭಿನಯದ ಅದ್ದೂರಿ ಚಿತ್ರ ಶಿವಾಜಿಯ ಮೇಲೆ ಈ ಆದಾಯ ತೆರಿಗೆ ಅಧಿಕಾರಿಗಳ ಕಣ್ಣು ಬಿದ್ದಿದೆ.

ತುಂಬಿದ ಗೃಹಗಳಿಂದ ಪ್ರದರ್ಶನ ಕಾಣುತ್ತಿರುವ ಈ ಚಿತ್ರದಿಂದಾಗಿ ಪ್ರತಿ ಚಿತ್ರಮಂದಿರ ದಿನಕ್ಕೆ 1 ಲಕ್ಷ ಆದಾಯ ಸಂಪಾದಿಸುತ್ತಿದೆ. ಇದರಿಂದಾಗಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಭಾರೀ ಮೊತ್ತದ ಮನರಂಜನಾ ತೆರಿಗೆಯನ್ನು ಸಂಗ್ರಹಿಸಲು ಮುಂದಾಗಿದ್ದಾರೆ.

ಕನ್ನಡೇತರ ಚಲನಚಿತ್ರ ಪ್ರದರ್ಶಿಸುವ ಚಲನಚಿತ್ರ ಮಾಲೀಕರು, ಟಿಕೆಟ್ ಮುಖಬೆಲೆಯನ್ನು ಆಧರಿಸಿ ಶೇ 40 ಮನರಂಜನಾ ತೆರಿಗೆಯನ್ನು ಪಾವತಿಸುವುದು ಕಡ್ಡಾಯವಾಗಿದೆ ಎಂದು ಮನರಂಜನಾ ತೆರಿಗೆಯ ಹಿರಿಯ ಅಧಿಕಾರಿಗಳು ನಮ್ಮ ಪ್ರತಿನಿಧಿಗೆ ತಿಳಿಸಿದ್ದಾರೆ.

ಈ ಹಿಂದೆ ಟೆಂಟ್ ಗಳಾಗಿದ್ದು ಇದೀಗ ಚಿತ್ರಮಂದಿರಗಳಾಗಿ ಪರಿವರ್ತನೆಗೊಂಡಿರುವ ಚಿತ್ರಮಂದಿರಗಳ ಮಾಲೀಕರು ತೆರಿಗೆಯನ್ನು ವಂಚಿಸುವಲ್ಲಿ ನಿಸ್ಸೀಮರು. ಆದ್ದರಿಂದ ಚಿತ್ರಮಂದಿರದ ಗಳಿಕೆಯನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ