ಶ್ವೇತವರ್ಣದ ಸುಂದರಿಯನ್ನು ನೋಡಲು ಹರಿದುಬಂದ ಜನಸಾಗರ

ಭಾನುವಾರ, 27 ಅಕ್ಟೋಬರ್ 2013 (17:27 IST)
PR
PR
ವೀರಾಜಪೇಟೆ: ವೀರಾಜಪೇಟೆಯ ಗೋಣಿಕೊಪ್ಪದಲ್ಲಿ ಅಪರೂಪದ ಉರಗವೊಂದು ಪತ್ತೆಯಾಗಿದೆ. ಇದು ಶ್ವೇತವರ್ಣದ ಸರ್ಪ. ಈ ಅಪರೂಪದ ಹಾವು ಬಿಳುಪಿನಿಂದ ಹೊಳೆಯುತ್ತಿತ್ತು. ಇಂತಹ ಹಾವುಗಳು ಕಾಣಿಸುವುದು ಬಹಳ ವಿರಳವೆಂದು ಹೇಳಲಾಗಿದ್ದು, ಇದನ್ನು ಮೈಸೂರು ಮೃಗಾಲಯಕ್ಕೆ ನೀಡಬೇಕು ಎಂದು ಉರಗತಜ್ಞ ಹೇಳಿದ್ದಾರೆ. ಉರಗನೋಡಲು ಜನಸಾಗರವೇ ಹರಿದುಬಂದಿತ್ತು. ನಂತರ ಉರಗತಜ್ಞರು ಹಾವಿಗೆ ನೋವಾಗದಂತೆ ಅದನ್ನು ಹಿಡಿದು ಚೀಲದೊಳಕ್ಕೆ ತುಂಬಿದರು. ಬಿಳಿಯ ಸರ್ಪ ಅತ್ಯಂತ ವಿಷಕಾರಿ ಹಾವೆಂದು ಹೇಳಲಾಗುತ್ತಿದೆ.

ಬಿಳಿಯ ಸರ್ಪ ಉರಗ ಪ್ರಬೇಧಗಳಲ್ಲಿ ಅತ್ಯಂತ ವಿಷಕಾರಿ ಎಂದು ಹೇಳಲಾಗುತ್ತಿದೆ. ಇದು ಕಾಡಿನಲ್ಲಿ ಕೂಡ ಕಂಡುಬರದ ಅಪರೂಪದ ಪ್ರಾಣಿಯಾಗಿದ್ದು, ಜಗತ್ತಿನ ಕೆಲವು ಕಡೆ ಮಾತ್ರ ವಾಸಿಸುತ್ತವೆ. ಬಿಳಿಯ ಸರ್ಪ ಮಾಯೆಯ ಶಕ್ತಿಗಳನ್ನು ಹೊಂದಿದೆಯೆಂಬ ಐತಿಹ್ಯವಿದೆ. ಮಾನವನನ್ನು ಕೆಲವೇ ನಿಮಿಷಗಳಲ್ಲಿ ಕೊಲ್ಲುವಷ್ಟು ಶಕ್ತಿಯನ್ನು ಇದು ಹೊಂದಿದೆ.

ವೆಬ್ದುನಿಯಾವನ್ನು ಓದಿ