ಸದನದಲ್ಲಿ ಕೋಲಾಹಲ... ವಾಗ್ಯುದ್ಧಕ್ಕೆ ಸಾಕ್ಷಿಯಾದ ಸುವರ್ಣಸೌಧ... ಬಿಜೆಪಿ ಕಾಂಗ್ರೆಸ್‌ ಜಟಾಪಟಿ.

ಗುರುವಾರ, 28 ನವೆಂಬರ್ 2013 (11:44 IST)
PR
PR
ಸುವರ್ಣಸೌಧ ಇದೀಗ ಅಕ್ಷರಶಃ ಮಾತಿನ ರಣರಂಗವಾಗಿದೆ. ರೈತನ ಸಾವನ್ನು ಪ್ರಮುಖ ಅಸ್ತ್ರವಾಗಿಸಿಕೊಂಡಿರುವ ಪ್ರತಿಪಕ್ಷಗಳು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿ ಹಾಯ್ದಿವೆ. ಕಪ್ಪುಪಟ್ಟಿಯನ್ನು ಧರಿಸಿಕೊಂಡೇ ಸದನಕ್ಕೆ ಎಂಟ್ರಿ ಕೊಟ್ಟ ಬಿಜೆಪಿ ಮುಖಂಡರು ಸಿದ್ರಾಮಯ್ಯನವರ ವಿರುದ್ಧ ಪ್ರತಿಭಟನೆಯನ್ನು ಆರಂಭಿಸಿದ್ರು. ಇದರಿಂದಾಗಿ ಸಿಟ್ಟಿಗೆದ್ದ ಸಿದ್ರಾಮಯ್ಯ ಮತ್ತು ಕಾಂಗ್ರೆಸ್‌ ಮುಖಂಡರು ಬಿಜೆಪಿಯ ನಡೆಯ ವಿರುದ್ಧ ಹರಿಹಾಯಲು ಶುರು ಮಾಡಿದ್ರು. ಇದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷದ ನಾಯಕರುಗಳ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ. ಸುವರ್ಣಸೌಧ ಇಂದು ಅತಿದೊಡ್ಡ ವಾಗ್ಯುದ್ಧಕ್ಕೆ ಸಾಕ್ಷಿಯಾಗಿದೆ.

ಈ ಕೂಡಲೇ ಸರ್ಕಾರ ರೈತರಿಗೆ ಸ್ಪಂದಿಸಬೇಕು. ಕಬ್ಬು ಬೆಳೆಗೆ ಸೂಕ್ತವಾದ ಬೆಂಬಲ ಬೆಲೆಯನ್ನು ನೀಡಬೆಕು. ಅಷ್ಟೇ ಅಲ್ಲ, ರೈತನ ಸಾವಿಗೆ ಕಾರಣವಾಗಿರುವ ಸಿದ್ರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು. ರೈತರಿಗೆ ಬೆಂಬಲ ಬೆಲೆ ನೀಡಿದ ನಂತರ ಮತ್ತು ಮುಖ್ಯಮಂತ್ರಿಗಳು ರಾಜಿನಾಮೆ ನೀಡಿದ ನಂತರ ನಮ್ಮ ಹೋರಾಟವನ್ನು ನಿಲ್ಲಿಸುತ್ತೇವೆ. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆರ್‌ ಅಶೋಕ್ ಹೇಳಿದ್ದಾರೆ.


ರೈತನ ಸಾವಿಗೆ ಕಾರಣವಾದ ಸಿದ್ರಾಮಯ್ಯನವರು ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ. ಬೆಳಗವಿಯ ಇತಿಹಾಸದಲ್ಲೇ ಇದೊಂದು ಅತ್ಯಂತ ದೊಡ್ಡ ಕಪ್ಪುಚುಕ್ಕೆ. ರೈತರ ಕಷ್ಟನಷ್ಟಗಳಿಗೆ ಸ್ಪಂದಿಸಬೇಕಿರುವ ಮುಖ್ಯಮಂತ್ರಿಗಳು, ತೋಳುಗಳನ್ನು ಮೇಲಕ್ಕೆತ್ತಿ ಮಾತನಾಡುತ್ತಾರೆ.. ಮದ ಬಂದಿದೆ ಸಿದ್ರಾಮಯ್ಯನವರಿಗೆ. ರೈತರನ್ನು ನಿರ್ಲಕ್ಷಿಸುತ್ತಿರುವ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯದಲ್ಲಿ ಗದ್ದಲ ಕೋಲಾಹಕಲ ಸೃಷ್ಟಿಯಾಗಿ, ಕಾನೂನು ಉಲ್ಲಂಘನೆಯಾದ್ರೆ ಅದಕ್ಕೆ ಮುಖ್ಯಮಂತ್ರಿಗಳೇ ನೇರವಾಗಿ ಹೊಣೆಯಾಗ್ತಾರೆ ಎಂದು ಬಿಜೆಪಿ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ