ಸಮಾಜವಾದಿಗೆ ಶಂಕರ್‌ ಬಿದರಿ ಗುಡ್‌ ಬೈ : ಯಡ್ಡಿ ಪಕ್ಷಕ್ಕೆ ಜಂಪ್‌?

ಬುಧವಾರ, 9 ಅಕ್ಟೋಬರ್ 2013 (12:40 IST)
PR
PR
ನಿವೃತ್ತ ಪೋಲೀಸ್ ಅಧಿಕಾರಿ ಶಂಕರ ಬಿದರಿಯವರು ಸಮಾಜವಾದಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಸಮಾಜವಾದಿ ಪಕ್ಷದಲ್ಲಿನ ಕೆಲವು ಒತ್ತಡಗಳಿಂದಗಿ ಶಂಕರ್‌ ಬಿದರಿಗೆ ಇರುಸು ಮುರುಸು ಉಂಟಾಗಿದ್ದರಿಂದ ಸಮಾಜವಾದಿ ಪಕ್ಷವನ್ನು ತೊರೆಯುತ್ತಿರುವುದಾಗಿ ಬಿದರಿ ಆಪ್ತ ಮೂಲಗಳು ತಿಳಿಸಿವೆ.

ಶಂಕರ್‌ ಬಿದರಿ ಪೋಲೀಸ್‌ ಕೆಲಸದಿಂದ ನಿವೃತ್ತಿ ಹೊಂದಿದ ನಂತರ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಆದ್ರೆ ಕಾಂಗ್ರೆಸ್‌ ಪಕ್ಷದಲ್ಲಿ ಅದೇನಾಯಿತೋ ಏನೋ.. ಕಾಂಗ್ರೆಸ್‌ ಪಕ್ಷವನ್ನು ತೊರೆದು ಸಮಾಜವಾದಿ ಪಕ್ಷವನ್ನು ಅಪ್ಪಿಕೊಂಡರು.
ದೇಶದಲ್ಲಿ ಉದ್ಭವಿಸಿರುವ ಈ ಎಲ್ಲಾ ಸಮಸ್ಯೆಗಳಿಗೆ ಸದ್ಯದ ಭ್ರಷ್ಟ ರಾಜಕೀಯ ಪಕ್ಷಗಳೇ ಕಾರಣ. ಆ ಎಲ್ಲಾ ಸಮಸ್ಯೆಗಳನ್ನು ಪರಿಹಾರಿಸಬೇಕೆಂದರೆ, ಸೈಕಲ್ ಒಂದೇ ಮಾರ್ಗ ಎಂದರು.

ಇನ್ನಷ್ಟು ಮಾಹಿತಿ ಮುಂದಿನ ಪುಟದಲ್ಲಿ....

PR
PR
ಆದರೆ ಇದೀಗ ಮತ್ತೆ ಏನಾಯಿತೋ ಏನೋ, ಸಮಾವಾದಿ ಪಕ್ಷದಿಂದ ಯಡ್ಯೂರಪ್ಪನವರ ಪಕ್ಷಕ್ಕೆ ಜಂಪ್ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಅಕ್ಟೋಬರ್‌ 12ರಂದು ಬೆಂಗಳೂರಿನಲ್ಲಿ ತಮ್ಮ ಬೆಂಬಲಿಗರ ಜೊತೆಗೆ ಸಭೆ ನಡೆಸಿ, ಯಡಿಯೂರಪ್ಪನವರ ಪಕ್ಷಕ್ಕೆ ಸೇರುವ ಇಂಗಿತವನ್ನು ಬಿದರಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಆದ್ರೆ ಇಲ್ಲಿ ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, ಸ್ವತಃ ಯಡ್ಯೂರಪ್ಪನವರೇ ತಮ್ಮ ಕೆಜೆಪಿ ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನಗೊಳಿಸಲು ಯತ್ನಿಸುತ್ತಿದ್ದಾರೆ. ಹೀಗಿರುವಾಗ ಶಂಕರ್‌ ಬಿದರಿಗೆ ಯಾವ ರೀತಿಯ ಸ್ಥಾನವನ್ನು ಒದಗಿಸಲಿದ್ದಾರೆ ಎಂಬುದು ಸದ್ಯದ ಪ್ರೆಶ್ನೆ.

ವೆಬ್ದುನಿಯಾವನ್ನು ಓದಿ