ಸರ್ಕಸ್ ತೋರಿಸುವ ನೆಪದಲ್ಲಿ ಮುಗ್ಧ ಬಾಲಕಿ ಮೇಲೆ ಅತ್ಯಾಚಾರ

ಸೋಮವಾರ, 31 ಮಾರ್ಚ್ 2014 (19:18 IST)
5 ವರ್ಷದ ಬಾಲಕಿಯನ್ನು ಸರ್ಕಸ್ ತೋರಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ದುಷ್ಕರ್ಮಿಯೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಗುಡಿಬಂಡೆ ತಾಲೂಕಿನ ಸೋಮೇಶ್ವರದಲ್ಲಿ ಈ ಘಟನೆ ನಡೆದಿದ್ದು, ಗುರುವಾರ ಸರ್ಕಸ್ ನಡೀತಿತ್ತು. ಹರೀಶ್ ಸರ್ಕಸ್ ತೋರಿಸುವುದಾಗಿ ಪಕ್ಕದ ಮನೆಯ 5 ವರ್ಷದ ಮುಗ್ಧ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ.

ಬಾಲಕಿಯ ಜತೆ ಹೋಗಿದ್ದನ್ನು ಒಬ್ಬ ಹುಡುಗ ನೋಡಿದ್ದು, ಹರೀಶ್ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾಗಿ ಹೇಳಿದ ಮೇಲೆ ವಿಷಯ ತಿಳಿದುಬಂತು. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಚಿಕ್ಕಬಳ್ಳಾಪುರಕ್ಕೆ ಕರೆದುಕೊಂಡು ಹೋಗಲಾಗಿದೆ.

ವೆಬ್ದುನಿಯಾವನ್ನು ಓದಿ