ಸರ್ಕಾರಕ್ಕೆ ತಪ್ಪದ ಸಂಕಷ್ಟ: 15 ಗ್ರಾಮಸಹಾಯಕರು ಅಸ್ವಸ್ಥರು

ಗುರುವಾರ, 28 ನವೆಂಬರ್ 2013 (15:08 IST)
PR
PR
ಬೆಳಗಾವಿ: ಬೆಳಗಾವಿ ಅಧಿವೇಶನವು ಸರ್ಕಾರಕ್ಕೆ ಒಂದಿಲ್ಲೊಂದು ತೊಂದರೆಗಳನ್ನು ಒಡ್ಡುತ್ತಿರುವಂತೆ ಕಂಡುಬಂದಿದೆ. ನಿನ್ನೆ ಕಬ್ಬು ಬೆಳೆಗಾರ ವಿಠಲ್ ಆತ್ಮಹತ್ಯೆಗೆ ಶರಣಾಗಿದ್ದರಿಂದ ಇಡೀ ಸುವರ್ಣ ಸೌಧ ಗದ್ದಲ ಗೊಂದಲದಲ್ಲಿ ಮುಳುಗಿತ್ತು. ಆದರೆ ಇಂದು 15 ಗ್ರಾಮಸಹಾಯಕರು ಅಸ್ವಸ್ಥತೆಗೆ ಒಳಗಾಗುವ ಮೂಲಕ ಸರ್ಕಾರಕ್ಕೆ ಸಂಕಷ್ಟ ಇನ್ನೂ ತಪ್ಪಿದಂತೆ ಕಾಣುತ್ತಿಲ್ಲ. ಗ್ರಾಮಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಲು ಒತ್ತಾಯಿಸಿ ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸಹಾಯಕರ ಪೈಕಿ ಓರ್ವ ಗ್ರಾಮಸಹಾಯಕ ಆತ್ಮಹತ್ಯೆಗೆ ಪ್ರಯತ್ನಿಸಿದರೆಂದು ತಿಳಿದುಬಂದಿದೆ. ಅಧಿವೇಶನಕ್ಕೆ ಬಿಸಿ ಮುಟ್ಟಿಸಲು ಸಾವಿರಾರು ಗ್ರಾಮಸಹಾಯಕರು ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸುತ್ತಿದ್ದರು.

ಹನುಮಂತ ತಳವಾರ್ ಎಂಬ ಗ್ರಾಮಸಹಾಯಕ ಇಂದು ಪ್ರತಿಭಟನೆ ಮುಗಿಸಿಕೊಂಡು ಮನೆಗೆ ಹೋಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಕಳೆದ 24 ರಿಂದ ಗ್ರಾಮಸಹಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೂರು ದಿನಗಳಿಂದ ಅನ್ನಸತ್ಯಾಗ್ರಹ ಮಾಡುತ್ತಿದ್ದು 15ಕ್ಕೂ ಹೆಚ್ಚು ಜನ ನಿಶ್ಯಕ್ತರಾಗಿ ಆಸ್ಪತ್ರೆ ಸೇರಿದ್ದಾರೆ. ಬೇರೆ ಬೇರೆ ಇಲಾಖೆಯಲ್ಲಿ ಕಾಯಂ ಮಾಡಿದ್ದಾರೆ. ಆದರೆ ಕಂದಾಯಇಲಾಖೆಯ ಗ್ರಾಮಸಹಾಯಕರಿಗೆ ಮಾತ್ರ ಡಿ ದರ್ಜೆ ನೌಕರರ ಸ್ಥಾನಮಾನ ನೀಡಬೇಕೆಂಬ ಬೇಡಿಕೆಗೆ ಸರ್ಕಾರ ಮನ್ನಣೆ ನೀಡುತ್ತಿಲ್ಲವೆಂದು ಗ್ರಾಮಸಹಾಯಕರು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ