ಸಿಂಡಿಕೇಟ್ ಬ್ಯಾಂಕ್ 716 ಕೋಟಿ ಲಾಭ

ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕ್ 2006-07 ನೇ ಸಾಲಿನಲ್ಲಿ 716 ಕೋಟಿ ಲಾಭ ಗಳಿಸಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಬ್ಯಾಂಕ್ ಅಧ್ಯಕ್ಷ ಸಿಪಿ ಸ್ವರ್ಣಕಾರ್ ಇದನ್ನು ಪ್ರಕಟಿಸಿದರು. ಬ್ಯಾಂಕ್ ತನ್ನ ಜಾಗತಿಕ ವ್ಯವಹಾರವನ್ನು 1,31, 473 ಕೋಟಿ ರೂಗಳಿಗೇರಿಸಿದೆ. ಅದು 1519 ಶಾಖೆಗಳನ್ನು ಸಿಬಿಎಸ್ ಜಾಲಕ್ಕೆ ಸೇರ್ಪಡೆಗೊಳಿಸಿದೆ.

2006 ಮಾರ್ಚ್ ಕೊನೆಯವಾರದಲ್ಲಿ 53, 624 ಕೋಟಿ ರೂ ಠೇವಣಿಯನ್ನು ,2007ನೇ ಸಾಲಿನ ಕೊನೆಯಲ್ಲಿ 78634 ಕೋಟಿಗೆ ಹೆಚ್ಚಿಸುವ ಮೂಲಕ ಶೇ 46.64 ವಾರ್ಷಿಕ ಪ್ರಗತಿ ಸಾಧಿಸಿದೆ.

ಈ ಸಾಲಿನಲ್ಲಿ ಬ್ಯಾಂಕ್‌ನಲ್ಲಿ 20 ಲಕ್ಷಕ್ಕೂ ಹೆಚ್ಚು ಖಾತೆದಾರರು ತಮ್ಮ ಖಾತೆಗಳನ್ನು ತೆರೆದಿದ್ದಾರೆ. ಬ್ಯಾಂಕ್ ಈ ಬಾರಿ ಶೇ 13 ಡಿವಿಡೆಂಡ್ ನೀಡಿದೆ.2007-08ನೇ ಸಾಲಿನಲ್ಲಿ ಹೊಸದಾಗಿ ತೆರೆಯಲಾಗುವ ಖಾತೆಗಳಿಂದ ಕಡಿಮೆ ವೆಚ್ಚದ ಠೇವಣಿಯಲ್ಲಿ ಏರಿಕೆ ಸಾಧಿಸಲಿದೆ ಎಂದು ಹೇಳಿದರು.

ಧಾರ್ಮಿಕ ಸೇವೆ : ತಿರುಪತಿ, ಸ್ವರ್ಣ ಮಂದಿರ, ಸಿದ್ಧಿವಿನಾಯಕ, ಪುರಿಯ ಜಗನ್ನಾಥ, ಮಂತ್ರಾಲಯ ಸೇರಿದಂತೆ ವಿವಿಧ ಧಾರ್ಮಿಕ ಮಂದಿರಗಳಿಗೆ ಭಕ್ತರ ಕಾಣಿಕೆಯನ್ನು ತಲುಪಿಸುವ ಸೇವೆಯಲ್ಲೂ ನಿರತವಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ