ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು, ಇಲ್ಲಿದೆ ಓದಿ

ಬುಧವಾರ, 27 ನವೆಂಬರ್ 2013 (19:49 IST)
PR
PR
ಬೆಳಗಾವಿ: ವಿಠಲ ಅರಭಾವಿ ಅವರು ಸಣ್ಣ ರೈತರಾಗಿದ್ದರು.ಅವರು ರಾಯಭಾಗ ತಾಲೂಕು ಕಂಕನವಾಡಿ ಗ್ರಾಮಕ್ಕೆ ಸೇರಿದವರು. ಅವರು ಸುಮಾರು 2 ಎಕರೆ 7 ಗುಂಟೆ ಜಮೀನು ಹೊಂದಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇವತ್ತು ಆತ್ಮಹತ್ಯೆ ಮಾಡಿಕೊಂಡು ಅವರ ಮರಣ ನಮ್ಮೆಲ್ಲರಿಗೂ ನೋವನ್ನು ಉಂಟುಮಾಡಿದೆ. ಇದು ನಡೆಯಬಾರದಂತ ದುರ್ಘಟನೆ. ಬಹಳ ವರ್ಷಗಳ ಕಾಲ ಬದುಕಿ ಬಾಳಬೇಕಾದವರು. ಮೂರುದಿನಗಳಿಂದ ರೈತ ಹೋರಾಟದಲ್ಲಿ ಭಾಗವಹಿಸಿದ್ದರು. ಇವತ್ತು ಒಂದು ಗಂಟೆಯಲ್ಲಿ ರೈತರನ್ನು ಉದ್ದೇಶಿಸಿ ಭಾಷಣ ಮಾಡಿ ಕ್ರಿಮಿನಾಶಕ ಸೇವಿಸಿದರು. ಆಸ್ಪತ್ರೆಗೆ ಸೇರಿಸಿದರೂ ಫಲಕಾರಿಯಾಗದೇ ಸತ್ತಿದ್ದಾರೆ. ಕಬ್ಬು ಬೆಳೆಗಾರರ ಹೋರಾಟ ಕುರಿತಂತೆ ನ್ಯಾಯಯುತವಾದ ಬೆಲೆ ಕೊಡಬೇಕು ಎನ್ನುವುದು ಅವರ ವಾದವಾಗಿತ್ತು.

ಇದೊಂದು ದುರದೃಷ್ಟಕರ ಘಟನೆ. ಈ ಸಂದರ್ಭದಲ್ಲಿ ಮೃತ ರೈತನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ನಮ್ಮ ಸರ್ಕಾರ ನೀಡುತ್ತದೆ. ರೈತರಿಗೆ ಸಕ್ಕರೆ ಮಾಲೀಕರು ಕೊಡುವ ಟನ್ನಿಗೆ 2500 ರೂ. ಬೆಲೆಯ ಜತೆಗೆ 150 ರೂ.ಗಳನ್ನು ಬೆಂಬಲ ಬೆಲೆಯಾಗಿ ಸರ್ಕಾರ ನೀಡುತ್ತದೆ ಎಂದು ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. 150 ರೂ. ಬೆಂಬಲ ಬೆಲೆ ನೇರವಾಗಿ ರೈತರಿಗೆ ಪಾವತಿಯಾಗುತ್ತದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ