ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಮುಖ್ಯಾಂಶಗಳು ಕೆಳಗಿವೆ ಓದಿ

ಶುಕ್ರವಾರ, 14 ಫೆಬ್ರವರಿ 2014 (13:42 IST)
PR
PR
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದಾಖಲೆಯ 9ನೇ ಬಜೆಟ್ ಮಂಡಿಸಿದ್ದು, ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಎರಡನೇ ಬಜೆಟ್ ಆಗಿದೆ. ಬಜೆಟ್‌ನ ಆರಂಭದಲ್ಲಿ ಸಿಎಂ ಹೇಳಿದ ಮಾತುಗಳನ್ನು ಕೆಳಗೆ ಕೊಟ್ಟಿವೆ ಓದಿ ನೋಡಿ-ಸನ್ಮಾನ್ಯ ಸಭಾಧ್ಯಕ್ಷರೇ ನಾನು 2004-15ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸುತ್ತಿದ್ದೇನೆ. ಆಯವ್ಯಯ ಪತ್ರವೆಂದರೆ ಸರ್ಕಾರದ ಒಳನೋಟವನ್ನು ಬಿಂಬಿಸುತ್ತದೆ. ಆಯವ್ಯಯ ಪತ್ರವು ಸರ್ವಾಂಗೀಣ ಅಭಿವೃದ್ಧಿಯ ಆಶಯ ಪತ್ರವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ನಾವು ಭರವಸೆಯ ಸರ್ಕಾರ ನೀಡುವ ಆಶ್ವಾಸನೆ ನೀಡಿದ್ದೆವು. ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ.

ಕಳೆದ ಬಾರಿ ಬಜೆಟ್‌ನಲ್ಲಿ ಹಲವಾರು ಜನಪ್ರಿಯ ಯೋಜನೆಗಳನ್ನು ಮಂಡಿಸಿದ್ದೆವು. ಅನ್ನಭಾಗ್ಯ, ಭಾಗ್ಯಜ್ಯೋತಿ ಯೋಜನೆ, ರೈತರ ಬೆಳೆಗಳಿಗೆ ಯೋಗ್ಯ ಬೆಳೆ ನಿಗದಿಪಡಿಸಿದ್ದೇವೆ. ರೈತರಿಗೆ ಬಡ್ಡಿರಹಿತ 2 ಲಕ್ಷ ರೂ. ಸಾಲ ನೀಡುತ್ತಿದ್ದೇವೆ. ಗುಡಿಸಲು ರಹಿತ ರಾಜ್ಯದ ನಿಟ್ಟಿನಲ್ಲಿ 2.2 ಲಕ್ಷ ಮನೆಗಳನ್ನು ನಿರ್ಮಿಸಿದ್ದೇವೆ. ಸ್ವಾವಲಂಬಿ ಬದುಕಿಗೆ ಶಿಕ್ಷಣ, ದುಡಿಯುವ ಕೈಗಳಿಗೆ ಉದ್ಯೋಗ ಇವು ಸರ್ಕಾರದ ಆಶಯಗಳಾಗಬೇಕು ಎಂದು ಸರ್ಕಾರ ನಿರ್ಧರಿಸಿದೆ.

ಈ ಮೂಲಕ ಸುಖ, ಶಾಂತಿ ನೆಮ್ಮದಿಯ ಬಲಿಷ್ಠ ಕರ್ನಾಟಕವನ್ನು ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಸಂಕಷ್ಟಗಳ ನಡುವೆಯೂ ಅಗತ್ಯ ಅನುದಾನ ನೀಡಿರುವುದು ಸಮರ್ಥ ಆಡಳಿತಕ್ಕೆ ಸಾಕ್ಷಿಯಾಗಿದೆ. ರಾಜೀವ್ ಗಾಂಧಿ ಆರೋಗ್ಯ ಶ್ರೀ ಯೋಜನೆ, ಮಾಹಿತಿ ತಂತ್ರಜ್ಞಾನದ ಹೊಸ ನೀತಿ ಜಾರಿಗೊಂಡಿದೆ. ಜನರಿಗೆ ನೀಡಿದ್ದ ಬಹುತೇಕ ವಾಗ್ದಾನವನ್ನು ಈಡೇರಿಸಿದ್ದೇವೆ ಎಂದು ಸಿಎಂ ಹೇಳಿದರು.

PR
PR
ಸಿಎಂ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಮುಖ್ಯಾಂಶಗಳು ಕೆಳಗಿನಂತಿವೆ:
* 2014-15ನೇ ಸಾಲಿನ ಬಜೆಟ್ ಗಾತ್ರ 1,38.008 ಕೋಟಿ ರೂ.
* ಯೋಜನಾ ಗಾತ್ರ 37.75ರಷ್ಟು ಹೆಚ್ಚಳವಾಗಿದೆ.
* ಇಂಧನ ಕ್ಷೇತ್ರ 11,693 ಕೋಟಿ ರೂ. ಮೀಸಲು ,
* ಕಂದಾಯ ಇಲಾಖೆಗೆ 4293 ಕೋಟಿ ರೂ.
* ಯೋಜನಾ ಗಾತ್ರ 65, 600 ಕೋಟಿ ರೂ.
* ಬೆಳೆ ವಿಮೆ ಯೋಜನೆಗೆ 222.23 ಕೋಟಿ ರೂ.

* ಬೆಳೆ ವಿಮೆ ನಷ್ಟ ಪರಿಹಾರಕ್ಕೆ 222. 23 ಕೋಟಿ ರೂ.
* ಕೃಷಿ ಸಾಲಕ್ಕೆ 650 ಕೋಟಿ ರೂ. ಅನುದಾನ,
* 2 ಲಕ್ಷ ರೂ. ಬಡ್ಡಿ ರಹಿತ ಸಾಲ,
* ಶೇ.1ರ ದರಲ್ಲಿ 2ರಿಂದ 3 ಲಕ್ಷ ಕೃಷಿ ಸಾಲ.
* ಕೃಷಿ ಸಾಲಕ್ಕೆ 650 ಕೋಟಿ ಅನುದಾನ.
* 3ರಿಂದ 10 ಲಕ್ಷದವರೆಗೆ ಶೇ. 3ರ ಬಡ್ಡಿದರದಲ್ಲಿ ಸಾಲ.

PR
PR
* ಪಶು ಸಂಗೋಪನೆಗೆ 1979 ಕೋಟಿ ರೂ.
* ಇಂಧನ ಕ್ಷೇತ್ರಕ್ಕೆ 11, 693 ಕೋಟಿ ರೂ.
* ಉನ್ನತ ಶಿಕ್ಷಣಕ್ಕೆ 3880 ಕೋಟಿ ರೂ. ಅನುದಾನ,
* ಶಿಕ್ಷಣ ಕ್ಷೇತ್ರಕ್ಕೆ 21, 350 ಕೋಟಿ.
* ಮೈಸೂರು, ಬೆಳಗಾವಿ, ಗುಲ್ಬರ್ಗಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ. ಹಿರಿಯ ನಾಗರಿಕರಿಗೆ ಉಚಿತ ಕೃತಕ ದಂತಪಂಕ್ತಿಗೆ 2 ಕೋಟಿ,
* ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ವೈದ್ಯಕೀಯ ಕಾಲೇಜು,

* ಕಾರವಾರದಲ್ಲಿ ಕೇಂದ್ರೀಯ ವಿ.ವಿ. ಸ್ಥಾಪನೆ,
* ಎಥನಾಲ್ ಮೇಲಿನ ತೆರಿಗೆ ವಿನಾಯಿತಿ,
* ಬಿಯರ್ ಮೇಲಿನ ಅಬ್ಕಾರಿ ಸುಂಕ 122ರಿಂದ 135ಕ್ಕೆ ಏರಿಕೆ,
* ಭತ್ತ, ಗೋಧಿ, ಬೇಳೆಕಾಳು ಮೇಲಿನ ತೆರಿಗೆ ವಿನಾಯಿತಿ,
* ಅಬ್ಕಾರಿ ಇಲಾಖೆಗೆ 14,400 ಕೋಟಿ ರಾಜಸ್ವ ಗುರಿ,
* ಸುಗಂಧಿತ ಅಡಿಕೆ ಪುಡಿಯ ಮೇಲಿನ ತೆರಿಗೆ 14.5ರಿಂದ 5.5ಕ್ಕೆ ಇಳಿಕೆ.
* ಕೃಷಿ ಭಾಗ್ಯ ಯೋಜನೆ 23 ಜಿಲ್ಲೆಗಳಲ್ಲಿ ಜಾರಿಗೆ.
* ಮೊಬೈಲ್ ಸಂದೇಶದ ಮೂಲಕ ಹವಾಮಾನ ವರದಿ.

PR
PR
21 ಜಿಲ್ಲೆಗಳಲ್ಲಿ ಹಾಪ್‌ಕಾಮ್ಸ್ ಮಾರಾಟ ಕೇಂದ್ರ.
ಮನೆ, ನಿವೇಶನ, ಜಮೀನು ನೋಂದಣಿ ಶುಲ್ಕ ಹೆಚ್ಚಳ.
ನೋಂದಣಿ ಮಿತಿ 5 ಲಕ್ಷದಿಂದ 7.5 ಲಕ್ಷ ರೂಗೆ ಏರಿಕೆ.
ರಾಜ್ಯದಲ್ಲಿ 178 ಪ್ರೌಢಶಾಲೆ ಆರಂಭ.
ಉನ್ನತ ಶಿಕ್ಷಣಕ್ಕೆ 3880 ಕೋಟಿ ಅನುದಾನ,
30 ವಿಜ್ಞಾನ ಕಾಲೇಜುಗಳು ಮೇಲ್ದರ್ಜೆಗೆ,
ತಲಾ 2 ಕೋಟಿ ರೂ. ವೆಚ್ಚದಲ್ಲಿ ಮಾದರಿ ವಿಜ್ಞಾನ ಕಾಲೇಜು.
ಕುರಿ, ಮೇಕೆ ಸತ್ತರೆ 5000 ರೂ. ಪರಿಹಾರ ಧನ.
ಬಸವಾದಿ ಶರಣದ ವಚನ ಸಾಹಿತ್ಯ ತಿಳಿಸಲು ಒಂದು ಕೋಟಿ ರೂ. ಶಿಕ್ಷಣ ಕ್ಷೇತ್ರಕ್ಕೆ 23,305 ಕೋಟಿ ರೂ.ನಿಗದಿ,

ಮಧ್ಯಮಾರಾಟದ ಮೇಲೆ ಶೇ.55ರಷ್ಟು ಮೌಲ್ಯವರ್ಧಿತ ತೆರಿಗೆ,
ನಿವೃತ್ತ ಪತ್ರಕರ್ತರ ಪಿಂಚಣಿ 3 ಸಾವಿರದಿಂದ 6 ಸಾವಿರ ರೂ.ಗೆ ಏರಿಕೆ. ಪತ್ರಕರ್ತರಿಗೆ ಆರೋಗ್ಯ ವಿಮಾ ಯೋಜನೆ.
ಕರ್ತವ್ಯ ನಿರತ ಪೇದೆ ಮೃತಪಟ್ಟರೆ 30 ಲಕ್ಷ ರೂ.
ಅತ್ಯಾಚಾರದಂತ ಅಪರಾಧ ತಡೆಗೆ ತ್ವರಿತಗತಿ ಕೋರ್ಟ್.
10 ತ್ವರಿತಗತಿ ಕೋರ್ಟ್ ಸ್ಥಾಪನೆಗೆ ಅನುಮೋದನೆ.
ನಗರಪ್ರದೇಶಗಳಿಗೂ ಯಶಸ್ವಿನಿ ಯೋಜನೆ ವಿಸ್ತರಣೆ
ಸ್ತ್ರೀ ಸಹಕಾರಿ ಪ್ರೋತ್ಸಾಹಕ್ಕೆ ಪ್ರಿಯದರ್ಶಿನಿ ಯೋಜನೆ
ಆಶಾಕಿರಣ ಯೋಜನೆಗೆ ಒಂದು ಕೋಟಿ ರೂ. ಮೀಸಲು
ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ಪನ್ನ ಮಾರಾಟ

ವೆಬ್ದುನಿಯಾವನ್ನು ಓದಿ