ಸುರೇಶ್ ಅಂಗಡಿ, ಹೆಬ್ಬಾಲ್‌ಕರ್- ವಿಜಯಮಾಲೆ ಯಾರ ಕೊರಳಿಗೆ?

ಮಂಗಳವಾರ, 8 ಏಪ್ರಿಲ್ 2014 (19:16 IST)
PR
PR
ಬಿಜೆಪಿಯ ಸುರೇಶ್ ಸಿ ಅಂಗಡಿ ಮತ್ತು ಕಾಂಗ್ರೆಸ್‌ನ ಲಕ್ಷ್ಮಿ ಆರ್. ಹೆಬ್ಬಾಲ್‌ಕರ್ ಪ್ರತಿಷ್ಠಿತ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇಬ್ಬರೂ ಲಿಂಗಾಯತ ಮುಖಂಡರಾಗಿದ್ದು, ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ರೋಚಕ ಫಲಿತಾಂಶ ನೀಡಬಹುದೆಂದು ಭಾವಿಸಲಾದ ಈ ಕ್ಷೇತ್ರದಲ್ಲಿ ಇಬ್ಬರ ನಡುವೆ ಹಣಾಹಣಿ ಹೋರಾಟವಿದೆ. ಸುವರ್ಣ ವಿಧಾನ ಸೌಧ ಸ್ಥಾಪನೆಯಿಂದ ಈ ಕ್ಷೇತ್ರವು ಮಹತ್ವ ಪಡೆದಿದೆ. ಎರಡು ಬಾರಿ ಸಂಸತ್ ಸದಸ್ಯರಾಗಿದ್ದ ಅಂಗಡಿ ತಮ್ಮ ಉದ್ಯಮಗಳ ವಿಸ್ತರಣೆಗೆ ಮತ್ತು ವೃತ್ತಿಪರ ಕಾಲೇಜುಗಳ ನಿರ್ಮಾಣಕ್ಕೆ ತಮ್ಮ ಪ್ರಭಾವ ಬಳಸಿಕೊಂಡರೆಂಬ ದೂರು ಕೇಳಿಬಂದಿದೆ.

ಕ್ಷೇತ್ರದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ಸಲ್ಲಿಸದ ಅವರು ಸಹಜವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.ಕ್ಷೇತ್ರದ 8 ವಿಧಾನಸಭೆ ವಿಭಾಗಗಳ ಪೈಕಿ ಕೆಜೆಪಿ ಬಿಜೆಪಿಯೊಂದಿಗೆ ವಿಲೀನಗೊಂಡ ಬಳಿಕ ಬಿಜೆಪಿ ಬಲವು 3ರಿಂದ ನಾಲ್ಕಕ್ಕೆ ಹೆಚ್ಚಿದೆ(ಬೆಳಗಾಂ ಗ್ರಾಮಾಂತರ, ಸೌಂದತ್ತಿ ಯಲ್ಲಮ್ಮ, ಅರಭಾವಿ ಮತ್ತು ಬೈಲಹೊಂಗಲ). ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳು ಗೋಕಾಕ್, ಬೆಳಗಾಂ ಉತ್ತರ ಮತ್ತು ರಾಮದುರ್ಗ. ಬೆಳಗಾಂ ದಕ್ಷಿಣದಲ್ಲಿ ಪಕ್ಷೇತರ ಅಭ್ಯರ್ಥಿಯಿದ್ದಾರೆ.

PR
PR
ಬೆಳಗಾಂ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಹೆಬ್ಬಾಲ್‌ಕರ್ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬೆಳಗಾಂ ಗ್ರಾಮಾಂತರದಿಂದ ಸೋತಿದ್ದರು. ಕ್ಷೇತ್ರದ ಬೆಳವಣಿಗೆಗೆ ಅವರ ಕೊಡುಗೆ ಹೇಳಿಕೊಳ್ಳುವಂತದ್ದು ಏನೂ ಇಲ್ಲ.ಕೆಲವು ವಿವಾದಾತ್ಮಕ ಕಾಂಗ್ರೆಸ್ ಮುಖಂಡರ ಜತೆ ಅವರ ಸಾಮೀಪ್ಯ ಲಿಂಗಾಯತರಿಗೆ ಸಹಿಸಲು ಸಾಧ್ಯವಾಗಿಲ್ಲ.ಕಾಂಗ್ರೆಸ್ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ನೆಚ್ಚಿಕೊಂಡಿದ್ದು, ಮಹಿಳೆಯನ್ನು ಕಣಕ್ಕಿಳಿಸುವ ಮೂಲಕ ಲಾಭ ಪಡೆಯಲು ಯತ್ನಿಸಿದೆ. ನರೇಂದ್ರ ಮೋದಿ ಜಾತ್ಯತೀತ ಚೌಕಟ್ಟಿಗೆ ಬೆದರಿಕೆ ಎಂಬಂತೆ ಬಿಂಬಿಸುತ್ತಿದ್ದಾರೆ.

ಜೆಡಿಎಸ್ ನಾಸಿರ್ ಭಗ್ವಾನ್ ಅವರನ್ನು ಕಣಕ್ಕಿಳಿಸಿದ್ದು, ಕ್ಷೇತ್ರದ ಭಗ್ವಾನ್ ಸಮುದಾಯವನ್ನು ನೆಚ್ಚಿಕೊಂಡಿದೆ. ಕುಮಾರಸ್ವಾಮಿ ಜನಪ್ರಿಯತೆ ಕೂಡ ಸ್ವಲ್ಪ ಮಟ್ಟಿಗೆ ನೆರವಾಗಬಹುದು.ಆಮ್ ಆದ್ಮಿ ಪಕ್ಷವು ಯುವ ಸಾಮಾಜಿಕ ಕಾರ್ಯಕರ್ತನನ್ನು ಕಣಕ್ಕಿಳಿಸುವ ಮೂಲಕ ತನ್ನ ಉಪಸ್ಥಿತಿಯನ್ನು ಸಾರಿದೆ. ಕೆಲಸ ನಿರ್ವಹಿಸದೇ ನಿಷ್ಕ್ರಿಯವಾಗುಳಿದ ಬಗ್ಗೆ ಜನ ವಿರೋಧಿ ಅಲೆ ಎದುರಿಸುತ್ತಿರುವ ಅಂಗಡಿಗೆ ಮೋದಿ ಅಲೆ ನೆರವಾಗಬಹುದು. ಹೆಬ್ಬಾಲ್‌ಕರ್ ಭವಿಷ್ಯ ಸ್ಪಷ್ಟವಾಗಿ ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರ ಬೆಂಬಲದ ಮೇಲೆ ನಿಂತಿದೆ. ದೊಡ್ಡ ಸಂಖ್ಯೆಯ ಮರಾಠಿ ಮತದಾರರು ಕೂಡ ಫಲಿತಾಂಶವನ್ನು ತಲೆಕೆಳಗು ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ