ಸುಳ್ಯದಲ್ಲಿ ಯೋಗೀಶ್ ಭಟ್ ಕಾರು ಪಲ್ಟಿ; ಅಪಾಯದಿಂದ ಪಾರು

ಭಾನುವಾರ, 18 ಡಿಸೆಂಬರ್ 2011 (12:37 IST)
PR
ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಕಾರಿನಲ್ಲಿ ಮೈಸೂರಿನತ್ತ ವಿಧಾನಸಭೆ ಉಪಾಧ್ಯಕ್ಷ ಯೋಗೀಶ್ ಭಟ್ ಮತ್ತು ಕುಟುಂಬಿಕರು ತೆರಳುತ್ತಿದ್ದ ಸಂದರ್ಭದಲ್ಲಿ ಕಾರು ಪಲ್ಟಿ ಹೊಡೆದ ಘಟನೆ ಸುಳ್ಯದ ಪೆರಾಜೆ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಶಾಸಕ ಯೋಗೀಶ್ ಭಟ್ ಅವರ ಪತ್ನಿ ವಿಜಯಾ ಭಟ್ ಅವರಿಗೆ ಗಂಭೀರ ಗಾಯವಾಗಿದೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿನತ್ತ ಇವರು ಕಾರಿನಲ್ಲಿ ತೆರಳುತ್ತಿದ್ದರು. ಕಾರಿನಲ್ಲಿ ಆರು ಮಂದಿ ಇದ್ದಾರೆನ್ನಲಾಗಿದೆ.

ವೇಗವಾಗಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿತ್ತು. ಸ್ಥಳೀಯರು ಕಾರಿನ ಗಾಜನ್ನು ಒಡೆದು ಒಳಗಿದ್ದವರನ್ನು ಹೊರ ತಗೆಯಲಾಯಿತು ಎಂದು ಮೂಲಗಳು ತಿಳಿಸಿವೆ. ಭಟ್ ಸೇರಿದಂತೆ ಕೆಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ