ಸೋನಿಯಾ-ಸಿಂಗ್ ವ್ಯಂಗ್ಯ ಚಿತ್ರ ರಚಿಸಿ 1 ಲಕ್ಷ ಗೆಲ್ಲಿ!

ಬುಧವಾರ, 30 ಸೆಪ್ಟಂಬರ್ 2009 (19:22 IST)
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ವ್ಯಂಗ್ಯಚಿತ್ರ ರಚಿಸಲು ಭಾರತೀಯ ವ್ಯಂಗ್ಯ ಚಿತ್ರ ಕಲಾವಿದರ ಸಂಸ್ಥೆ ಹಾಗೂ ವಿ.ಆರ್.ದೇಶಪಾಂಡೆ ಸ್ಮಾರಕ ಟ್ರಸ್ಟ್ ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರ ಸ್ವರ್ಧೆಯನ್ನು ಆಯೋಜಿಸಿದೆ.

ಸಂಸ್ಥೆಯ ಮುಖ್ಯಸ್ಥ ನರೇಂದ್ರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಮನಮೋಹನ್ ಸಿಂಗ್ ಮತ್ತು ಸೋನಿಯ ಗಾಂಧಿಯವರ ಅತ್ಯುತ್ತಮ ವ್ಯಂಗ್ಯಚಿತ್ರಗಳಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಲಭಿಸಲಿದೆ. 2ನೇ ಬಹುಮಾನ 50,000 ರೂ, 3ನೇ ಬಹುಮಾನ 10,000 ರೂ ಮತ್ತು 5000 ರೂಗಳ 3 ಸಮಾಧಾನಕರ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೃತ್ತಿ ಪರ ಹಾಗೂ ಆಸಕ್ತ ವ್ಯಂಗ್ಯಚಿತ್ರಗಾರರು ಇದರಲ್ಲಿ ಭಾಗವಹಿಸಬಹುದು. ಕಲಾವಿದರು ಕ್ಯಾರಿಕೇಚರ್‌ಗಳನ್ನು ಕಳುಹಿಸುವ ಕೊನೆ ದಿನಾಂಕ ನವೆಂಬರ್ 15.

ಉತ್ತಮ ವ್ಯಂಗ್ಯಚಿತ್ರ ಆಯ್ಕೆ ಮಾಡಲು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಡಾ|ಯು .ಆರ್ ಅನಂತಮೂರ್ತಿ ಸೇರಿದಂತೆ 4 ಸದಸ್ಯರ ಆಯ್ಕೆ ಮಂಡಳಿ ರಚಿಸಲಾಗಿದೆ. ಆಯ್ಕೆಯಾದ ಕ್ಯಾರಿಕೇಚರ್‌ಗಳನ್ನು ಮುಂಬೈ, ದಿಲ್ಲಿ ಮುಂತಾದ ಕಡೆ ಪ್ರರ್ದಶನ ಏರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ