ಸೌಜನ್ಯಾ ಸಾವಿಗೆ ಸಂತೋಷನೇ ಕಾರಣ, ಹೆಗ್ಗಡೆ ಕುಟುಂಬದವರಲ್ಲ : ಸಿಐಡಿ

ಗುರುವಾರ, 31 ಅಕ್ಟೋಬರ್ 2013 (17:57 IST)
PR
PR
ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಿಐಡಿ ತನಿಖಾ ವರದಿ ಇದೀಗ ಮುಖ್ಯಮಂತ್ರಿಗಳ ಕೈ ಸೇರಿದೆ. ಸಿಐಡಿ ಅಧಿಕಾರಿಗಳು ಸಲ್ಲಿಸಿರುವ ಈ 12 ಪುಟಗಳ ತನಿಖಾ ವರದಿಯಲ್ಲಿ ಪ್ರಮುಖವಾಗಿ ಕಂಡುಬಂದಿರುವ ವಿಷಯವೆಂದರೆ, "ಸೌಜನ್ಯಾಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಸಂತೋಷ್‌. ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬಕ್ಕೂ ಸೌಜನ್ಯ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ" ಎಂದು ವರದಿಯಲ್ಲಿ ತಿಳಿಸಿದೆ.

ಉಜಿರೆಯ ಎಸ್ ಡಿಎಂ ವಿದ್ಯಾರ್ಥಿನಿ ಸೌಜನ್ಯಳನ್ನು ಒಂದು ವಷ್ದ ಹಿಂದೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತು. ಈ ತನಿಖೆ ಒಂದು ವರ್ಷದಿಂದಲೂ ನಿಗೂಢವಾಗಿಯೇ ಉಳಿದಿತ್ತು. ಆದ್ರೆ ಪ್ರಗತಿಪರ ಸಂಘಟನೆಗಳು ಈ ಬಗ್ಗೆ ದೊಡ್ಡ ಮಟ್ಟದ ಹೋರಾಟ ಮಾಡಿದ್ದರಿಂದ ರಾಜ್ಯ ಸರ್ಕಾರ ಈ ಕೇಸಿನ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಸೌಜನ್ಯಾಳ ಅತ್ಯಾಚಾರ ಪ್ರಕರಣದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ತಮ್ಮನ ಮಗ ನಿಶ್ಚಲ್‌ ಜೈನ್‌ ಕೂಡ ಭಾಗಿಯಾಗಿದ್ದ ಎಂಬ ಶಂಕೆ ವ್ಯಕ್ತವಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಸೌಜನ್ಯ ಹತ್ಯೆ ಮಾಡಿರೋದು ಸಂತೋಷ್ ಕುಮಾರನೇ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ತಮ್ಮನ ಮಗ ನಿಶ್ಚಲ್ ಜೈನ್ ಕೊಲೆ ನಡೆದ ದಿನ ಭಾರತದಲ್ಲೇ ಇರಲಿಲ್ಲ. ನಿಶ್ಚಲ್‌ ಜೈನ್‌ ವಿದೇಶದಲ್ಲಿ ಇದ್ದುದಾಗಿ ಸಾಕ್ಷಾಧಾರಗಳಿಂದ ತಿಳಿದು ಬಂದಿದೆ. ನಿಶ್ಚಲ್ ಜೈನ್ ಆರೋಪಿ ಎಂಬುದರ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದು ಸಿಐಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವೆಬ್ದುನಿಯಾವನ್ನು ಓದಿ