ಸ್ನಾನದ ದೃಶ್ಯ ವಿಡಿಯೋ ಮಾಡಿದ ತಂದೆ:ನೊಂದ ಪುತ್ರಿ ಆತ್ಮಹತ್ಯೆ

ಸೋಮವಾರ, 30 ಡಿಸೆಂಬರ್ 2013 (17:06 IST)
PR
PR
ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಳ್ಳವುದಕ್ಕೆ ಅವಳ ತಂದೆ ಪಾಂಡುರಂಗನ ವಿಕೃತ ಮನೋಭಾವೇ ಕಾರಣ ತಾಯಿ ಶಕುಂತಳಾ ಚಿಕ್ಕಬಳ್ಳಾಪುರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾಳೆ. ಮಗಳು ಸ್ನಾನ ಮಾಡುತ್ತಿದ್ದ ದೃಶ್ಯವನ್ನು ತಂದೆ ಪಾಂಡುರಂಗ ವಿಡಿಯೋ ಮಾಡಿದ್ದರಿಂದ ತೀವ್ರ ಮನನೊಂದ ಪುತ್ರಿ ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ದೂರು ನೀಡಿದ ನಂತರ ತಂದೆ ಪಾಂಡುರಂಗ ಚಿಕ್ಕಬಳ್ಳಾಪುರದಿಂದ ಪರಾರಿಯಾಗಿದ್ದಾನೆ. ನ.23ರಂದು ತೀವ್ರ ಖಿನ್ನತೆಗೆ ಒಳಗಾಗಿದ್ದ ಚೇತನಾ ನೇಣಿಗೆ ಶರಣಾಗಿದ್ದಳು. ಪಾಂಡುರಂಗ ವಿಡಿಯೋದಲ್ಲಿ ಈ ದೃಶ್ಯವನ್ನು ಸೆರೆಹಿಡಿದು ಅದನ್ನು ನೋಡಿ ಆನಂದಿಸುತ್ತಿದ್ದನೆಂದು ತಿಳಿದುಬಂದಿದೆ.

ಈ ವಿಷಯ ಬಹಿರಂಗವಾಗಿ ಚೇತನಾ ತೀವ್ರವಾಗಿ ಮನನೊಂದಿದ್ದಳು. ಚೇತನಾ ಮನೆಯಿಂದ ಆಚೆಗೆ ಹೋಗುವುದಕ್ಕೂ ಕೂಡ ಹೆದರುತ್ತಿದ್ದಳು. ಚೇತನಾ ತುಂಬಾ ಬುದ್ಧಿವಂತೆಯಾಗಿದ್ದಳು. ಯಾವುದೇ ಕೆಲಸ ಮಾಡದೇ ಮನೆಯಲ್ಲಿರುತ್ತಿದ್ದ ಪಾಂಡುರಂಗನ ಕೃತ್ಯದಿಂದ ಎಂಜಿನಿಯರಿಂಗ್‌ನಲ್ಲಿ 7ನೇ ಸೆಮಿಸ್ಟರ್ ಓದುತ್ತಿದ್ದ ಚೇತನಾ ತೀವ್ರ ಖಿನ್ನತೆಯಿಂದ ನರಳಿ ಕೊನೆಗೆ ನ. 23ರಂದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ವೆಬ್ದುನಿಯಾವನ್ನು ಓದಿ