ಸ್ಫೋಟಗೊಂಡ ಭಿನ್ನಮತ: ದಿಗ್ವಿಜಯ್ ಸಭೆಯಿಂದ ದಿಢೀರ್ ನಿರ್ಗಮನ

ಶನಿವಾರ, 14 ಡಿಸೆಂಬರ್ 2013 (12:18 IST)
PR
PR
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತದಿಂದ ಅಸಮಾಧಾನಗೊಂಡ ದಿಗ್ವಿಜಯ್ ಸಿಂಗ್ ಸಮನ್ವಯ ಸಮಿತಿಯಿಂದ ಹೊರನಡೆದ ಘಟನೆ ಇಂದು ನಡೆದಿದೆ. ಇದರಿಂದ ಸಮನ್ವಯ ಸಮಿತಿ ರದ್ದಾಗಿ ಸಿಂಗ್ ಮತ್ತೆ ದೆಹಲಿಗೆ ತೆರಳಿದ್ದಾರೆ. ಸಮನ್ವಯ ಸಮಿತಿ ಸಭೆ ನಡೆದಲ್ಲಿ ಕಾಂಗ್ರೆಸ್ ಶಾಸಕರು ದೂರುಗಳ ಸರಮಾಲೆಯನ್ನೇ ಮಂಡಿಸಿ ಗೊಂದಲದ ಗೂಡಾಗಬಹುದು ಎಂಬ ಅನುಮಾನವೂ ಕಾಡಿತ್ತು. ಭ್ರಷ್ಟಅಧಿಕಾರಿಗಳಿಗೆ ಸಿಎಂ ಬಡ್ತಿ ನೀಡಿರುವುದು, ಕೊಂಡಯ್ಯ ಅವರು ಕಾಂಗ್ರೆಸ್ ನಿವೇಶನವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಬಗ್ಗೆ ಕೂಡ ದಿಗ್ವಿಜಯ್ ಸಿಂಗ್ ಅವರಿಗೆ ಕೆಲವು ಶಾಸಕರು ದೂರು ನೀಡಿದ್ದರು.

ಚಿಕ್ಕರಾಯಪ್ಪ ಅವರನ್ನು ಪಿಡಬ್ಲ್ಯುಡಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿರುವುದು ಕೂಡ ಶಾಸಕರಿಗೆ ಅಸಮಾಧಾನ ಉಂಟುಮಾಡಿದ್ದು, ಈ ಬಗ್ಗೆ ಸಿಂಗ್ ಅವರಲ್ಲಿ ದೂರಿದ್ದರು. ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಿಸಿರುವ ಬಗ್ಗೆ ದಿಗ್ವಿಜಯ್ ಸಿಂಗ್ ತೀವ್ರ ಅಸಮಾಧಾನಗೊಂಡು ಸಮನ್ವಯ ಸಮಿತಿ ಸಭೆಯನ್ನು ರದ್ದುಮಾಡಿ ಹಠಾತ್ ಹೊರನಡೆದರೆಂದು ತಿಳಿದುಬಂದಿದೆ. ಇದಕ್ಕೆ ಮುನ್ನ ಸೋನಿಯಾ ಬುಲಾವ್ ನೀಡಿದ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಸಮನ್ವಯ ಸಮಿತಿ ಸಭೆ ರದ್ದುಮಾಡಿದ್ದರೆಂದು ವರದಿಯಾಗಿತ್ತು.

ವೆಬ್ದುನಿಯಾವನ್ನು ಓದಿ