ಹಜ್ ಖಾತೆ ಬೇಕೆಂಬ ರೋಷನ್ ಬೇಗ್ ಪಟ್ಟಿಗೆ ಕೊನೆಗೂ ಮಣಿದ ಖಮರುಲ್

ಗುರುವಾರ, 2 ಜನವರಿ 2014 (15:48 IST)
PR
PR
ಬೆಂಗಳೂರು: ನಿನ್ನೆ ತಾನೇ ಪ್ರತಿಜ್ಞಾ ವಿಧಿ ಸ್ವೀಕರಿಸಿ ಸಚಿವ ಸಂಪುಟಕ್ಕೆ ಡಿಕೆಶಿ, ರೋಷನ್ ಬೇಗ್ ಸೇರ್ಪಡೆಯಾದ ನಂತರ ಕಾಂಗ್ರೆಸ್‌ನಲ್ಲಿ ಖಾತೆ ಹಂಚಿಕೆಯಾಗಿ ಈಗ ಕಿತ್ತಾಟ ಷುರುವಾಗಿದೆ. ರೋಷನ್ ಬೇಗ್ ತಮಗೆ ಹಜ್ ಖಾತೆಯೇ ಬೇಕೆಂದು ಪಟ್ಟು ಹಿಡಿದು ಕೂತಿದ್ದರು. ಆದರೆ ಹಜ್ ಖಾತೆಯನ್ನು ಹೊಂದಿರುವ ಖಮರುಲ್ ಇಸ್ಲಾಂ ಆ ಖಾತೆಯನ್ನು ಬಿಟ್ಟುಕೊಡಲು ಸುತಾರಾಂ ಒಪ್ಪದೇ ಖಾತೆ ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದು ಕೂತಿದ್ದರು. ಎಚ್.ಕೆ. ಪಾಟೀಲ್ ಮುಂತಾದ ಸಚಿವರ ಮನವೊಲಿಕೆ ನಂತರ ಖಾತೆ ಬಿಟ್ಟು ಕೊಡಲು ಖಮರುಲ್ ಇಸ್ಲಾಂ ಕೊನೆಗೂ ಒಪ್ಪಿದರು. ಮೊದಲು ಖಾತೆ ಬಿಟ್ಟುಕೊಡುವುದಿಲ್ಲ ಎಂದು ಖಮರುಲ್ ಹಠ ಹಿಡಿದಿದ್ದಾಗ, ಈ ಸಮಸ್ಯೆಯನ್ನು ಬಗೆಹರಿಸಲು ಸಿಎಂ ಸಿದ್ದರಾಮಯ್ಯ ಅವರು ಎಚ್.ಕೆ. ಪಾಟೀಲ್ ಅವರಿಗೆ ಜವಾಬ್ದಾರಿ ವಹಿಸಿದ್ದರು.

ಈ ನಡುವೆ ಖಾತೆ ಬಿಕ್ಕಟ್ಟು ಬಗೆಹರಿಸಲು ಎಚ್.ಕೆ. ಪಾಟೀಲ್ ಮನೆಯಲ್ಲಿ ಸಿಎಂ ಸಭೆ ಕರೆದರು. ರಾಮಲಿಂಗಾ ರೆಡ್ಡಿ, ಕಮರುಲ್ ಇಸ್ಲಾಂ, ಟಿ.ಬಿ. ಜಯಚಂದ್ರ, ಎಚ್.ಕೆ.ಪಾಟೀಲ್, ಉಮಾಶ್ರೀ ಮುಂತಾದವರು ಮಾತುಕತೆಯಲ್ಲಿ ಭಾಗವಹಿಸಿದ್ದರು. ಕೊನೆಗೂ ಒತ್ತಡಗಳಿಗೆ ಮಣಿದ ಖಮರುಲ್ ಹಜ್ ಖಾತೆಯನ್ನು ಬಿಟ್ಟುಕೊಡಲು ಒಪ್ಪಿದರು.

ವೆಬ್ದುನಿಯಾವನ್ನು ಓದಿ