ಹಿರೇಮಠ ವಿರುದ್ದ ಹಕ್ಕುಚ್ಯುತಿ ನಿರ್ಣಯ

ಮಂಗಳವಾರ, 3 ಡಿಸೆಂಬರ್ 2013 (10:46 IST)
PR
ರಾಜ್ಯದಲ್ಲಿ ಗಣಿ ಹಗರಣಗಳನ್ನು ಹೊರಹಾಕಿ ಅಕ್ರಮ ಗಣಿಗಾರಿಕೆ ನಡೆಸುವವರನ್ನು ಜೈಲಿಗೆ ಹೊಗುವಂತೆ ಮಾಡಿದ ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್.ಆರ್. ಹಿರೇಮಠ ವಿರುದ್ಧ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಆರ್. ರಮೇಶಕುಮಾರ್ ಮಂಡಿಸಿದ್ದ ಹಕ್ಕುಚ್ಯುತಿ ನಿರ್ಣಯವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸಲಾಗಿದೆ

ರಮೇಶಕುಮಾರ ಅವರ ಮಾತನ್ನು ಆಲಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪನವರು, ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದ್ದಾರೆ. ಇದನ್ನು ಆದ್ಯತೆ ವಿಚಾರ ಎಂದು ಪರಿಗಣಿಸಿ ಶೀಘ್ರವೇ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ಕಲಾಪ ನಡೆಯುತ್ತಿರುವ ಸಂದರ್ಬದಲ್ಲಿ ಕೆ.ಆರ್‌.ರಮೇಶಕುಮಾರ ಹಿರೇಮಠ ವಿರುದ್ದ ಕಿಡಿಕಾರಿದರು. ಪ್ರಶ್ನೋತ್ತರ ಅವಧಿ ಮುಗಿಯುತ್ತಿದ್ದಂತೆ ನಿಯಮ 191ರಡಿ ವಿಷಯ ಪ್ರಸ್ತಾಪಿಸಿದ ರಮೇಶಕುಮಾರ್ ಹಿರೇಮಠ ಅವರಿಂದ ಕೆಲಸ ಮಾಡಲು ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ. ಹಿರೇಮಠ ಅವರು ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಆದಕ ಕಾರಣ ಅವರ ವಿರುದ್ದ ಹಕ್ಕು ಚ್ಯುತಿ ನಿರ್ಣಯ ಮಂಡಿಸಬೇಕು ಎಂದು ರಮೇಶ ಕುಮಾರ್‌ ಅವರ ವಾದವಾಗಿದೆ.


ವೆಬ್ದುನಿಯಾವನ್ನು ಓದಿ