ಹುಟ್ಟೂರಿನಲ್ಲಿ ಮಡಿಕೇರಿ ಸಿಪಾಯಿ ಅಂತ್ಯಕ್ರಿಯೆ

ಮಂಗಳವಾರ, 26 ಏಪ್ರಿಲ್ 2011 (20:16 IST)
ಹೆಲಿಕಾಪ್ಟರ್‌ ದುರಂತದಲ್ಲಿ ದುರ್ಮರಣಕ್ಕೀಡಾಗಿದ್ದ ಕೊಡಗಿನ ಯೋಧ ನಂಜಪ್ಪ ಅಂತ್ಯಕ್ರಿಯೆ ಮಂಗಳವಾರ ಸಕಲ ಸರಕಾರಿ ಗೌರವಗಳೊಂದಿಗೆ ಅವರ ಸ್ವಗ್ರಾಮ ಹೊದ್ದೂರಿನಲ್ಲಿ ನಡೆಯಿತು.

ಸಾಂಪ್ರದಾಯಿಕ ವಿಧಿ ವಿಧಾನಗಳ ನಂತರ ಹೆದ್ದೂರಿನ ಕುಟುಂಬದ ರುದ್ರಭೂಮಿಯಲ್ಲಿ ಪತ್ನಿ ನಯನ ಚಿತೆಗೆ ಅಗ್ನಿ ಸ್ಪರ್ಷ ಮಾಡುವುದರೊಂದಿಗೆ ನಂಜಯ್ಯ ಪಂಚಭೂತಗಳಲ್ಲಿ ಲೀನರಾದರು.

ಇದಕ್ಕೂ ಮುನ್ನ ಮೇಜರ್‌ ಭಾರದ್ವಾಜ್‌ ನೇತೃತ್ವದಲ್ಲಿ ಆಗಮಿಸಿದ್ದ ಸೇನಾ ತಂಡ ಹಾಗೂ ಪೊಲೀಸರು ಕುಶಾಲ ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು.

ಯೋಧನ ಮೃತ ದೇಹವನ್ನು ಬೆಂಗಳೂರಿನಿಂದ ಮಡಿಕೇರಿಗೆ ತರಲಾಯಿತು. ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಕೊಡಗು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ, ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ಜಿಲ್ಲಾಧಿಕಾರಿ ಕೆ.ಎಚ್‌.ಅಶ್ವತ್ಥನಾರಾಯಣ ಗೌಡ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಮಂಜುನಾಥ ಅಣ್ಣಿಗೇರಿ ಅಂತಿಮ ನಮನ ಸಲ್ಲಿಸಿದರು.

ಲೆಫ್ಟಿನೆಂಟ್‌ ಕರ್ನಲ್‌ ನಂಜಪ್ಪ ಅವರಿಗೆ ಇತ್ತೀಚೆಗೆ ಬಡ್ತಿ ನೀಡಲಾಗಿದ್ದು, ಸಧ್ಯದಲ್ಲೇ ಅಧಿಕಾರ ಸ್ವೀಕರಿಸಲಿದ್ದರು. ನಂಜಯ್ಯ, ಪತ್ನಿ ನಯನಾ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇಬ್ಬರು ಯೋಧರು ಹಾಗೂ ಇಬ್ಬರು ಪೈಲೆಟ್‌ಗಳಿದ್ದ ಧ್ರುವ ಹೆಲಿಕಾಪ್ಟರ್‌ ಸಿಕ್ಕಿಂ ರಾಜ್ಯದ ಚೀನಾ ಗಡಿ ಪ್ರದೇಶದಲ್ಲಿ ಪತನವಾಗಿತ್ತು.

ವೆಬ್ದುನಿಯಾವನ್ನು ಓದಿ