ಹೊಡಿ ಮಗ ಹೊಡಿ : ಬೀದರ್ ಡಿಸಿ ವಿರುದ್ಧ ಸಿಡಿದೆದ್ದ ಕನ್ನಡಿಗರು.

ಗುರುವಾರ, 7 ನವೆಂಬರ್ 2013 (14:33 IST)
PR
ಫೇಸ್‌ಬುಕ್‌ನಲ್ಲಿ ಶ್ರೀರಾಮನಿಗೆ 'ಡ್ಯೂಡ್‌', ಸೀತೆಗೆ 'ಬೇಬ್‌' ಹಾಗೂ ಕೌಸಲ್ಯೆಗೆ 'ಬಿಚ್‌' ಎಂದು ಸಂಬೋಧಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದ ಬೀದರ್‌ ಡಿಸಿ ಜಾಫರ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಅಕ್ರೋಷಗೊಂಡಿದ್ದಾರೆ. ಇಂದು ಡಿಸಿ ಕಛೇರಿಗೆ ನುಗ್ಗಿದ ಕರವೇ ಕಾರ್ಯಕರ್ತರು ದಾಂಧಲೆ ಎಬ್ಬಿಸಿದ್ದಾರೆ. ಡಿಸಿ ಜಾಫರ್‌ ಷರೀಫ್‌ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೋಲೀಸರು ಪ್ರತಿಭಟನಾ ನಿರತರನ್ನು ಬಂಧಿಸುವುದರ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

ದೀಪಾವಳಿಯ ಸಮಯದಲ್ಲಿ ಬೀದರ್‌ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ಪಿ.ಸಿ ಜಾಫರ್ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಅವಹೇಳನಕಾರಿ ಲೇಖನವೊಂದನ್ನು ಪೋಸ್ಟ್ ಮಾಡಿದ್ರು. ಇದರಿಂದ ಸಿಟ್ಟಿಗೆದ್ದ ಬಜರಂಗದಳದ ಕಾರ್ಯಕರ್ತರು ಡಿಸಿ ಲೇಖನದ ಪ್ರತಿಯನ್ನು ರಾಷ್ಟ್ರಪತಿಯವರೆಗೆ ಕಳಿಸಿಕೊಡುವುದಾಗಿ ನೆನ್ನೆ ಹೆಳಿದ್ರು. ಆದ್ರೆ ಅಷ್ಟರಲ್ಲಿ ಕರವೇ ಕಾರ್ಯಕರ್ತರು ಸಿಡಿದೆದ್ದು, ಡಿಸಿ ವರ್ತನೆಯನ್ನು ಖಂಡಿಸಿದ್ದಾರೆ. ಡಿಸಿಯನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದರೆ.

ಕೋಮುಸಾಮರಸ್ಯ ಕಾಯಬೇಕಿದ್ದ ಜಿಲ್ಲಾಧಿಕಾರಿಯೇ ಕೋಮು ಭಾವನೆಗಳನ್ನು ಕೆರಳುವಂತೆ ವರ್ತಿಸಿದ್ದು ನಿಜಕ್ಕೂ ಹೇಸಿಗೆ ತಿನ್ನುವ ಕೆಲಸ ಎಂದು ಜಿಲ್ಲಾ ಕರವೇ ಮುಖಂಡರು ಹೇಳಿದ್ದಾರೆ.

ಜಾಫರ್ ಈ ಕೂಡಲೇ ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಡಿಸಿ ಸ್ಥಾನದಿಂದ ವಜಾಗೊಳಿಸುವವವರೆಗೂ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪ್ರತಿಭಟನಾ ನಿರತರು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ