ನಾಳೆ ಕರ್ನಾಟಕದ 12 ನಗರಗಳಿಗೆ ಮರುನಾಮಕರಣ

ಶುಕ್ರವಾರ, 31 ಅಕ್ಟೋಬರ್ 2014 (17:58 IST)
ಶನಿವಾರದಿಂದ ಬ್ಯಾಂಗ್ಲೂರ್ ಬೆಂಗಳೂರು ಆಗಿ, ಬೆಳಗಾಂ ಅನ್ನು ಬೆಳಗಾವಿ ಎಂದು, ಮೈಸೂರ್‌ಅನ್ನು ಮೈಸೂರು ಎಂದು ಕರೆಯಲಾಗುತ್ತದೆ. ರಾಜ್ಯವು 59ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಆಚರಿಸುತ್ತಿರುವ ಸಂದರ್ಭದಲ್ಲಿ  ಕರ್ನಾಟಕದ 12 ನಗರಗಳನ್ನು ಹೊಸ ಹೆಸರುಗಳಿಂದ ಕರೆಯಲಾಗುತ್ತದೆ. ಶುಕ್ರವಾರ 12 ನಗರಗಳಿಗೆ ಮರುನಾಮಕರಣ ಮಾಡುವ ಅಧಿಸೂಚನೆ ಹೊರಡಿಸಲಾಗುತ್ತದೆ.
 
ಈ ತಿಂಗಳ ಆರಂಭದಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ 12 ನಗರಗಳಿಗೆ ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿತು. ಕನ್ನಡ ರಾಜ್ಯೋತ್ಸವಕ್ಕೆ ಹೊಂದಿಕೆಯಾಗುವಂತೆ ಅಧಿಸೂಚನೆ ಹೊರಡಿಸುವ ಮೂಲಕ ಬೆಳಗಾವಿ ಕೂಡ ಕರ್ನಾಟಕದ ಭಾಗ ಎಂಬ ಸಂದೇಶವನ್ನು ಕಳಿಸಲು ಸರ್ಕಾರ ಬಯಸಿದೆ.
 ಅಧಿಸೂಚನೆ ಹೊರಡಿಸಿದ ಬಳಿಕ  12 ನಗರಗಳಿಗೆ ಮರುನಾಮಕರಣ ಮಾಡಲಾಗುತ್ತದೆ.

ಬ್ಯಾಂಗಳೂರ್-ಬೆಂಗಳೂರು, ಮ್ಯಾಂಗ್ಲೂರ್-ಮಂಗಳೂರು, ಬೆಳ್ಳಾರಿ-ಬಳ್ಳಾರಿ, ಬಿಜಾಪುರ-ವಿಜಯಪುರ ಅಥವಾ ವಿಜಾಪುರ,  ಬೆಳಗಾಂ-ಬೆಳಗಾವಿ, ಚಿಕ್ಕಮಗಳೂರ್-ಚಿಕ್ಕಮಗಳೂರು, ಗುಲ್ಬರ್ಗ-ಕಲಬುರಗಿ, ಮೈಸೂರ್-ಮೈಸೂರು, ಹೊಸಪೇಟ್-ಹೊಸಪೇಟೆ, ಶಿಮೊಗ್ಗಾ-ಶಿವಮೊಗ್ಗಾ, ಹುಬ್ಳಿ-ಹುಬ್ಬಳ್ಳಿ, ತುಮಕೂರ್-ತುಮಕೂರು ಹೆಸರುಗಳಲ್ಲಿ ಮರುನಾಮಕರಣ ಮಾಡಲಾಗುತ್ತದೆ. 

ವೆಬ್ದುನಿಯಾವನ್ನು ಓದಿ