ತಲೆಯಲ್ಲಿ ಹೇನು: 12 ವಿದ್ಯಾರ್ಥಿಗಳ ತಲೆ ಬೋಡಿಸಿದ ಶಾಲೆ

ಭಾನುವಾರ, 1 ಫೆಬ್ರವರಿ 2015 (16:13 IST)
ಬೆಂಗಳೂರಿನ ಸೇಂಟ್ ಜೋಸೆಫ್ ಬೋರ್ಡಿಂಗ್ ಸ್ಕೂಲ್‌ವೊಂದರಲ್ಲಿ 12 ವಿದ್ಯಾರ್ಥಿಗಳ ತಲೆಯ ಕೂದಲನ್ನು ಸಂಪೂರ್ಣವಾಗಿ  ಕಟ್ ಮಾಡಿದ ಘಟನೆ ನಡೆದಿದೆ. ತಲೆಯಲ್ಲಿ ಹೇನುಗಳಿದ್ದ ಕಾರಣಕ್ಕೆ ತಲೆ ಕೂದಲನ್ನು ಕಟ್ ಮಾಡಿದ್ದಾಗಿ ಶಾಲೆಯ ಆಡಳಿತ ಮಂಡಳಿ ಸಮಜಾಯಿಷಿ ನೀಡಿದೆ.

ನೊಂದ ವಿದ್ಯಾರ್ಥಿಯ ಪೋಷಕರು ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಸೆಬಾಸ್ಟಿಯನ್ ಎಂಬವರು ಈ ಕುರಿತು ದೂರು ನೀಡಿದ್ದಾರೆ.  ಮಕ್ಕಳು ಶಾಲೆಗೆ ಸರಿಯಾಗಿ ಹೋಗದಿದ್ದಕ್ಕೆ ಈ ಕೇಶಮುಂಡನ ಶಿಕ್ಷೆಯನ್ನು ಶಾಲೆ ನೀಡಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಕಿರಣ್ ಎಂಬ ಶಾಲಾ ಸಿಬ್ಬಂದಿ ಈ ಶಿಕ್ಷೆ ನೀಡಿದ್ದಾರೆಂದು ಮಕ್ಕಳು ಆರೋಪಿಸಿದ್ದಾರೆ. ತಲೆಯಲ್ಲಿ ಹೇನುಗಳಿದ್ದರೆ ನಮಗೆ ತಿಳಿಸಿದ್ದರೆ ನಾವೇ ಕಟಿಂಗ್ ಮಾಡಿಸುತ್ತಿದ್ದೆವು. ಶಾಲೆ ಆಡಳಿತ ಮಂಡಳಿ ಕ್ಷೌರದ ಅಂಗಡಿ ಇಟ್ಟಿದೆಯೇ ಎಂದು ಪೋಷಕರು ಪ್ರಶ್ನಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ