ಒಬ್ಬ ಯುವತಿ ಸೇರಿ 13 ಟೆಕ್ಕಿಗಳು ಪತ್ತೆ: ಇನ್ನೊಬ್ಬ ಟೆಕ್ಕಿಗೆ ಹುಡುಕಾಟ

ಮಂಗಳವಾರ, 29 ಜುಲೈ 2014 (14:57 IST)
ಹಾಸನ ಜಿಲ್ಲೆ ಸಕಲೇಶಪುರ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ತೆರಳಿದ 14 ಟೆಕ್ಕಿಗಳ ಪೈಕಿ ಓರ್ವ ಯುವತಿ ಸೇರಿ 13 ಜನ ಟೆಕ್ಕಿಗಳು  ಬಿಸಿಲೆರಿ ರಕ್ಷಿತಾರಣ್ಯದ ಅರಮನೆ ಗುಡ್ಡದಲ್ಲಿ ಪತ್ತೆಯಾಗಿದ್ದಾರೆ. 13 ಟೆಕ್ಕಿಗಳನ್ನು ಸಕಲೇಶಪುರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು,  ಅಕ್ರಮವಾಗಿ ಅರಣ್ಯ ಪ್ರವೇಶಿಸಿದ ಬಗ್ಗೆ ಅವರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಎಲ್ಲಾ ಟೆಕ್ಕಿಗಳು ಜುಲೈ 25ರಂದು ಅರಣ್ಯ ಪ್ರವೇಶಿಸಿದ್ದು, ಎಲ್ಲರೂ ಚೆನ್ನೈ ಮೂಲದ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಅಡ್ಡಹೊಳೆ ಬಳಿ ಬಾಲಾಜಿ ಎಂಬ ಟೆಕ್ಕಿ ಇರಬಹುದೆಂದು ಶಂಕಿಸಲಾಗಿದ್ದು, ಅವನಿಗಾಗಿ ಹುಡುಕಾಟ ಮುಂದುವರಿದಿದೆ.  ಗುಂಡ್ಯ ರಕ್ಷಿತಾರಣ್ಯದಲ್ಲಿ ಚಾರಣಕ್ಕೆ ತೆರಳಿದ 14 ಮಂದಿ ಚಾರಣಿಗರು ನಾಪತ್ತೆಯಾಗಿದ್ದಾರೆಂದು ವರದಿಯಾಗಿತ್ತು.

 ಮೊದಲಿಗೆ ಒಬ್ಬ ಟೆಕ್ಕಿ ಅರಣ್ಯದಲ್ಲಿ ನಾಪತ್ತೆಯಾಗಿದ್ದು, ನಂತರ ಉಳಿದ 13 ಟೆಕ್ಕಿಗಳ ಜೊತೆ ಸಂಪರ್ಕ ಕಡಿತಗೊಂಡಿದ್ದರಿಂದ ತೀವ್ರ ಆತಂಕದ ವಾತಾವರಣ ಉಂಟಾಗಿತ್ತು. ನಿನ್ನೆ ರಾತ್ರಿ ಬಾಲಾಜಿ ನಾಪತ್ತೆಯಾದ ಬಗ್ಗೆ ಉಳಿದ ಟೆಕ್ಕಿಗಳು ಮಾಹಿತಿ ನೀಡಿದ್ದರು. ಡಾ.ಶ್ರೀಕಾಂತ್ ಎಂಬವರಿಗೆ ಈ ಕುರಿತು ಉಳಿದ ಟೆಕ್ಕಿಗಳು ಮೇಲ್ ಮಾಡಿದ ನಂತರ ಮನುಬಳಿಗಾರ್ ಅವರನ್ನು ಸಂಪರ್ಕಿಸಿದ್ದರು. ಮನು  ಬಳಿಗಾರ್  ಹಾಸನ ಡಿಸಿಗೆ ಮಾಹಿತಿ ನೀಡಿದ್ದರು. 

ವೆಬ್ದುನಿಯಾವನ್ನು ಓದಿ