ಬಾಲಕನಿಂದಲೇ ಹಿರಿಯ ಮಹಿಳೆಯ ಮೇಲೆ ರೇಪ್

ಸೋಮವಾರ, 1 ಸೆಪ್ಟಂಬರ್ 2014 (15:01 IST)
ಇಲ್ಲಿನ ಪಡಂಗಡಿಯಲ್ಲಿ ಸುಮಾರು ನಲವತ್ತು ವರ್ಷದ ಮಹಿಳೆ ಮೇಲೆ ಹದಿನೈದು ವರ್ಷದ ಬಾಲಕನೋರ್ವ ಅತ್ಯಾಚಾರ ಎಸಗಿರುವ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ತಮ್ಮ ಮನೆಯಲ್ಲಿ ತಾಯಿ ಒಬ್ಬರೇ ಇದ್ದ ಸಂದರ್ಭದಲ್ಲಿ ಪಕ್ಕದ ಮನೆಯ ಬಾಲಕ ಮನೆಗೆ ಬಂದು ಮುಂಬಾಗಿಲಿನ ಚಿಲಕವನ್ನು ಹಾಕಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯ ಪುತ್ರಿ ದೂರು ನೀಡಿದ್ದಾರೆ. 
 
ಮಹಿಳೆಗೆ ಜ್ಞಾಪಕ ಶಕ್ತಿ ಇಲ್ಲವೆಂದು ಹೇಳಲಾಗುತ್ತಿದೆ. ಬೆಳ್ತಂಗಡಿ ಪೊಲೀಸರು ಬಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ