19 ಕೋಟಿ ಅವ್ಯವಹಾರ ಪ್ರಕರಣ: ಸಮಿತಿ ರಚನೆಗೆ ವಿಪಕ್ಷಗಳ ಒತ್ತಾಯ

ಮಂಗಳವಾರ, 7 ಜುಲೈ 2015 (12:17 IST)
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಹಾಸಿಗೆ ಹಾಗೂ ದಿಂಬು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಪ್ರಕರಣ ಹಿನ್ನೆಲೆಯಲ್ಲಿ ಸದನ ಸಮಿತಿ ರಚಿಸುವಂತೆ ವಿಧಾನ ಪರಿಷತ್ ವಿರೋಧ ಪಕ್ಷಗಳ ಸದಸ್ಯರು ಇಂದೂ ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ.  
 
ಈ ಪ್ರಕರಣ ಸಂಬಂಧ ನಿನ್ನೆಯ ಪ್ರಶೋತ್ತರ ಕಲಾಪ ವೇಳೆಯಲ್ಲಿ ಪ್ರತಿಕ್ರಿಯಿಸಿದ್ದ ಜೆಡಿಎಸ್ ಸದಸ್ಯ ಶರವಣ ಅವರು ಈ ಪ್ರಕರಣದಲ್ಲಿ 19 ಕೋಟಿ ಅವ್ಯವಹಾರ ನಡೆದಿದೆ. ಆದ್ದರಿಂದ ಸಮಿತಿ ರಚಿಸಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಮರುಪ್ರತಿಕ್ರಿಯೆ ಕೊಟ್ಟಿದ್ದ ಸಮಾಜ ಕಲ್ಯಾಣ ಸಚಿವ ಆಂಜನೇಯ ಪ್ರಕರಣದಲ್ಲಿ ಅವ್ಯವಹಾರವಾಗಿದೆ ಎಂದು ಒಪ್ಪಿಕೊಂಡು ಸಿಐಡಿ ತನಿಖೆ ನಡೆಸುವುದಾಗಿ ಒಪ್ಪಿಗೆ ನೀಡಿದ್ದರು. ಆದರೆ ಪ್ರತಿಪಕ್ಷಗಳು ಸಿಐಡಿ ತನಿಖೆ ತಡವಾಗುತ್ತದೆ. ಆದ ಕಾರಣ ಸದನ ಸಮಿತಿಯನ್ನೇ ರಚಿಸಬೇಕೆಂದು ಒತ್ತಾಯ ಹೇರಿದ್ದವು. ಆದರೆ ಸರ್ಕಾರ ಪ್ರತಿ ಪಕ್ಷಗಳ ಗೋಜಿಗೆ ಮಣಿದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಮಿತಿ ರಚಿಸುವಂತೆ ಇಂದೂ ಕೂಡ ಪ್ರತಿಭಟನೆ ನಡೆಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ