ಬೆತ್ತಲೆ ಫೋಟೋ ತೋರಿಸಿ ಯುವತಿಯ ತಂದೆಗೆ ಬ್ಲಾಕ್‌ಮೇಲ್

ಮಂಗಳವಾರ, 2 ಸೆಪ್ಟಂಬರ್ 2014 (12:12 IST)
ಪೋಷಕರಿಗೆ  ವಿವಾಹಿತರಾಗಿದ್ದ ಅವರ ಪುತ್ರಿಯ  ಬೆತ್ತಲೆ ಫೋಟೋ ತೋರಿಸಿ ಬ್ಲಾಕ್‌ಮೇಲ್ ಮಾಡಿ  50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಕಟ್ಪಾಡಿ ಗ್ರಾಮದ ಇಬ್ಬರು ಆರೋಪಿಗಳಿಗೆ ಈಗ ಪೊಲೀಸರು ಶೋಧ ನಡೆಸಿದ್ದಾರೆ.  ಕಟಪಾಡಿ ಗ್ರಾಮದ ಮಹಿಳೆಯ ತಂದೆಗೆ ಬ್ಲಾಕ್‌ಮೇಲ್ ಮಾಡಿ  50 ಲಕ್ಷ ರೂ. ಕೊಡದಿದ್ದರೆ ಯುವತಿಯ ಫೋಟೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ. ಮಾಧ್ಯಮಗಳಲ್ಲಿ ಪ್ರಕಟಿಸಿ  ಮಾನ ಹರಾಜು ಹಾಕುವುದಾಗಿ  ಬೆದರಿಕೆ ಹಾಕಿದ್ದರು.

ಕೊನೆಗೆ ಇವರಿಬ್ಬರು ಯುವತಿಯ ತಂದೆಯಿಂದ 25 ಲಕ್ಷ ಸುಲಿಗೆ ಮಾಡಿದ್ದರು.  ತಂದೆ ತನ್ನ ಮನೆಯನ್ನು ಅಡವಿಟ್ಟು 25 ಲಕ್ಷ ತಂದು ಇವರಿಬ್ಬರಿಗೆ ನೀಡಿದ್ದರು. ಆದರೆ ಮಹಿಳೆ ತಂದೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ ಮೇಲೆ ಹಣ ವಾಪಸ್ ಮಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತನಾಗಿದ್ದ ಪೊಲೀಸ್ ಪೇದೆ ಸುಧೀರ್, ಯುವತಿಯ ಅಕ್ಕನ ಮಗ ಮಹ್ಮದ್ ಸಮೀರ್ ಎಂಬವರ ಮೇಲೆ ಕೇಸು ದಾಖಲಿಸಲಾಗಿದೆ.  ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.  

ವೆಬ್ದುನಿಯಾವನ್ನು ಓದಿ