2009ರೊಳಗೆ ರಾಜ್ಯದ ರೈಲ್ವೆ ಕಾಮಗಾರಿ ಪೂರ್ಣ: ವೇಲು

ಬುಧವಾರ, 12 ನವೆಂಬರ್ 2008 (13:35 IST)
ಕರ್ನಾಟಕದಲ್ಲಿ ನಡೆಯುತ್ತಿರುವ ವಿವಿಧ ರೈಲು ಯೋಜನೆಗಳ ಕಾಮಗಾರಿಗಳು 2009ರೊಳಗೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಡಾ. ಆರ್. ವೇಲು ತಿಳಿಸಿದ್ದಾರೆ.

ನಂಜನಗೂಡು- ಚಾಮರಾಜನಗರ ಬ್ರಾಡ್ ಗೇಜ್ ರೈಲು ಸಂಚಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಐದಾರು ಕಡೆಗಳಲ್ಲಿ ಮೀಟರ್ ಗೇಜ್‌‌ನ್ನು ಬ್ರಾಡ್ ಗೇಜ್‌ಗೆ ಪರಿವರ್ತಿಸುವ ಕಾಮಗಾರಿಯೂ 2009ರೊಳಗೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.

ಮೈಸೂರು- ರಾಮನಗರ, ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ ಕಾರ್ಯ ನಡೆಯುತ್ತಿದೆ. ಶ್ರೀರಂಗಪಟ್ಟಣ ಬಳಿ ಇರುವ ಟಿಪ್ಪು ಸೇತುವೆ ಈ ಕಾರ್ಯಕ್ಕೆ ಅಡಚಣೆಯಾಗುತ್ತಿರುವ ಕಾರಣ ಪ್ರಾಚ್ಯವಸ್ತು ಇಲಾಖೆಯವರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ರೈಲ್ವೆ ಇಲಾಖೆಯು ನೌಕರರರಿಗೆ ಪಿಂಚಣಿ ನೀಡುವ ಸೌಲಭ್ಯ ಜಾರಿಗೊಳಿಸಿದೆ. ಐದನೇ ವೇತನ ಆಯೋಗದ ಶಿಫಾರಸಿನಂತೆ ವೇತನ ನೀಡುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ