2014 ಪ್ರಾದೇಶಿಕ ಹಿನ್ನೋಟದ ಮುಖ್ಯಾಂಶಗಳು

ಶನಿವಾರ, 27 ಡಿಸೆಂಬರ್ 2014 (16:01 IST)
ಹೊಸ ವರ್ಷಕ್ಕೆ ನಾವು ಕಾಲಿಟ್ಟಿದ್ದೇವೆ. 2013ರ 365 ದಿನಗಳು ಕಳೆದಿವೆ, ಒಂದು ವರ್ಷದ ಅವಧಿಯಲ್ಲಿ ದೇಶ ಮತ್ತು ಕರ್ನಾಟಕದಲ್ಲಿ ಹಲವಾರು ಘಟನೆಗಳು ಸಂತೋಷ, ಸಮಾಧಾನ, ದುಖಃ ತಂದಿವೆ. 2013 ನಮಗೆ ವಿದಾಯ ಹೇಳಿ 2014ಅನ್ನು ನಾವು ಸ್ವಾಗತಿಸಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷಗಳ ಹಿನ್ನೋಟಗಳತ್ತ ನಾವು ಒಮ್ಮೆ ಗಮನ ಹರಿಸೋಣ. [2013ರ ಕರ್ನಾಟಕ ರಾಜಕೀಯದ ಹಿನ್ನೋಟ]



 
 
1. ಅರ್ಕಾವತಿ ಡಿನೋಟಿಫೈ: ಡಿನೋಟಿಫಿಕೇಷನ್ ಸುಳಿಗೆ ಸಿಕ್ಕು ಯಡಿಯೂರಪ್ಪ ಅಧಿಕಾರ ಕಳೆದುಕೊಂದಿದ್ದು ಗೊತ್ತಿದ್ದರೂ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದ ವಿವಾದವನ್ನು ಸಿದ್ದರಾಮಯ್ಯ ಅನಗತ್ಯವಾಗಿ ಮೈಮೇಲೆ ಎಳೆದುಕೊಂಡರು. ಕೋರ್ಟ್ ಸೂಚನೆ ಎಂದು 'ರಿಡ್ಯೂ' ಮಾಡುವ ಬದಲು ಸಂಪುಟದ ನಾಲ್ವರು ಹಿರಿಯ ಸಚಿವರ ಸಮಿತಿ ರಚಿಸಿ ಮುಂದೆ ಇರಿಸಬಹುದಾದ ಹೆಜ್ಜೆಗಳ ಬಗ್ಗೆ ಅಧ್ಯಯನ ವರದಿ ಪಡೆದು, ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಡಿ ಇಡಬಹುದಿತ್ತು. ಪ್ರತಿಪಕ್ಷಗಳು ಪ್ರಕರಣವನ್ನು ಪ್ರಸ್ತಾಪಿಸಿ ಹೋರಾಟದ ಮುನ್ಸೂಚನೆ ನೀಡಿದರೂ ಬಿಡಿಎಗೆ ಅಂಟಿರುವ ಕಳಂಕ ತೊಳೆಯುವ ನಿಟ್ಟಿನಲ್ಲಿ ವಿವಾದದಿಂದ ಮುಕ್ತರಾದ ಸಮರ್ಥರ ಕೈಗೆ ಅದರ ಆಡಳಿತ ನೀಡದಿರುವುದು ಸರಕಾರದ ವೈಫಲ್ಯ.
 








2. ಕೆಪಿಎಸ್‌ಸಿ ನೇಮಕ: ಭ್ರಷ್ಟಾಚಾರದ ಸುಳಿಗೆ ಸಿಲುಕಿ ರಾಡಿಯಾಗಿದ್ದ ಕೆಪಿಎಸ್‌ಸಿಗೆ ಕಾಯಕಲ್ಪ ಮಾಡಲು ಸಿಕ್ಕ ಸುವರ್ಣ ಅವಕಾಶ ಬಳಸಿಕೊಳ್ಳುವಲ್ಲಿ ಸರಕಾರ ಎಡವಿತು. ಸ್ವಚ್ಛ, ಪಾರದರ್ಶಕ ಆಡಳಿತ ನೀಡುವ ಖಡಕ್ ತಂಡವೊಂದನ್ನು ಆಯೋಗಕ್ಕೆ ನೇಮಕ ಮಾಡಿದ್ದಿದ್ದರೆ ಸಾಕಿತ್ತು. ಅದರ ಬದಲು ನೇಮಕದಲ್ಲೂ ರಾಜಕಾರಣದ ಲೆಕ್ಕಾಚಾರ ನಡೆಸಿದ್ದು ಸರಿಯಲ್ಲ. ಒಂದು ವೇಳೆ ರಾಜ್ಯಪಾಲರು ಪಂಜಾಬ್ ಕೋರ್ಟ್ ತೀರ್ಪಿನ ಅನ್ವಯ ಪಟ್ಟಿ ತಿರಸ್ಕರಿಸಿದರೆ ಸರಕಾರಕ್ಕೆ ಮುಖಭಂಗ ಆಗುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಅಧ್ಯಕ್ಷ ಸ್ಥಾನ ಮಾತ್ರವಲ್ಲದೆ, ಇಬ್ಬರು ಸದಸ್ಯರ ಮೇಲೂ ಆರೋಪಗಳಿವೆ. ಪೂರ್ವಪರ ಪರಿಶೀಲಿಸದೆ ಅವರ ಹೆಸರು ಶಿಫಾರಸ್ಸು ಮಾಡಬಾರದಿತ್ತು.
 









3. ಶಾದಿ ಭಾಗ್ಯ (ಬಿದಾಯಿ) : ಮುಸ್ಲಿಂ ಸಮುದಾಯದ ಯುವತಿಯರು ಮದುವೆಯಾಗುವಾಗ 50 ಸಾವಿರ ಕೊಡುವ ಯೋಜನೆ 'ಶಾದಿ ಭಾಗ್ಯ'ವೆಂದು ಜನಪ್ರಿಯಗೊಂಡಿತು. ಇದು ಅಲ್ಪಸಂಖ್ಯಾತರ ಓಲೈಕೆಯೆಂದು ರಾಜ್ಯಾದ್ಯಂತ ವಿವಾದದ ಕಿಡಿ ಹೊತ್ತಿಕೊಂಡಿತು. ವಾಸ್ತವದಲ್ಲಿ ಅಲ್ಪಸಂಖ್ಯಾತರ ಅನುದಾನದಡಿ ಬಿದಾಯಿ ಎಂಬ ಯೋಜನೆಯನ್ನು ಬಜೆಟ್‌ನಲ್ಲಿಯೇ ಪ್ರಕಟಿಸಲಾಗಿದ್ದರೂ, ಈ ಅಂಶ ಮನದಟ್ಟಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಪ್ರತಿಪಕ್ಷಗಳು ಇದನ್ನು ವಿವಾದವಾಗಿಸಿದಾಗ ಸಿಎಂ ಒಬ್ಬರೇ ಏಕಾಂಗಿಯಾಗಿ ಸಮರ್ಥನೆಗೆ ಮುಂದಾಗಿದ್ದು ಕೂಡ ಸರಕಾರದ ಹಿನ್ನಡೆಗೆ ಕಾರಣವಾಯಿತು.
 
 ವೈಭವದ ವಿವಾಹ ನಿಯಂತ್ರಣ ಪ್ರಸ್ತಾಪ  

ಪರಮ ವೈಭೋಗದ ವಿವಾಹಗಳಿಗೆ ಕಡಿವಾಣ ಹಾಕುವ ಸಂಬಂಧವೂ ವಿಧೇಯಕ ತರುವುದಾಗಿ ಕಾನೂನು ಸಚಿವರು ಮತ್ತೊಂದು ಪ್ರಸ್ತಾಪ ಮುಂದಿಟ್ಟಿದ್ದರು. ನಿಜಕ್ಕೂ ಸರಳ ವಿವಾಹದ ಕಲ್ಪನೆ ಮಾದರಿಯಾದುದು. ಪೂರ್ವ ಸಿದ್ಧತೆ, ಸ್ಪಷ್ಟತೆಯಿಲ್ಲದೆ ನೀಡಿದ ಈ ಹೇಳಿಕೆಯೂ ವಿವಾದ ಸೃಷ್ಟಿಸಿತು. ಮದುವೆ, ಮುಂಜಿಯೆಲ್ಲ ಅವರವರ ವೈಯಕ್ತಿಕ ವಿಚಾರ. ಸರಕಾರಕ್ಕೇಕೆ ತಲೆಬಿಸಿ. ಅಷ್ಟಕ್ಕೂ ಬಾಳೆ ಎಲೆ ಲೆಕ್ಕ ಹಾಕಿ ತೆರಿಗೆ ವಸೂಲಿ ಮಾಡಿಯಾರು. ತಾರಾ ಹೋಟೆಲ್‌ಗಳಲ್ಲಿ ಶೋಭನ ಶಾಸ್ತ್ರ ಮಾಡಿಕೊಳ್ಳುತ್ತಾರಲ್ಲ, ಅಂತಹ ಬೆಡ್ ರೂಮ್‌ಗೂ ಹೋಗಿ ದುಂದುವೆಚ್ಚದ ಲೆಕ್ಕಾಚಾರ ಮಾಡಲು ಸರಕಾರಕ್ಕೆ ಆಗುತ್ತದಾ ? ಎನ್ನುವ ರೀತಿಯಲ್ಲಿ ಚರ್ಚೆ ನಡೆದವು. ಅಲ್ಲಿಗೆ ಸರಳ ವಿವಾಹದ ಪ್ರತಿಪಾದನೆಯೂ ಬದಿಗೆ ಸರಿಯಿತು !
 







ಆಪಾದಿತರ ಸಂಪುಟ ಸೇರ್ಪಡೆ  

ಸ್ವಚ್ಛ, ಪಾರದರ್ಶಕ ಆಡಳಿತ ನೀಡುವುದಾಗಿ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಈ ಅಂಶವನ್ನು ಒತ್ತಿ ಹೇಳಿದರು. ಸಂತೋಷ್ ಲಾಡ್ ವಿರುದ್ಧ ಗಣಿ ಅಕ್ರಮದ ಆಪಾದನೆ ಬಂದಾಗ ಅವರನ್ನು ಸಂಪುಟದಿಂದ ಕೈಬಿಟ್ಟರು. ನಂತರ ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಗಂಭೀರ ಆರೋಪಕ್ಕೆ ಗುರಿಯಾಗಿರುವ ಡಿ.ಕೆ. ಶಿವಕುಮಾರ್ ಮತ್ತು ರೋಷನ್ ಬೇಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಈಗ ಖಮರುಲ್ ಇಸ್ಲಾಂ, ಮಹದೇವ ಪ್ರಸಾದ್, ದಿನೇಶ್ ಗುಂಡೂರಾವ್ ವಿರುದ್ಧವೂ ಗುರುತರ ಆರೋಪ ಕೇಳಿ ಬಂದಿದ್ದು, ಇದು ಕೂಡ ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಕೊಟ್ಟಂತಾಗಿದೆ. ಈ ವಿಷಯದಲ್ಲಿ ಖಚಿತ ನಿಲುವು ತಳೆಯದಿರುವುದು ಸರಕಾರದ ವರ್ಚಸ್ಸಿಗೆ ಪೆಟ್ಟು ನೀಡಿತು.
 
ಅಂತರಿಕ್ಷದ ಯಶೋಗಾಥೆ 
 
ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ವರ್ಷ ವೈಜ್ಞಾನಿಕ ಕ್ಷೇತ್ರದಲ್ಲಿ ಹಲವು ಹೊಸ ಶೋಧ, ಆವಿಷ್ಕಾರ, ಅಚ್ಚರಿಗಳನ್ನು ಬಿಚ್ಚಿಟ್ಟಿದೆ. ಅದರಲ್ಲೂ ಬಾಹ್ಯಾಕಾಶ ತಂತ್ರಜ್ಞಾನ, ವೈದ್ಯಕೀಯ ಸಂಶೋಧನೆಗಳು ನಿಬ್ಬೆರಗುಗೊಳಿಸುವುದರ ಜತೆಗೆ ಹೊಸ ಆಶಯಗಳನ್ನು ಮೂಡಿಸಿವೆ. ಮಂಗಳಯಾನದ ಯಶಸ್ಸಂತೂ ಭಾರತದ ಪಾಲಿಗೆ ಮಹಾ ಹೆಮ್ಮೆ. ಮನುಷ್ಯರನ್ನೇ ಮಂಗಳನ ಅಂಗಳಕ್ಕೆ ಕಳುಹಿಸುವ ಪ್ಲಾನ್ ಕೂಡಾ ಯಶಸ್ಸಿನ ದಾರಿಯಲ್ಲಿದೆ.
 
ಮಂಗಳನೆಡೆಗೆ ಪಯಣ
2014ನ್ನು ಮಂಗಳ ವರ್ಷ ಎನ್ನಲು ಅಡ್ಡಿ ಇಲ್ಲ. ಒಂದೆಡೆ ಭಾರತ ಅತ್ಯಂತ ಕಡಿಮೆ ವೆಚ್ಚದಲ್ಲಿ ಮಂಗಳಯಾನ ನಡೆಸಿದ್ದರೆ, ಇನ್ನೊಂದೆಡೆ ಅಮೆರಿಕದ ನಾಸಾ ಸಹ ಮಂಗಳನತ್ತ ಹೆಚ್ಚು ಆಸಕ್ತಿ ವಹಿಸಿ ನೌಕೆಯನ್ನು ಕಳುಹಿಸಿದೆ.
 
ಮಂಗಳನ ಕಕ್ಷೆಯಲ್ಲಿ ಗಗನ ನೌಕೆಯೊಂದನ್ನು ಸ್ಥಾಪಿಸುವ ಮಾಸ್ ಆರ್ಬಿಟರ್ ಮಿಷನ್ (ಮಾಮ್)ನಲ್ಲಿ ಇಸ್ರೋ ಸಾಧಿಸಿದ ಯಶಸ್ಸು ಭಾರತವನ್ನು ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗ್ರಗಣ್ಯ ರಾಷ್ಟ್ರಗಳ ಸಾಲಿಗೆ ತಂದು ನಿಲ್ಲಿಸಿದೆ. 2014ರ ಸೆ. 24ರಂದು ಈ ಸಾಧನೆ ಮಾಡಿದ ಭಾರತ, ರಷ್ಯಾ, ಅಮೆರಿಕ, ಯುರೋಪ್ ಬಳಿಕದ ನಾಲ್ಕನೇ ರಾಷ್ಟ್ರವಾಗಿ ತಲೆ ಎತ್ತಿ ನಿಂತಿದೆ. ಅದರಲ್ಲೂ ಕೇವಲ 450 ಕೋಟಿ ರೂ. ವೆಚ್ಚದಲ್ಲಿ ಅಸಾಧ್ಯವನ್ನು ಸಾಧ್ಯ ಮಾಡಿದ್ದು ಮಹಾ ವಿಕ್ರಮ. 2013ರ ನ. 5ರಂದು ಶ್ರೀಹರಿಕೋಟಾದಿಂದ ಉಡ್ಡಯನಗೊಂಡ 1337 ಕೆಜಿ ತೂಕದ ಕಕ್ಷೆಗಾಮಿ 298 ದಿನಗಳ ಮಹಾಪಯಣದ ಬಳಿಕ ಮಂಗಳನ ಕಕ್ಷೆಯನ್ನು ಸೇರಿದ್ದು, ಮಹತ್ವದ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ನಾಸಾ ಈಗಾಗಲೇ ಮಂಗಳನ ಅಂಗಳವನ್ನೇ ತಲುಪಿದ್ದರೂ ಅತಿ ಕಡಿಮೆ ವೆಚ್ಚದ ಪ್ರಾಜೆಕ್ಟ್ ಮತ್ತು ದಾಪುಗಾಲಿನ ವೇಗ ಜಗತ್ತಿನ ಗಮನ ಸೆಳೆದಿದೆ.
 
ಅಮೆರಿಕದ ನಾಸಾ ಮಂಗಳನ ಶೋಧಕ್ಕಾಗಿ ಕಳುಸಿದ 10ನೇ ಗಗನಗಾು ನೌಕೆ ಮಾವೆನ್ ಸೆ. 21ರಂದು ಅಂಗಳವನ್ನು ತಲುಪಿತು. ಅದಾಗಲೇ ಮಂಗಳನ ನೆಲದಲ್ಲಿ ಸಂಚರಿಸುತ್ತಿದ್ದ ಆಪರ್ಚ್ಯುನಿಟಿ ಮತ್ತು ಕ್ಯೂರಿಯಾಸಿಟಿ ನೌಕೆಗಳನ್ನು ಇದು ಸೇರಿಕೊಂಡಂತಾಯಿತು.
 
ನಾಸಾ ಈಗಾಗಲೇ ಕಳುಹಿಸಿಕೊಟ್ಟಿದ್ದ ಕ್ಯೂರಿಯಾಸಿಟಿ ರೋವರ್ ಮಂಗಳನಲ್ಲಿ ಮೀಥೇನ್ ಅಂಶ ಇರುವ ಕುರಿತು ಸುಳಿವನ್ನು ನೀಡಿದೆ. ಮಂಗಳನ ಕಲ್ಲುಗಳಲ್ಲಿ ಇಂಗಾಲದ ಅಂಶ ಇರುವುದನ್ನು ರೋವರ್ ಪತ್ತೆ ಹಚ್ಚಿದ್ದು, ವೈಜ್ಞಾನಿಕ ವಲಯದ ದೊಡ್ಡ ಸಾಧನೆ ಎಂದೇ ಬಿಂಬಿಸಲಾಗುತ್ತಿದೆ.
 
ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು  
 
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾಲಿಗೆ ಹೆಚ್ಚು ಧೂಳೆಬ್ಬಿಸಿದ ವರ್ಷ 2014. ಮೊಬೈಲ್ ಪ್ಲ್ಯಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ವಿಂಡೋಸ್ ಹಾಗೂ ಆಪಲ್‌ಗಳು ಅತ್ಯಾಧುನಿಕ ತಂತ್ರಜ್ಞಾನದ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಬಿರುಗಾಳಿಯೆಬ್ಬಿಸಿದರೆ, ನವನವೀನ ತಂತ್ರಜ್ಞಾನದ ಕಂಪ್ಯೂಟರ್‌ಗಳು, ಟು-ಇನ್-ಒನ್ ಕೈಗೆಟಕುವ ದರದಲ್ಲಿ ಲಭ್ಯವಾದವು. ಆನ್‌ಲೈನ್ ಮಾರಾಟದ ಮೂಲಕ ಕುಳಿತಲ್ಲೇ ಶಾಪಿಂಗ್ ಅನುಭವ ನೀಡಿದವು.
 
ಮೊಬೈಲ್, ಕಂಪ್ಯೂಟರ್, ಟ್ಯಾಬ್ಲೆಟ್, ಫ್ಯಾಬ್ಲೆಟ್ ಕ್ರಾಂತಿ
ವಿನೂತನ ತಂತ್ರಜ್ಞಾನಗಳು, ಆಪ್‌ಗಳು, ಸ್ಟಾರ್ಟಪ್‌ಗಳ ರೂಪದಲ್ಲಿ ಜನರನ್ನು ಆಕರ್ಷಿಸತೊಡಗಿದರೆ, ಸ್ಮಾರ್ಟ್‌ಫೋನ್ ದಿಗ್ಗಜರು ಸಾವಿರಾರು ಸಂಖ್ಯೆಯ ಹೊಸ ಹೊಸ ಸಾಧನಗಳನ್ನು ಪೈಪೋಟಿ ದರದಲ್ಲಿ ಜನರಿಗೆ ನೀಡತೊಡಗಿದವು. ಚೀನಾದ ಪ್ರಮುಖ ಕಂಪನಿಗಳೂ ಭಾರತಕ್ಕೆ ಲಗ್ಗೆ ಇಟ್ಟಿದ್ದು ಪ್ರಧಾನ ಕಾರಣ. ಶ್ವೋಮಿ, ಹ್ಯುವೈ, ಒನ್‌ಪ್ಲಸ್, ಜಿಯೋನಿ, ಹೆಯರ್, ಒಪ್ಪೋ, ಝಡ್‌ಟಿಇ ಮುಂತಾದ ಚೀನೀ ಕಂಪನಿಗಳು ಸ್ಯಾಮ್ಸಂಗ್, ಸೋನಿ, ಹೆಚ್‌ಟಿಸಿ, ಆ್ಯಪಲ್‌ಗಳ 40-50 ಸಾವಿರ ರೂ. ಬೆಲೆ ಬಾಳುವ ಸಾಧನಗಳಿಗೆ ಸರಿಸಮವಾದ ಸ್ಮಾರ್ಟ್‌ಫೋನ್‌ಗಳು 10ರಿಂದ 20 ಸಾವಿರ ರೂ. ಆಸುಪಾಸಿನಲ್ಲಿ ದೊರೆಯುವಂತೆ ಮಾಡಿದವು. ಭಾರತೀಯ ಗ್ರಾಹಕನಿಗೆ ಲಾಭವಾಗಿದ್ದಂತೂ ನಿಜ.
 
ಕಾರ್ಯಾಚರಣಾ ವ್ಯವಸ್ಥೆಗಳು: ಲಾಲಿಪಾಪ್, ವಿಂಡೋಸ್ 8.1, ಐಒಎಸ್ 8,
 
ಟಚ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಇಳಿಮುಖವಾಗಿ ಜನಾಕರ್ಷಣೆ ಹೆಚ್ಚಾಗಿರುವುದರೊಂದಿಗೆ ಜನರಿಗೆ ಅತ್ಯುತ್ತಮ ಸೌಕರ್ಯ ಒದಗಿಸಲು ಪ್ರಮುಖ ತಂತ್ರಾಂಶ ದಿಗ್ಗಜರು ಪೈಪೋಟಿ ನಡೆಸಿದವು. ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯಡಿ ಕಾರ್ಯಾಚರಿಸುವ ಮೊಬೈಲ್‌ಗಳಿಗೆ ಹೊಸ ಆವತ್ತಿ 5.0 ಲಾಲಿಪಾಪ್ ಹೆಸರಿನೊಂದಿಗೆ ಘೋಷಣೆಯಾದರೆ, ವಿಂಡೋಸ್ ಕೂಡ ಹಿಂದೆ ಬೀಳಲಿಲ್ಲ. ಟ್ಯಾಬ್ಲೆಟ್, ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್ ಎಲ್ಲದಕ್ಕೂ ಹೊಂದಿಕೆಯಾಗುವ ವಿಂಡೋಸ್ 8.1 ಕಾರ್ಯಾಚರಣಾ ವ್ಯವಸ್ಥೆ ಹೊರತಂದಿತಲ್ಲದೆ, ಮುಂದಿನ ವರ್ಷ ವಿಂಡೋಸ್ 10 ಬಿಡುಗಡೆ ಮಾಡುವುದಾಗಿ ಘೋಷಿಸಿತು. ಆ್ಯಪಲ್ ಕಂಪನಿ ಐಒಎಸ್ 8 ಮೂಲಕ ತಂತ್ರಜ್ಞಾನದ ಉತ್ತುಂಗ ಅನುಭವವನ್ನು ಜನರಿಗೆ ಒದಗಿಸಿತು. ಜಾವಾ, ಸಿಂಬಿಯಾನ್ ಆಧಾರಿತ ಮೊಬೈಲುಗಳು ಬಹುತೇಕ ಅವಸಾನದ ಹಂತ ತಲುಪಿದವು.
 
4ಜಿ ತಂತ್ರಜ್ಞಾನ
 
ಭಾರತದಲ್ಲಿ ಜಿಪಿಆರ್‌ಎಸ್/ಎಡ್ಜ್ (2ಜಿ) ಇಂಟರ್ನೆಟ್ ಸಂಪರ್ಕ ವ್ಯವಸ್ಥೆ ಇನ್ನೂ ಕೂಡ ಸರಿಯಾಗಿ ದೇಶದ ಮೂಲೆ ಮೂಲೆಗೆ ತಲುಪಿಲ್ಲ. ಅಷ್ಟರಲ್ಲಾಗಲೇ 3ಜಿ ತಂತ್ರಜ್ಞಾನದ ಮೂಲಕ ಇಂಟರ್ನೆಟ್ ಸಂಪರ್ಕವು ನಗರ ಪ್ರದೇಶಗಳಲ್ಲಿ ತನ್ನ ಛಾಪು ಮೂಡಿಸಿತು. ವರ್ಷದ ಕೊನೆ ಕೊನೆಗೆ ಮತ್ತಷ್ಟು ವೇಗದ ತರಂಗಾಂತರವಿರುವ, ವೇಗವಾಗಿ ವೆಬ್ ಬ್ರೌಸ್ ಮಾಡುವ ಸಾಮರ್ಥ್ಯವಿರುವ 4ಜಿ ತಂತ್ರಜ್ಞಾನವೂ ಬೆಂಗಳೂರು ಸಹಿತ ದೇಶದ ಕೆಲವೇ ನಗರಗಳಲ್ಲಿ ಆರಂಭವಾಯಿತು. ಬೆಂಗಳೂರು, ಮೈಸೂರು, ಮೈಸೂರು ಮುಂತಾದ ಪಟ್ಟಣಗಳಲ್ಲಿ ವೈ-ಫೈ ಇಂಟರ್ನೆಟ್ ವಲಯವೂ ರೂಪುಗೊಂಡಿತು.
 
ನೋಕಿಯಾ ಇಳಿಮುಖ -ಮೈಕ್ರೋಸಾಫ್ಟ್ ಮೇಲುಗೈ
 
ಭಾರತೀಯರ ನೆಚ್ಚಿನ ಮೊಬೈಲ್ ಬ್ರ್ಯಾಂಡ್ ನೋಕಿಯಾದ ಮೊಬೈಲ್ ತಯಾರಿಕಾ ಘಟಕವನ್ನು ಮೈಕ್ರೋಸಾಫ್ಟ್ ಕಂಪನಿಯು 750 ಕೋಟಿ ಡಾಲರ್‌ಗೆ ಖರೀದಿಸುವ ಮೂಲಕ ಜಗತ್ತಿನ ಎರಡು ಅತಿ ಜನಪ್ರಿಯ ತಂತ್ರಜ್ಞಾನಗಳು ಒಂದಾದವು. ಸ್ಮಾರ್ಟ್‌ಫೋನ್‌ಗಳ ಅಬ್ಬರಕ್ಕೆ ಒಗ್ಗಿಕೊಳ್ಳಲಾಗದೆ ತೀರಾ ಹಿನ್ನಡೆ ಅನುಭವಿಸಿದ ನೋಕಿಯಾ, ಆಂಡ್ರಾಯ್ಡ್ ಎಕ್ಸ್ ಸರಣಿಯ ಮೂಲಕ ಚೇತರಿಸಿಕೊಳ್ಳಲು ಪ್ರಯತ್ನಿಸಿತಾದರೂ, ವಿಫಲವಾಯಿತು. ಮೈಕ್ರೋಸಾಫ್ಟ್‌ನ ವಿಂಡೋಸ್ ತಂತ್ರಾಂಶದ ಲುಮಿಯಾ ಫೋನುಗಳು ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತಿರುವಂತೆಯೇ, ಆ ಕಂಪನಿಯೇ ನೋಕಿಯಾ ವಿಭಾಗವನ್ನು ತನ್ನದಾಗಿಸಿಕೊಂಡು, ಮೈಕ್ರೋಸಾಫ್ಟ್ ಲುಮಿಯಾ 535 ಮೂಲಕ ಪರಿಪೂರ್ಣವಾಗಿ, ತನ್ನದೇ ಬ್ರ್ಯಾಂಡ್ ಬಲದಲ್ಲಿ ಮೊಬೈಲ್ ಮಾರುಕಟ್ಟೆಗೆ ಜಿಗಿಯಿತು.
 

ಸ್ಮಾರ್ಟ್‌ವಾಚ್‌ಗಳ ಯುಗ 
 
ಜನರಲ್ಲಿ ಫಿಟ್ನೆಸ್ ಬಗ್ಗೆ ಜಾಗತಿ ಹೆಚ್ಚಾಗಿ, ನಾವು ನಡೆದ ಹೆಜ್ಜೆಗಳ ಲೆಕ್ಕ ತಿಳಿಸುವ, ಕ್ಯಾಲೊರಿ ಲೆಕ್ಕಾಚಾರ ನೀಡುವ, ಜತೆಗೆ ಫೋನ್‌ಗೆ ಬಂದ ಸಂದೇಶಗಳನ್ನು ಕೈಯಲ್ಲಿ ಓದಲು ಅನುಕೂಲ ಮಾಡುವ ಸ್ಮಾರ್ಟ್‌ಫೋನುಗಳು ಮಾರುಕಟ್ಟೆಗೆ ಆಗಮಿಸತೊಡಗಿದವು. ಇದಕ್ಕಾಗಿಯೇ ಗೂಗಲ್, 'ಆಂಡ್ರಾಯ್ಡ್ ವೇರ್' ತಂತ್ರಜ್ಞಾನವನ್ನು ಅಭಿವದ್ಧಿಪಡಿಸಿತು. ಇದರ ಆಧಾರದಲ್ಲಿ ಎಲ್‌ಜಿ ಜಿ ವಾಚ್, ಮೋಟೋರೋಲ ಮೋಟೋ 360, ಸ್ಯಾಮ್ಸಂಗ್ ಗಿಯರ್ ಲೈವ್, ಆಸುಸ್ ಝೆನ್‌ವಾಚ್ ಮುಂತಾದ ಸ್ಮಾರ್ಟ್‌ವಾಚ್‌ಗಳ ಆಗಮನವಾಯಿತು. ಆ್ಯಪಲ್ ಕೂಡ ಐವಾಚ್ ಸಿದ್ಧಪಡಿಸುತ್ತಿದೆ ಎಂಬ ಸುದ್ದಿಯು ಈ ಕಂಪನಿಗಳನ್ನು ತರಾತುರಿಗೊಳಿಸಿತು. ಮೈಕ್ರೋಸಾಫ್ಟ್ ಹಿಂದೆ ಬೀಳಲಿಲ್ಲ, ಫಿಟ್‌ಬಿಟ್ ಆ್ಯಪ್ ಮೂಲಕ ಮೈಕ್ರೋಸಾಫ್ಟ್ ಬ್ಯಾಂಡ್ ಅನ್ನು ಮಾರುಕಟ್ಟೆಗಿಳಿಸಿತು.
 
ದೇಶೀ ತಯಾರಕರಿಗೆ ಆಂಡ್ರಾಯ್ಡ್ ಒನ್, ವಿಂಡೋಸ್ 8 
 
ದೇಶೀ ಮೊಬೈಲ್ ತಯಾರಕರಿಗೆ ಉತ್ತೇಜನ ನೀಡಿ ಜನ ಸಾಮಾನ್ಯರನ್ನು ತಂತ್ರಜ್ಞಾನದತ್ತ ಸೆಳೆಯುವ ನಿಟ್ಟಿನಲ್ಲಿ ಗೂಗಲ್ ಕಂಪನಿಯು, ಆಂಡ್ರಾಯ್ಡ್ ಒನ್ ಎಂಬ ವ್ಯವಸ್ಥೆಯನ್ನು ಪರಿಚಯಿಸಿ, ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಯನ್ನು ಕಾರ್ಬನ್, ಮೈಕ್ರೋಸಾಫ್ಟ್ ಹಾಗೂ ಸ್ಪೈಸ್ ಕಂಪನಿಗಳಿಗೆ ವಿತರಿಸಿತು. ತತ್ಫಲವಾಗಿ 6 ಸಾವಿರ ರೂ. ಆಸುಪಾಸಿನಲ್ಲಿ ಆಧುನಿಕ ಸೌಲಭ್ಯದ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದವು. ಅವು ಅಷ್ಟೇನೂ ಛಾಪು ಮೂಡಿಸಿದಂತೆ ತೋರುವುದಿಲ್ಲ. ಇದರಿಂದ ಪ್ರೇರಿತವಾದ ಮೈಕ್ರೋಸಾಫ್ಟ್ ಕೂಡ, ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯನ್ನು ದೇಶೀ ತಯಾರಕ ಕಂಪನಿಗಳಿಗೆ ಒದಗಿಸಿದ ಪರಿಣಾಮ, ವಿಂಡೋಸ್ ಆಧಾರಿತ ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ಫೋನುಗಳು ಅಗ್ಗದ ದರದಲ್ಲಿ ಮಾರುಕಟ್ಟೆಗೆ ಬಂದವು.
 
ಆನ್‌ಲೈನ್ ಶಾಪಿಂಗ್ ಉತ್ಸವ
 
ಪ್ರತಿವರ್ಷದಂತೆ ಗೂಗಲ್ ಕಂಪನಿಯು ಆನ್‌ಲೈನ್ ಶಾಪಿಂಗ್ ಉತ್ಸವವನ್ನು ಎಖಊ.ಜ್ಞಿ ತಾಣದ ಮೂಲಕ ವರ್ಷಾಂತ್ಯದಲ್ಲಿ ನಡೆಸಿತು. ಇದಕ್ಕೆ ಮುನ್ನವೇ, ವಿದೇಶದಲ್ಲಿ ಬ್ಲ್ಯಾಕ್ ಫ್ರೈಡೇ, ಸೈಬರ್ ಮಂಡೇ ಮುಂತಾದ ಹೆಸರಿನಲ್ಲಿ ನಡೆಯುತ್ತಿದ್ದ ಭರ್ಜರಿ ಆನ್‌ಲೈನ್ ವಹಿವಾಟು ಭಾರತದಲ್ಲಿಯೂ ಛಾಪು ಮೂಡಿಸಿತು. ಮುಖ್ಯವಾಗಿ ಫ್ಲಿಪ್ ಕಾರ್ಟ್, ಅಮೆಜಾನ್ ಹಾಗೂ ಸ್ನ್ಯಾಪ್‌ಡೀಲ್ ಅಂತರ್ಜಾಲ ತಾಣಗಳು, ಭರ್ಜರಿ ಕೊಡುಗೆಯ ಮೂಲಕ ಗ್ರಾಹಕರ ಖರೀದಿ ಚಾಳಿಗೆ ಹುಚ್ಚೆಬ್ಬಿಸಿದವು. ವಿಶೇಷವಾಗಿ ಎಲೆಕ್ಟ್ರಾನಿಕ್ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ, ಸ್ಫರ್ಧಾತ್ಮಕ ಬೆಲೆಗೆ ಲಭ್ಯವಾದವು. ಫ್ಲಿಪ್‌ಕಾರ್ಟ್ ಅಕ್ಟೋಬರ್ ಆರರಂದು ನಡೆಸಿದ 'ಬಿಗ್ ಬಿಲಿಯನ್ ಡೇ' ಮಾರಾಟ ಅಂತಾರಾಷ್ಟ್ರೀಯವಾಗಿ ಸದ್ದು ಮಾಡಿತು. ತೀರಾ ಅಗ್ಗದ ದರದಲ್ಲಿ ಸರಕುಗಳು ದೊರೆತಾಗ, ರೀಟೇಲ್ ವ್ಯಾಪಾರಿಗಳು ತಕರಾರೆತ್ತಿದರು. ಸರಕಾರ ತನಿಖೆ ನಡೆಸುತ್ತದೆ ಎಂಬ ಮಟ್ಟಿಗೂ ವಿವಾದ ಹೋಯಿತು. ಅದೇ ದಿನ, ಪ್ರತಿಸ್ಫರ್ಧಿಗಳಾದ ಅಮೆಜಾನ್ ಮತ್ತು ಸ್ನ್ಯಾಪ್‌ಡೀಲ್ ಕೂಡ ಭರ್ಜರಿ ಕೊಡುಗೆ ಪ್ರಕಟಿಸಿ, ತಾವೂ ಲಾಭಾಂಶ ಬಾಚಿಕೊಂಡವು. ಗ್ರಾಹಕರಿಗೆ ಕಡಿಮೆ ದರದಲ್ಲಿ ಸರಕು ಲಭ್ಯವಾಯಿತು. ಅಗ್ಗದ ದರದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಪಡೆಯುವ ಅವಕಾಶ ವಂಚಿತರು ಕೈಕೈ ಹಿಸುಕಿಕೊಂಡರು.
 
ಸ್ಯಾಮ್ಸಂಗ್‌ಗೆ ಹಿನ್ನಡೆ
 
ಜಾಗತಿಕವಾಗಿ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಸ್ಯಾಮ್ಸಂಗ್‌ನ ಪ್ರಾಬಲ್ಯವೂ, ವಾರ್ಷಿಕ ಆದಾಯವೂ ಕುಸಿಯತೊಡಗಿತು. ಹತ್ತು ಹಲವು ವಿಭಿನ್ನ ಮಾಡೆಲ್‌ಗಳನ್ನು ಮಾರುಕಟ್ಟೆಗಿಳಿಸಿ ಗೊಂದಲ ಮೂಡಿಸಿದ್ದೇ ಇದಕ್ಕೆ ಕಾರಣ ಎಂಬ ವಿಶ್ಲೇಷಣೆ ಒಂದೆಡೆಯಿಂದ ವ್ಯಕ್ತವಾಯಿತಾದರೂ, ಧತಿಗೆಡದ ಅದು ಗೆಲಾಕ್ಸಿ ಎಸ್ 5 ಸೇರಿದಂತೆ ಐಷಾರಾಮಿ ಫೋನುಗಳನ್ನು ಬಿಡುಗಡೆ ಮಾಡಿತು. ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗೆ ಗುಡ್‌ಬೈ ಹೇಳುವ ಮೊದಲ ಹೆಜ್ಜೆಯಾಗಿ, ತಾನೇ ರೂಪಿಸಿದ ಟೈಜೆನ್ ಎಂಬ ಕಾರ್ಯಾಚರಣಾ ವ್ಯವಸ್ಥೆಯಿರುವ ಫೋನುಗಳನ್ನು ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿತು. ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಗೆಲಾಕ್ಸಿ ನೋಟ್ ಎಡ್ಜ್ ಎಂಬ ಅರುವತ್ತೈದು ಸಾವಿರ ಬೆಲೆಬಾಳುವ ಮಾಡೆಲ್ ಪರಿಚಯಿಸಿತು.
 
ಜಿಗಿದು ಕುಳಿತ ಮೋಟೋರೋಲ 
 
ಭಾರತದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಳಿಕ, ಗೂಗಲ್‌ನಿಂದ ಖರೀದಿಗೊಳಪಟ್ಟು, ಆ ಬಳಿಕ ಲೆನೋವೋ ಕಂಪನಿಯ ಪಾಲಾದ ಮೋಟೋರೋಲ ಕಂಪನಿ, ಫ್ಲಿಪ್ ಕಾರ್ಟ್‌ನ ಮೂಲಕವಾಗಿ ಮರುಹುಟ್ಟು ಪಡೆಯಿತು. ಅಗ್ಗದ ದರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವಿರುವ ಮೋಟೋ ಜಿ, ತದನಂತರದಲ್ಲಿ ಮೋಟೋ ಇ, ಮೋಟೋ ಎಕ್ಸ್ ಸ್ಮಾರ್ಟ್‌ಫೋನ್‌ಗಳ ಮೂಲಕವಾಗಿ, ಆನ್‌ಲೈನ್‌ನಲ್ಲಿ ಮಾತ್ರ ಲಭ್ಯ ಎಂಬ ಮಿತಿಯೊಂದಿಗೆ ಭಾರತೀಯರ ಮನ ಸೆಳೆದಿದ್ದು ವಿಶೇಷ. ಇದು ಆನ್‌ಲೈನ್ ಮಾರಾಟದ ವಿನೂತನ ತಂತ್ರಗಾರಿಕೆಯಾಗಿಯೂ ಜನ ಮಾನಸದಲ್ಲಿ ಉಳಿಯಿತು.
 
ಎದ್ದು ಬಿದ್ದ ಟ್ಯಾಕ್ಸಿ ಆಪ್‌ಗಳು 
 
ಮೊಬೈಲ್‌ನಲ್ಲೇ ಟ್ಯಾಕ್ಸಿ ಬುಕ್ ಮಾಡುವ ಆ್ಯಪ್‌ಗಳಾದ ಉಬೆರ್, ಓಲಾ ಕ್ಯಾಬ್ಸ್, ಟ್ಯಾಕ್ಸಿಫಾರ್‌ಶೂರ್, ಮೇರು ಮುಂತಾದವು ಅತ್ಯಂತ ಅಗ್ಗದ ದರದಲ್ಲಿ ಜನರಿಗೆ ಸೇವೆ ಒದಗಿಸತೊಡಗಿದವು. ಕರೆದಲ್ಲಿಗೆ ಬಾರದೆ, ಮೀಟರ್ ಹಾಕದೆ ಎರ‌್ರಾಬಿರ‌್ರಿ ದರ ವಿಧಿಸುವ ಕೆಲವು ಆಟೋ ರಿಕ್ಷಾದವರು ಮತ್ತು ಉತ್ತಮ ಸೇವೆ ನೀಡುತ್ತಿರುವ ಆಟೋವಾಲಾರೂ ಆತಂಕಕ್ಕೊಳಗಾದರು. ಒಂದು ಹಂತದಲ್ಲಿ, ಪ್ರಯಾಣ ದರ ಇಳಿಸದಿದ್ದರೆ ಉಳಿಗಾಲವಿಲ್ಲ ಎಂದು ಸ್ವತಃ ಆಟೋ ಚಾಲಕರೇ ತಮ್ಮ ಯೂನಿಯನ್ ಮೊರೆ ಹೋದ ಪ್ರಸಂಗವೂ ನಡೆಯಿತು. ಆದರೆ, ಅಷ್ಟರಲ್ಲಿ, ನವೆಂಬರ್ ತಿಂಗಳಲ್ಲಿ ದಿಲ್ಲಿಯಲ್ಲಿ ಉಬರ್ ಟ್ಯಾಕ್ಸಿ ಚಾಲಕನೊಬ್ಬ ಅತ್ಯಾಚಾರವೆಸಗಿ ಸಿಕ್ಕಿಬಿದ್ದದ್ದು ದೇಶಾದ್ಯಂತ ಸುದ್ದಿಯಾಯಿತು. ಪರಿಣಾಮ, ಆ್ಯಪ್ ಆಧಾರಿತ ಆಟೋ, ಟ್ಯಾಕ್ಸಿಗಳಿಗೆ ದೇಶಾದ್ಯಂತ ಮೂಗುದಾರ ತೊಡಿಸಲಾಯಿತು.
 
ಮೊಬೈಲ್ ಒನ್ 
 
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಕ್ಷಣವೇ ದೇಶದಲ್ಲಿ ಡಿಜಿಟಲ್ ಇಂಡಿಯಾ ಯೋಜನೆ ಘೋಷಿಸಿದರು. ಅದರ ಪರಿಣಾಮವಾಗಿ ಕೇಂದ್ರ ಸರಕಾರದ ಹಲವು ಇಲಾಖೆಗಳ ವೆಬ್ ತಾಣಗಳು ಬದಲಾದವು. ಕೇಂದ್ರವು ಎಟ.ಜ್ಞಿ ಎಂಬ ತಾಣದ ಮೂಲಕ, ನಾಗರಿಕರ ಸಲಹೆ ಪಡೆಯುವ ಕಾರ್ಯಕ್ಕೆ ಮುಂದಾಯಿತು. ಇತ್ತ, ಡಿಜಿಟಲ್ ಕ್ರಾಂತಿಯಲ್ಲಿ ಕರ್ನಾಟಕವೂ ಹಿಂದೆ ಬೀಳಲಿಲ್ಲ. ಸಿದ್ದರಾಮಯ್ಯ ನೇತತ್ವದ ಸರಕಾರವು ಬೆರಳ ತುದಿಯಲ್ಲಿ ಸರಕಾರ ಎಂಬ ಘೋಷಾ ವಾಕ್ಯದೊಂದಿಗೆ, 'ಮೊಬೈಲ್ ಒನ್' ಎಂಬ, ಸಕಲ ಸೇವೆಗಳ ಗುಚ್ಛವೊಂದನ್ನು ಅಕ್ಟೋಬರ್ ತಿಂಗಳಲ್ಲಿ ರಾಜ್ಯಕ್ಕೆ ಪರಿಚಯಿಸಿತು. ಆಪ್ ಅಥವಾ ವೆಬ್ ಮೂಲಕ ಒಂದೇ ಕಡೆ ವಿವಿಧ ಸರಕಾರಿ ಸೇವೆಗಳು, ಕರೆನ್ಸಿ ರೀಚಾರ್ಜ್, ಬಿಲ್ ಪಾವತಿ, ಆರೋಗ್ಯ, ಮಹಿಳಾ ರಕ್ಷಣೆ... ಮುಂತಾದ ಸೇವೆಗಳು ಲಭ್ಯವಾಗಿ, ಹೊಸ ಅಧ್ಯಾಯ ಆರಂಭವಾಯಿತು.
 
ಮತ್ತಷ್ಟು ಗಮನಾರ್ಹ ಸಂಗತಿಗಳು 
 
* ಟ್ವಿಟರ್ ಮಾದರಿಯಲ್ಲೇ ಫೇಸ್‌ಬುಕ್‌ನಿಂದ 'ಟ್ರೆಂಡಿಂಗ್ ಸುದ್ದಿ'
 
* ಸ್ಯಾನ್‌ಡಿಸ್ಕ್‌ನಿಂದ 128 ಜಿಬಿ ಸಾಮರ್ಥ್ಯದ, 200 ಡಾಲರ್ ಬೆಲೆಯ ಮೈಕ್ರೋ ಎಸ್‌ಡಿ ಕಾರ್ಡ್
 
* ಆತಂಕ ಮೂಡಿಸಿದ ಹಾರ್ಟ್‌ಬ್ಲೀಡ್ ಹೆಸರಿನ ಕಂಪ್ಯೂಟರ್ ವೈರಸ್
 
* ಚೀನಾದ ಶ್ವೋಮಿ ಕಂಪನಿಯ ಎಂಐ3, ರೆಡ್‌ಮಿ ಸಾಧನಗಳಿಗೆ ಮಾರುಹೋದ ಭಾರತೀಯರು
 
* ರೈಲು ಟಿಕೆಟ್ ಬುಕ್ ಮಾಡುವ ಐಆರ್‌ಸಿಟಿಸಿ ವೆಬ್ ತಾಣದ ಸಾಮರ್ಥ್ಯ ಹೆಚ್ಚಳ
 
* ಆಪಲ್‌ನಿಂದ ಐಫೋನ್ 6, ಹಾಗೂ 6 ಪ್ಲಸ್ ಬಿಡುಗಡೆ
 
* ಗೂಗಲ್ ನೆಕ್ಸಸ್ 6 ಹಾಗೂ ನೆಕ್ಸಸ್ 9 ಟ್ಯಾಬ್ಲೆಟ್ ಬಿಡುಗಡೆ
 
* ಆಪಲ್‌ನ ಐಕ್ಲೌಡ್‌ಗೆ ಹ್ಯಾಕರ್‌ಗಳು ಕನ್ನ, ಪರಿಣಾಮ ಹಾಲಿವುಡ್ ತಾರೆಯರ ನಗ್ನ ಚಿತ್ರಗಳು ಇಂಟರ್ನೆಟ್‌ನಲ್ಲಿ ಹರಿದಾಡಿದವು
 
* ಕ್ಲೌಡ್ ಸ್ಟೋರೇಜ್ ಸೇವೆ ಒದಗಿಸುವ ಕಂಪನಿ ಡ್ರಾಪ್‌ಬಾಕ್ಸ್‌ನ 70 ಲಕ್ಷ ಮಂದಿ ಬಳಕೆದಾರರ ಪಾಸ್‌ವರ್ಡ್ ಬಹಿರಂಗ
 
* ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್,ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಅವರಿಂದ ಭಾರತ ಭೇಟಿ
 
* ಸೋನಿ ಪಿಕ್ಟರ್ಸ್ ಕಂಪನಿಯ ಕಂಪ್ಯೂಟರ್ ಹ್ಯಾಕ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಮಧ್ಯೆ ತಿಕ್ಕಾಟ, 'ದಿ ಇಂಟರ್ವ್ಯೆ' ಚಲನಚಿತ್ರ ಬಿಡುಗಡೆಗೆ ಅಡ್ಡಿ
 
ಉತ್ತರಖಂಡದಲ್ಲಿ ಜಲಪ್ರಳಯ 
 
ಉತ್ತರಖಂಡದಲ್ಲಿ ಜೂ.17 ಮತ್ತು 18ರಂದು ಮೇಘಸ್ಫೋಟ ಸಂಭವಿಸಿ ಭಾರೀ ಮಳೆ ಸುರಿಯಿತು. ಕೇದಾರನಾಥ, ಬದರೀನಾಥ ಸೇರಿದಂತೆ ಉತ್ತರಖಂಡದ ಹಲವು ಪ್ರದೇಶಗಳೂ ಭೂ ಕುಸಿತ, ಪ್ರವಾಹದಿಂದ ತತ್ತಿರಿಸಿ ಹೋದವು. ಈ ದುರಂತದಲ್ಲಿ 5700ಜನರು ಸಾವನ್ನಪ್ಪಿದ್ದರು ಎಂದು ಸರ್ಕಾರ ಘೋಷಣೆ ಮಾಡಿತು. ಆದರೆ, ಸತ್ತವರ ಮತ್ತು ಕಾಣೆಯಾದವರ ಬಗ್ಗೆ ನಿಖರವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರವಾಹದಿಂದ ಕೇದಾರನಾಥನಲ್ಲಿ ದೇವಾಲಯವನ್ನು ಮುಚ್ಚಲಾಗಿತ್ತು. ಸೆ.11ರಂದು ದೇವಾಲಯದಲ್ಲಿ ಪೂಜೆಯನ್ನು ಪುನಃ ಆರಂಭಿಲಾಯಿತು.
 






ದೆಹಲಿ ಗದ್ದುಗೆ ಏರಿದ ಅರವಿಂದ್ ಕೇಜ್ರಿವಾಲ್ 
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ಜನರು ಸಿಎಂ ಪಟ್ಟಕ್ಕೆ ಏರಬಹುದು ಎಂದು 2013ರಲ್ಲಿ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ತೋರಿಸಿದರು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಂತರ ಪಕ್ಷಗಳಿಗೆ ಸೋಲಿನ ರುಚಿ ತೋರಿಸಿದರು. ದೆಹಲಿಯಲ್ಲಿ 15 ವರ್ಷಗಳಿಂದ ಇದ್ದ ಕಾಂಗ್ರೆಸ್ ಪಾರುಪತ್ಯಕ್ಕೆ ಅಂತ್ಯ ಹಾಡಿ, ಸಿಎಂ ಗದ್ದುಗೆ ಏರಿದರು. ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಅವರನ್ನು 20 ಸಾವಿರಕ್ಕೂ ಅಧಿಕ ಮತಗಳ ಅಂತರಿಂದ ಸೋಲಿಸಿದರು.
 








ಇತಿಹಾಸ ಸೇರಿದ ಟೆಲಿಗ್ರಾಂ ವ್ಯವಸ್ಥೆ
 
ಜನರಿಗೆ ಸಂತೋಷ ಮತ್ತು ದುಃಖದ ಸುದ್ದಿಗಳನ್ನು ತ್ವರಿತವಾಗಿ ತಲುಪಿಸುತ್ತಿದ್ದ ಟೆಲಿಗ್ರಾಂ ವ್ಯವಸ್ಥೆ ಕೆಲವೇ ದಿನಗಳಲ್ಲಿ ಇತಿಹಾಸ ಸೇರಿತು. ಹಳ್ಳಿಗಳಲ್ಲಿ ಟೆಲಿಗ್ರಾಂ 'ಸಾವಿನ ದೂತ' ಎಂಬ ಹೆಸರು ಪಡೆದುಕೊಂಡಿತ್ತು. ಟೆಲಿಗ್ರಾಂ ಬಂತೆದರೆ ಯಾರಿಗೆ ಏನೋ ಆಗಿದೆ ಎಂದು ಜನರು ಅರ್ಥಮಾಡಿಕೊಳ್ಳುವ ಮಟ್ಟಿಗೆ ಅದು ಪ್ರಸಿದ್ಧಿ ಪಡೆದಿತ್ತು. ಸುಮಾರು 160 ವರ್ಷಗಳ ಭವ್ಯ ಇತಿಹಾಸ ಹೊಂದಿದ್ದ ಈ ವ್ಯವಸ್ಥೆಯನ್ನು ಜು.14ರಂದು ಸ್ಥಗಿತಗೊಳಿಸಲಾಯಿತು. ಇಂದಿನ ಸ್ಮಾರ್ಟ್ ಫೋನ್, ಇ-ಮೇಲ್, ಎಸ್ಎಂಎಸ್ ಜಗತ್ತಿನಲ್ಲಿ ಟೆಲಿಗ್ರಾಂ ಬೇಡಿಕೆ ಕಳೆದುಕೊಂಡಿದ್ದರಿಂದ ಈ ಸೇವೆಯನ್ನು ಸ್ಥಗಿತಗೊಳಿಸಲಾಯಿತು.
 
ಅಫ್ಜಜ್ ಗುರು ನೇಣಿಗೆ 
 
ಸಂಸತ್ ಭವನದ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಅಫ್ಜಲ್ ಗುರುವನ್ನು ಫೆ.9ರಂದು ರಹಸ್ಯವಾಗಿ ನೇಣುಗಂಬಕ್ಕೆರಿಸಲಾಯಿತು. 10 ವರ್ಷಗಳ ಹಿಂದೆಯೇ ಮರಣದಂಡನೆ ಶಿಕ್ಷೆ ಜಾರಿಯಾಗಿದ್ದರೂ, ತಿಹಾರ್ ಜೈಲಿನಲ್ಲಿ ದಿನಕಳೆಯತ್ತಿದ್ದ ಗುರುವನ್ನು ಜೈಲಿನಲ್ಲಿಯೇ ಗಲ್ಲಿಗೆ ಹಾಕಿ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಯಿತು. ದೇಶಾದ್ಯಂತ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸ್ವಾಗತ ವ್ಯಕ್ತವಾಯಿತು.
 








ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ 
 
ಏ.17ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಬಳಿ ಬಾಂಬ್ ಸ್ಫೋಟಗೊಂಡಿತು. ರಾಜ್ಯ ವಿಧಾನಸಭೆ ಚುನಾವಣೆಗೆ 17 ದಿನ ಬಾಕಿ ಉಳಿದಾಗ ಆಡಳಿತಾರೂಢ ಪಕ್ಷದ ಕಚೇರಿಯ ಬಳಿ ಈ ಬಾಂಬ್ ಸ್ಫೋಟ ಸಂಭವಿಸಿದ್ದು, ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ಸೇರಿದಂತೆ 16 ಜನರು ಈ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ.
 








ಸರಬ್ಜಿತ್ ಸಿಂಗ್ ಪಾಕಿಸ್ತಾನದಲ್ಲಿ ಸಾವು
 
ಆಕಸ್ಮಿಕವಾಗಿ ದೇಶದ ಗಡಿದಾಟಿ ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ಕೈದಿ ಸರಬ್ಜಿತ್ ಸಿಂಗ್ ಮೇಲೆ ಪಾಕಿಸ್ತಾನದ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಿಂಗ್ ಮೇ 2 ರಂದು ಸಾವನ್ನಪ್ಪಿದ್ದರು. ಸಿಂಗ್ ಮೃತದೇಹವನ್ನು ಭಾರತಕ್ಕೆ ಹಸ್ತಾಂತರಿಸಲಾಯಿತು. ಪಂಜಾಬ್ ನಲ್ಲಿ ಸರಬ್ಜಿತ್ ಅಂತ್ಯಕ್ರಿಯೆ ನಡೆಸಲಾಯಿತು.
 
ಜೈಲು ಸೇರಿದ ಮುನ್ನಾಭಾಯಿ 
 
1993ರ ಮುಂಬೈ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಲಿವುಟ್ ನಟ ಸಂಜಯ್ ದತ್ ಅವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾ.22ರಂದು ನ್ಯಾಯಾಲಯ ಆದೇಶ ಹೊರಡಿಸಿತು. ಪುಣೆಯ ಯರವಾಡ ಜೈಲಿನಲ್ಲಿ ಸಂಜಯ್ ದತ್ ಶಿಕ್ಷೆ ಅನುಭವಿಸುತ್ತಿದ್ದು, ಪದೇ ಪದೇ ಪರೋಲ್ ಮೇಲೆ ಹೊರಬಂದು ಮತ್ತೊಂದು ವಿವಾದ ಹುಟ್ಟುಹಾಕಿದ್ದಾರೆ.
 












ಹೈದರಾಬಾದ್ ಬಸ್ ದುರಂತ  
 
ಅ.31ರಂದು ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಜಬ್ಬಾರ್ ಟ್ರಾವೆಲ್ಸ್ ನ ವೋಲ್ವೋ ಬಸ್ ಗೆ ಬೆಂಕಿ ಹೊತ್ತಿಕೊಂಡಿತು. ಅಗ್ನಿ ಆಕಸ್ಮಿಕದಿಂದ 45 ಜನರು ಸಜೀವವಾಗಿ ದಹನವಾದರು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಬೆಂಕಿಯ ಕೆನ್ನಾಲಿಗೆಯಿಂದ ಬಚಾವಾಗಿ ಬಂದರು. ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದ ಕಾರಣ ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
 








ಜೈಲು ಸೇರಿದ ಲಾಲೂ  
 
ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಬಹುಕೋಟಿ ರೂಪಾಯಿ ಮೇವು ಹಗರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಅ.4ರಂದು ಆದೇಶ ನೀಡಿತು. 5 ವರ್ಷ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ.ಗಳ ದಂಡವನ್ನು ಅವರಿಗೆ ವಿಧಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಲಾಲೂ ಸುಪ್ರೀಂಕೋರ್ಟ್ ನಿಂದ ಜಾಮೀನು ಪಡೆದು ಹೊರಬಂದಿದ್ದಾರೆ.
 
 
 





ಎನ್ ಡಿಎ ಮೈತ್ರಿ ಕಡಿದುಕೊಂಡ ಜೆಡಿಯು
 
ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಣೆ ಮಾಡಲಿದ್ದಾರೆ ಎಂದು ಸುಳಿವು ಅರಿತ ಬಿಹಾರ ಸಿಎಂ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟದಿಂದ ಹೊರಬರುವುದಾಗಿ ಜೂ.16ರಂದು ಘೋಷಿಸಿದರು. ಬಿಜೆಪಿಯೊಂದಿಗಿನ 17 ವರ್ಷಗಳ ಬಾಂಧವ್ಯವನ್ನು ಜೆಡಿಯು ಕಡಿದುಕೊಂಡಿತು. ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಘೋಷಿಸಿತು.
 

ಗಾಳಿಸುದ್ದಿಗೆ 115 ಮಂದಿ ಬಲಿಯಾದರು
 
ಮಧ್ಯಪ್ರದೇಶದ ದಾಟಿಯಾ ಜಿಲ್ಲೆಯ ರತನ್ ಗಢದ ಮಾತಾ ದೇವಾ ದೇವಾಲಯದಲ್ಲಿ ಅ.13ರಂದು ಭೀಕರ ಕಾಲ್ತುಳಿತ ಸಂಭವಿಸಿ 30 ಮಕ್ಕಳು ಸೇರಿದಂತೆ 115 ಮಂದಿ ಸಾವನ್ನಪ್ಪಿದರು. ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಇದ್ದ ಸೇತುವೆ ಕುಸಿಯುತ್ತಿದೆ ಎಂದು ಯಾರೋ ಗಾಳಿ ಸುದ್ದಿ ಹಬ್ಬಿಸಿದ್ದರಿಂದ ಭಕ್ತರು ಓಡಲಾರಂಭಿಸಿ ಕಾಲ್ತುಳಿತ ಸಂಭವಿಸಿತ್ತು. 2006ರಲ್ಲೂ ಇದೇ ದೇವಾಲಯದಲ್ಲಿ ಕಾಲ್ತುಳಿತಕ್ಕೆ 60 ಮಂದಿ ಬಲಿಯಾದರು
 
ದಿಲ್ಲಿ ಕಾಮುಕರಿಗೆ ಗಲ್ಲು 
 
ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕರಿಗೆ ದೆಹಲಿ ನ್ಯಾಯಾಲಯ ಸೆ.13ರಂದು ಮರಣದಂಡನೆ ವಿಧಿಸಿತು. 2012ರ ಡಿಸೆಂಬರ್ ನಲ್ಲಿ ಕಾಮುಕರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ನ್ಯಾಯಾಲಯದ ತೀರ್ಪಿಗೆ ದೇಶದಲ್ಲಿ ಸ್ವಾಗತ ವ್ಯಕ್ತವಾಯಿತು. ಆದರೆ, ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲಾಪರಾಧಿಗೆ ನ್ಯಾಯಮಂಡಳಿ ಕೇವಲ 3 ವರ್ಷ ಶಿಕ್ಷೆ ವಿಧಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.
 
ಉತ್ತರ ಪ್ರದೇಶದ ಕೋಮುಗಲಭೆ 60 ಸಾವು
 
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಸೆ.8ರಂದು ಕೋಮುಗಲಭೆ ಸಂಭವಿಸಿತು. ಉತ್ತರ ಪ್ರದೇದಲ್ಲಿ ಭಾರೀ ಕೆಸರೆರಚಾಟಕ್ಕೆ ಘಟನೆ ಗಲಭೆ ಕಾರಣವಾಯಿತು. 60 ಮಂದಿ ಸಾವನ್ನಪ್ಪಿದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸೇರಿದಂತೆ ಹಲವರನ್ನು ಬಂಧಿಸಲಾಯಿತು. ಗಲಭೆ ನಿಯಂತ್ರಿಸಲು ವಿಫಲವಾದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಯಿತು. ಗಲಭೆಯಿಂದ ನಿರಾಶ್ರಿತರಾದರು ಇಂದಿಗೂ ವಾಸಕ್ಕೆ ಮನೆಯಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
 
ಆರುಷಿ ಕೊಲೆ ಪ್ರಕರಣದ ತೀರ್ಪು ಪ್ರಕಟ
 
ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಆರುಷಿ ತಲ್ವಾರ್ ಕೊಲೆ ಪ್ರಕರಣದ ತೀರ್ಪು ನ.25ರಂದು ಹೊರಬಂತು. ನೋಯಿಡಾದಲ್ಲಿ ಆರುಷಿ ತಂದೆ ರಾಜೇಲ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಪ್ರಕರಣದಲ್ಲಿ ದೋಷಿಗಳೆಂದು ನ್ಯಾಯಾಲಯ ಆದೇಶ ನೀಡಿತು ಮತ್ತು ಜೀವಾವಧಿ ಶಿಕ್ಷೆ ವಿಧಿಸಿತು.
 
ಜೈಲಿನಿಂದ ಹೊರಬಂದ ಜಗನ್
 
16 ತಿಂಗಳುಗಳಿಂದ ಜೈಲಿನಲ್ಲಿದ್ದ ವೈಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಜಗನ್ ಮೋಹನ್ ರೆಡ್ಡಿ ಸೆ.23ರಂದು ಜೈಲಿನಿಂದ ಬಿಡುಗಡೆಗೊಂಡರು. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಸಿಬಿಐ ಜಗನ್ ಮೋಹನ್ ರೆಡ್ಡಿ ಅವರನ್ನು ಬಂಧಿಸಿತ್ತು. ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಅವರು ಜೈಲಿನಿಂದ ಬಿಡುಗಡೆಯಾದರು.
 
ಹೈದರಾಬಾದ್ ಬಾಂಬ್ ಸ್ಫೋಟ 
 
ಫೆ.21ರಂದು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಸ್ಫೋಟದ ತೀವ್ರತೆಗೆ 17 ಜನರು ಮೃತಪಟ್ಟಿ, 119 ಜನರು ಗಾಯಗೊಂಡರು. ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆ ಈ ಸ್ಫೋಟವನ್ನು ನಡೆಸಿತ್ತು.
 
ಕ್ರಿಕೆಟ್ ತೊರೆದ ಸಚಿನ್ 
 
ದೇಶದ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ದೇವರಾಗಿದ್ದ ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದ 200ನೇ ಟೆಸ್ಟ್ ನಂತರ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದರು. ಸಚಿನ್ ತವರು ನೆಲ ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ತಮ್ಮ ವೃತ್ತಿ ಜೀವನದ 200ನೇ ಟೆಸ್ಟ್ ಆಡಿದರು. ನ.16ರಂದು ತಮ್ಮ ಕೊನೆಯ ಪಂದ್ಯವನ್ನು ವೆಸ್ಟ್ ಇಂಡಿಸ್ ವಿರುದ್ಧ ಆಡಿದರು.
 
ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಘೋಷಣೆ
 
2014ರ ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರನ್ನು ಸೆ.13ರಂದು ಘೋಷಿಸಲಾಯಿತು. ಈ ಮೂಲಕ ಬಿಜೆಪಿ ಚುನಾವಣಾ ತಯಾರಿಯನ್ನು ಆರಂಭಿಸಿತು.
 
ಮುಂಬೈ ಮುಡಿಗೇರಿದ ಐಪಿಎಲ್ ಕಿರೀಟ
 
ಮುಂಬೈ ಇಂಡಿಯನ್ಸ್ ತಂಡ, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 23 ರನ್ ಗಳಿಂದ ಸೋಲಿಸುವ ಮೂಲಕ ಐಪಿಎಲ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಈಡನ್ ಗಾರ್ಡನ್ ನಲ್ಲಿ ಮಾರ್ಚ್ 26ರಂದು ನಡೆದ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಚಿನ್ ತೆಂಡುಲ್ಕರ್ ಅವರಿಗೆ ಗೆಲುವಿನ ಉಡುಗೊರೆ ನೀಡಿತು.
 
ಮನ್ನಾಡೆ ನಿಧನ
 
ಖ್ಯಾತ ಗಾಯಕ ಮನ್ನಾಡೆ ಅವರು ಬೆಂಗಳೂರಿನಲ್ಲಿ ಅಕ್ಟೋಬರ್ 24ರಂದು ಸಾವನ್ನಪ್ಪಿದರು. `ಜಯತೇ ಜಯತೆ ಸತ್ಯ ಮೇವ ಜಯತೇ'..'.ಕುಹೂ ಕುಹೂ ಎನ್ನುತ್ತಾ ಹಾಡುವ ಕೋಗಿಲೆ ಮುಂತಾದ ಹಾಡುಗಳನ್ನು ಹಾಡಿದ್ದ ಸುಶ್ರಾವ್ಯ ಕಂಠದ ಅಮರ ಗಾಯಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಮನ್ನಾ ಡೇ ಅವರ ಅಗಲಿಕೆ ಅಭಿಮಾನಿಗಳಿಗೆ ತುಂಬಲಾರದ ವೇದನೆ ತಂದಿತು. ಅಮರ ಗೀತೆಗಳ ಮೂಲಕ ಮನ್ನಾಡೇ ಸದಾ ಚಿರಂಜೀವಿಯಾಗಿದ್ದಾರೆ.
 
ಛತ್ತೀಸ್ ಗಢದಲ್ಲಿ ನಕ್ಸಲ್ ಅಟ್ಟಹಾಸ
 
ಶಾಂತಿದೂತನಾದ ಬುದ್ಧನ ಬೋಧಗಯಾ ಮಂದಿರದಲ್ಲಿ ಜುಲೈ 7ರಂದು 10 ಬಾಂಬ್ ಗಳು ಸ್ಫೋಟಗೊಂಡಿವು. ಇಬ್ಬರು ಬೌದ್ಧ ಭಿಕ್ಷುಗಳು ಸೇರಿದಂತೆ ಐದು ಮಂದಿ ಸ್ಫೋಟದಿಂದ ಗಾಯಗೊಂಡರು.
 
ಥಾಣೆಯಲ್ಲಿ ಕಟ್ಟಡ ಕುಸಿತಕ್ಕೆ 70 ಬಲಿ
 
ಮಹಾರಾಷ್ಟ್ರದ ಥಾಣೆಯಲ್ಲಿ ಏಪ್ರಿಲ್ 4ರಂದು ಸಂಭವಿಸಿದ ಕಟ್ಟಡ ಕುಸಿತದಲ್ಲಿ 18 ಮಕ್ಕಳು ಸೇರಿದಂತೆ 70 ಜನರು ಸಾವನ್ನಪ್ಪಿದರು. ಸುಮಾರು 60 ಜನರು ಘಟನೆಯಿಂದ ಗಾಯಗೊಂಡರು.
 
ತೇಜ್ ಪಾಲ್ ವಿರುದ್ಧ ಆರೋಪ
 
ತೆಹಲ್ಕಾ ಪತ್ರಿಕೆಯ ಸಂಪಾದಕ ತರುಣ್ ಜೇಲ್ ಪಾಲ್ ಮೇಲೆ ಸಹೋದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದರು. ನ.30ರಂದು ಅವರನ್ನು ಗೋವಾದಲ್ಲಿ ಬಂಧಿಸಾಯಿತು. ಸದ್ಯ ಅವರ ನ್ಯಾಯಾಂಗ ಬಂಧನದಲ್ಲಿದ್ದಾರೆ.
 

ಒಡೆಯರ್ ವಿಧಿವಶ  
 
ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಡಿ.10 ರಂದು ಮಂಗಳವಾರ ಮಧ್ಯಾಹ್ನ ಹೃದಯಾಘಾತದಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಯದುವಂಶದ ಕೊನೆಯ ಕುಡಿಯಾದ ಒಡೆಯರ್ ನಂತರ ಅವರ ಉತ್ತರಾಧಿಕಾರಿ ಎಂಬ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.
 
ರಾಹುಲ್ ಗಾಂಧಿಗೆ ಪಟ್ಟ 
 
ಜ.19ರಂದು ಜೈಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಮೂಲಕ ಅವರನ್ನು ಪ್ರಧಾನಿ ಪಟ್ಟಕ್ಕೆ ಕೂರಿಸುವ ಪ್ರಯತ್ನಕ್ಕೂ ಕಾಂಗ್ರೆಸ್ ಕೈ ಹಾಕಿತು.
 
ಮಾನವ ಕಂಪ್ಯೂಟರ್ ಇನ್ನಿಲ್ಲ
 
ಮಾನವ ಕಂಪ್ಯೂಟರ್ ಖ್ಯಾತಿಯ ಶಕುಂತಲಾ ದೇವಿ (83) ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ವಿಧಿವಶರಾದರು.
 
 
ಬೀದರ್ ಚೌಳಿ ಮಠ ದುರಂತ
 
ಬೀದರ್ ಹೊರವಲಯದಲ್ಲಿರುವ ಚೌಳಿಮಠದಲ್ಲಿ 3 ಕಿರಿಯ ಸ್ವಾಮಿಜೀಗಳು ಏ.8ರಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಅಗ್ನಿ ಪ್ರವೇಶ ಮಾಡಿ ಆತ್ಮಹತ್ಯಗೆ ಶರಣಾದರು. ಫೆ. 28ರಂದು ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತ ಸ್ವಾಮೀಜಿ ಅವರು ಜೀವಂತ ಸಮಾಧಿಯಾಗಿದ್ದರಿಂದ ಬೇಸರಗೊಂಡಿದ್ದ ಈ ಮೂವರೂ ಕಿರಿಯ ಸ್ವಾಮಿಜೀಗಳು ಮಠದ ಆವರಣದಲ್ಲಿ ಭಕ್ತಾದಿಗಳು ಯಾರೂ ಇಲ್ಲದ ವೇಳೆ, ಕಟ್ಟಿಗೆ ಮೆದೆಗೆ ಬೆಂಕಿ ಹಚ್ಚಿಕೊಂಡು ಈರಾರೆಡ್ಡಿ ಸ್ವಾಮೀಜಿ (50), ಜಗನ್ನಾಥ ಸ್ವಾಮೀಜಿ (22) ಮತ್ತು ಪ್ರಣವ್ ಸ್ವಾಮೀಜಿ (16) ಅವರು ಅಗ್ನಿಪ್ರವೇಶ ಮಾಡಿ, ಇಹಲೋಕ ತ್ಯಜಿಸಿದರು.
 
ಸಚಿನ್, ಸಿಎನ್ಆರ್ ಅವರಿಗೆ ಭಾರತ ರತ್ನ ಗೌರವ
 
ನ.16ರಂದು ಖ್ಯಾತ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಮತ್ತು ಕನ್ನಡಿಗ ಸಿಎನ್ಆರ್ ಅವರಿಗೆ ಭಾರತ ಸರ್ಕಾರ ದೇಶದ ಅತ್ಯುನ್ನತ ಪುರಸ್ಕಾರವಾದ `ಭಾರತ ರತ್ನ`ವನ್ನು ಘೋಷಿಸಿತು. ಭಾರತ ರತ್ನ ಗೌರವ ಪಡೆದ ಮೂರನೇ ಕನ್ನಡಿಗೆ ಎಂಬ ಕೀರ್ತಿಗೆ ವಿಜ್ಞಾನಿ ಸಿಎನ್ಆರ್ ರಾವ್ ಪಾತ್ರರಾದರು.
 
ಕರ್ನಾಟಕದಲ್ಲಿ ಕಾಂಗ್ರೆಸ್ ಕಿಲಕಿಲ
 
ಮೇ.5ರಂದು ನಡೆದ ವಿಧಾನಸಭೆ ಚುನಾಣೆಯಲ್ಲಿ ಸ್ಪಷ್ಟ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಪಡೆದ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಿತು. ದಕ್ಷಿಣ ಭಾರತದಲ್ಲಿ ಮೊದಲ ಸರ್ಕಾರ ರಚಿಸಿದ್ದ ಬಿಜೆಪಿ ಚುನಾವಣೆಯಲ್ಲಿ ಭಾರೀ ಸೋಲು ಕಂಡು, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೇ.13ರಂದು ಪ್ರಮಾಣವಚನ ಸ್ವೀಕರಿಸಿದರು.
 
ಯಾಸಿನ್ ಭಟ್ಕಳ್ ಬಂಧನ
 
ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸಿದ ಆರೋಪ ಎದುರಿಸುತ್ತಿದ್ದ ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕ ಯಾಸಿನ್ ಭಟ್ಕಳ್ ನನ್ನು ಅ.28ರಂದು ನೇಪಾಳ ಗಡಿಯಲ್ಲಿ ಬಂಧಿಸಲಾಯಿತು. ಭಾರತದ ಮೋಸ್ಟ್ ವಾಂಡೆಟ್ ಪಟ್ಟಿಯಲ್ಲಿದ್ದ ಇವನನ್ನು ಹಿಡಿಯವು ಮೂಲಕ ಪೊಲೀಸರು ಮಹತ್ ಸಾಧನೆ ಮಾಡಿದರು.
 








ಸರ್ಕಾರದ ಮೊದಲ ವಿಕೆಟ್ ಪತನ 
 
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತತ್ವಕ್ಕೆ ಬಂದ ಆರು ತಿಂಗಳಿನಲ್ಲಿಯೇ ವಾರ್ತಾ ಮತ್ತು ಮೂಲ ಸೌಕರ್ಯ ಸಚಿವ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಚಿವ ಸ್ಥಾನ ತೊರೆಯಬೇಕಾಯಿತು.  ನ.22ರಂದು  ಸಂತೋಷ್ ಲಾಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
 










ಹೈಕೋರ್ಟ್ ಪೀಠ ಕಾಯಂ
 
ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯನ್ನು ಕೇಂದ್ರ ಯುಪಿಎ ಸರ್ಕಾರ ಜೂ.4ರಂದು ಈಡೇರಿಸಿತು. ಗುಲ್ಬರ್ಗ ಮತ್ತು ಧಾರವಾಡ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಧಾರವಾಡ ಮತ್ತು ಗುಲ್ಬರ್ಗ ಹೈಕೋರ್ಟ್ ಸಂಚಾರಿ ಪೀಠಗಳನ್ನು ಕಾಯಂಗೊಳಿಸಿ ವರ್ಷದ 365 ದಿನಗಳ ಕಾಲವು ಕಲಾಪ ನಡೆಯಲು ಕೇಂದ್ರ ಅನುಮತಿ ನೀಡಿತು.
 









ಕ್ರಿಕೆಟಿಗ ಶ್ರೀಶಾಂತ್ ಬಂಧನ
 
ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಪ್ರಕರಣದ ಆರೋಪದ ಮೇಲೆ ಮೇ.16ರಂದು ಕ್ರಿಕೆಟಿಗ ಶ್ರೀಶಾಂತ್, ಅಜಿತ್ ಚಾಂಡಿಲಾ, ಅಂಕಿತ್ ಚೌವಾಣ್ ಅವರನ್ನು ಪೊಲೀಸರು ಬಂಧಿಸಿದರು. ಓವರ್ ಗೆ ಇಂತಿಷ್ಟು ರನ್ ನೀಡುತ್ತೇವೆ ಎಂದು ಬುಕ್ಕಿಗಳಿಂದ ಹಣ ಪಡೆದಿದ್ದರು ಎಂಬ ಆರೋಪ ಅವರ ಮೇಲಿದೆ. ಬಿಸಿಸಿಐ ಮೂವರು ಆಟಗಾರರಿಗೆ ನಿಷೇಧ ಹೇರಿತ್ತು.
 




ಬೇಲೂರು ಬಸ್ ದುರಂತ
 
ಹಾಸನ ಜಿಲ್ಲೆಯ ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಕೆಎಸ್ಆರ್ ಟಿಸಿ ಬಸ್ ಪಲ್ಟಿ ಹೊಡೆದು ಒಟ್ಟು 8 ಮಂದಿ ಪ್ರಯಾಣಿಕರು ಮೃತಪಟ್ಟರು, 15 ಪ್ರಯಾಣಿಕರು ಗಾಯಗೊಂಡರು. ಜು.23ರಂದು ಚಿಕ್ಕಮಗಳೂರು ಕೆಎಸ್ಆರ್ ಟಿಸಿ ಘಟಕಕ್ಕೆ ಸೇರಿದ ಸುವರ್ಣ ಕರ್ನಾಟಕ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿತ್ತು.
 
ಕಮಾಲ್‌ ಮಾಡಲಿಲ್ಲ ಕಾಮಿಡಿ  
 
ಕನ್ನಡ ಚಿತ್ರೋದ್ಯಮದಲ್ಲಿ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಕೋಮಲ್ ಮತ್ತು ಶರಣ್ ನಾಯಕರಾದ ನಂತರ ಈ ಸಮಸ್ಯೆ ಇನ್ನಷ್ಟು ಉಲ್ಬಣಿಸಿದೆ. 2014ರಲ್ಲಿ ಪ್ರತ್ಯೇಕವಾಗಿ ಕಾಮಿಡಿ ಸಿನಿಮಾ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಊಟದಲ್ಲಿಯ ಉಪ್ಪಿನ ಕಾಯಿ ತರಹ ಪ್ರತಿ ಸಿನಿಮಾದಲ್ಲೂ ಹಾಸ್ಯ ದೃಶ್ಯಗಳು ಕಾಣಿಸಿಕೊಂಡಿವೆ. ಪ್ರೇಕ್ಷಕರನ್ನು ನಗಿಸುವಲ್ಲಿ ಬಹುತೇಕ ಸಿನಿಮಾಗಳು ಸೋತಿವೆ.
 
ಈ ವರ್ಷದಲ್ಲಿ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ ನೂರು ದಾಟಿದೆ. ಕಾಮಿಡಿ ಚಿತ್ರಗಳ ಸಂಖ್ಯೆ ಮಾತ್ರ ಹತ್ತನ್ನೂ ದಾಟಿಲ್ಲ. ರವಿಶಂಕರ್ ಅಭಿನಯದ ನಗೆ ಬಾಂಬ್, ಕೋಮಲ್ ನಟನೆಯ ಕರೋಡ್ ಪತಿ, ಪುಂಗಿದಾಸ ಮತ್ತು ನಮೋ ಭೂತಾತ್ಮ, ಹೇಮಂತ್ ಹೆಗಡೆ ಅವರ ನಿಂಬೆ ಹುಳಿ, ಶರಣ್ ಅಭಿನಯದ ಜೈ ಲಲಿತಾ, ಸೃಜನ್ ಲೋಕೇಶ್ ಮುಖ್ಯ ಭೂಮಿಕೆಯ ಟಿಪಿಕಲ್ ಕೈಲಾಸ್ ಹೀಗೆ ಒಂದಿಷ್ಟು ಸಿನಿಮಾಗಳ ಪಟ್ಟಿ ಮಾತ್ರ ಸಿಗುತ್ತದೆ. ಉಳಿದಂತೆ ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ದೃಶ್ಯಗಳು ಅಲ್ಲಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿವೆ.
 
ರವಿಶಂಕರ್ ಅಭಿನಯದ ನಗೆ ಬಾಂಬ್ ನಗಿಸಲು ಹರ ಸಾಹಸ ಪಟ್ಟರೆ, ನಿಂಬೆ ಹುಳಿ ಚಿತ್ರದಲ್ಲಿ ಹೇಮಂತ್ ಒಂದಿಷ್ಟು ನಗು ತರಿಸಿದರು. ಕ್ವಾಟ್ಲೆ ಸತೀಶ್ ಚಿತ್ರದಲ್ಲಿ ಚಿಕ್ಕಣ್ಣ ಹೊಸ ಭರವಸೆ ಮೂಡಿಸುವ ಮೂಲಕ, ಕಾಮಿಡಿ ಕಲಾವಿದರ ಕೊರತೆಯನ್ನು ಕೊಂಚ ನೀಗಿಸಿದರು. ಕನ್ನಡದ ಕಾಮಿಡಿ ಕಲಾವಿದ ಅಂದಾಕ್ಷಣ ಸದ್ಯ ಥಟ್ಟನೆ ನೆನಪಾಗುವ ಏಕೈಕ ಹೆಸರು ಚಿಕ್ಕಣ್ಣ ಅನ್ನುವಂತಾಗಿದೆ.
 
ಈ ವರ್ಷ ಕೋಮಲ್ ನಟನೆಯ ಮೂರು ಸಿನಿಮಾಗಳು ಬಿಡುಗಡೆ ಆಗಿವೆ. ಮೂರರಲ್ಲಿ ಹೆಚ್ಚು ನಗಿಸಿದ ಚಿತ್ರ ನಮೋ ಭೂತಾತ್ಮ. ಇದು ಹಾರರ್ ಕಾಮಿಡಿ ಸಿನಿಮಾ. ಹೀಗಾಗಿ ಪ್ರೇಕ್ಷಕರಿಗೆ ಒಂಚೂರು ಥ್ರಿಲ್ ನೀಡಿತು. ಜೈ ಲಲಿತಾ ಸಿನಿಮಾದಲ್ಲಿ ಶರಣ್ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿ ಸೈ ಅನಿಸಿಕೊಂಡರು. ನಮೋ ಭೂತಾತ್ಮದಲ್ಲಿ ಕೋಮಲ್, ಜೈ ಲಲಿತಾ ಸಿನಿಮಾದಲ್ಲಿ ಶರಣ್‌ರನ್ನು ಆಯಾ ನಿರ್ದೇಶಕರು ನಾಯಕರಂತೆ ಬಿಂಬಿಸಿದ್ದರಿಂದ ಕಾಮಿಡಿಗೆ ಕೊಂಚ ಹೊಡೆತ ಬಿದ್ದಿದ್ದು ಸುಳ್ಳಲ್ಲ. ಜಗ್ಗೇಶ್ ಸಿನಿಮಾಗಳು ಗಂಭೀರ ಸಂದೇಶವನ್ನು ಹೊತ್ತು ತಂದಿದ್ದರಿಂದ ಕಾಮಿಡಿ ಮಿಸ್ ಆಯಿತು.
 
ಸವಾರಿ -2 ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಒಗ್ಗರಣೆಯಲ್ಲಿ ಮಂಡ್ಯ ರಮೇಶ್, ಪಂಗನಾಮ ಚಿತ್ರದಲ್ಲಿ ಸಾಧು ಕೋಕಿಲಾ, ನಮೋ ಭೂತಾತ್ಮ ಚಿತ್ರದಲ್ಲಿ ಹರೀಶ್ ತಮ್ಮ ತಮ್ಮ ಪಾತ್ರಗಳ ಮೂಲಕ ನಗಿಸುವ ಸಾಹಸಕ್ಕೆ ಮುಂದಾಗಿ ಯಶಸ್ವಿಯಾದರು. ತೆಲುಗಿನ ಖ್ಯಾತ ಕಾಮಿಡಿ ನಟರಾದ ಬ್ರಹ್ಮಾವರ ಮತ್ತು ಅಲಿ ಈ ಬಾರಿ ಕನ್ನಡಕ್ಕೆ ಬಂದರೂ ಅವರಿಗೆ ಸಿಕ್ಕ ಪಾತ್ರ ವಿಶೇಷವೇನೂ ಅಲ್ಲ. ನಿನ್ನಿಂದಲೇ ಚಿತ್ರದಲ್ಲಿ ಬ್ರಹ್ಮಾನಂದ ಹೀಗೆ ಬಂದು ಹಾಗೆ ಹೋಗಿದ್ದು ವಿಪರ‌್ಯಾಸ.
 
ಕಲಾವಿದೆಯರ ಕೊರತೆ 
 
ಸ್ಯಾಂಡಲ್‌ವುಡ್‌ಲ್ಲಿ ಕಾಮಿಡಿ ಕಲಾವಿದರ ಸಂಖ್ಯೆ ತೀರಾ ಕಡಿಮೆ ಎನ್ನುವುದು ಎಷ್ಟು ಸತ್ಯವೋ, ಕಲಾವಿದೆಯರ ಸಂಖ್ಯೆ ಬೆರಳೆಣಿಕೆ ಅನ್ನುವುದು ಅಷ್ಟೇ ಸತ್ಯ. ಉಮಾಶ್ರೀ ರಾಜಕಾರಣದಲ್ಲಿ ಬಿಝಿ ಆಗಿದ್ದರೆ, ರೇಖಾ ದಾಸ್‌ಗೆ ಸಿನಿಮಾಗಳೇ ಇಲ್ಲ. ಸಾಕಷ್ಟು ಕಲಾವಿದೆಯರು ತಮ್ಮ ಅಭಿನಯದ ಮೂಲಕ ಹಾಸ್ಯಕ್ಕಿಂತ ಅಪಹಾಸ್ಯಕ್ಕೆ ಗುರಿಯಾಗಿದ್ದೇ ಹೆಚ್ಚು. ಈವರೆಗೂ ಕಾಮಿಡಿ ಕಲಾವಿದೆಯರನ್ನು ಗುರುತಿಸಲು ಸ್ಯಾಂಡಲ್‌ವುಡ್ ನಿರ್ದೇಶಕರಿಗೆ ಸಾಧ್ಯವಾಗದೇ ಇರುವುದು ದೊಡ್ಡ ದುರಂತವೇ ಸರಿ. 
 

ವೆಬ್ದುನಿಯಾವನ್ನು ಓದಿ