2015ರ ವರ್ಷದ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ? ಖ್ಯಾತ ಜ್ಯೋತಿಷಿಗಳಿಂದ ವರ್ಷ ಭವಿಷ್ಯ ನಿಮಗಾಗಿ

ಶುಕ್ರವಾರ, 26 ಡಿಸೆಂಬರ್ 2014 (16:15 IST)
ಪ್ರತಿ ವರ್ಷದ ಹಾಗೆ, ನಾವು ನಿಮಗೆ 2015ರ ಅತ್ಯುತ್ತಮವಾದ ಜಾತಕವನ್ನು ನೀಡಲು ಪ್ರಯತ್ನಪಟ್ಟಿದ್ದೇವೆ. 2015ರ ಜಾತಕ ವೈದಿಕ ಜ್ಯೋತಿಷ್ಯ ತತ್ವದ ಮೇಲೆ ಆಧರಿತವಾಗಿದೆ. ಜಾತಕ 2015ನ್ನು ನಮ್ಮ ತಜ್ಞ ಜ್ಯೋತಿಷಿಗಳು ಅಭಿವೃದ್ಧಿಪಡಿಸಿದ್ದಾರೆ. ಅವರು ನಿಮಗೆ ಅತ್ಯುತ್ತಮವಾದದ್ದನ್ನು ನೀಡಲು ತಮ್ಮ ಹಲವಾರು ವರ್ಷಗಳ ಅನುಭವನ್ನು ಬಳಸಿದ್ದಾರೆ.

ಈ ಜಾತಕದಲ್ಲಿ, ಈ ವರ್ಷ ನಿಮಗೆ ಹೇಗಿರುತ್ತದೆಂದು ತಿಳಿಯಲು ಸಹಾಯವಾಗುತ್ತದೆ. ಇದಲ್ಲದೇ, ಇದು ನಿಮ್ಮ ಜೀವನದ ಪ್ರತಿ ಅಂಶವನ್ನೂ ಆಳವಾಗಿ ವಿವರಿಸುತ್ತದೆ. ಇದು ಪ್ರೇಮ ಜೀವನ, ಕೌಟುಂಬಿಕ ಜೀವನ, ವೃತ್ತಿ ಜೀವನ, ವೃತ್ತಿ, ಉದ್ಯೋಗ, ಹಣಕಾಸು ಅಥವಾ ಏನಾದರೂ ಅಗಿರಬಹುದು.
 
ಹೊಸ ವರ್ಷವನ್ನು ಸ್ವಾಗತಿಸಲು ಜನರು ಸಿದ್ಧವಾಗಿದ್ದಾರೆ. ಹಾಗೆಯೇ ಮುಂದಿನ ವರ್ಷ ತಮ್ಮ ಭವಿಷ್ಯ ಹೇಗಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದಕ್ಕೆ ಇಲ್ಲಿದೆ ರಾಶಿ ಭವಿಷ್ಯ.
 
ಮೇಷ : ಕ್ರಾಂತಿಕಾರಿಯಾದ ವಿನೂತನ ಯೋಜನೆಗಳು ಸತತ ಪ್ರಯತ್ನದಿಂದ ಸರಿಯಾದ ದಿಕ್ಕಿನಲ್ಲಿ ಹೊರಹೊಮ್ಮಲಿವೆ. ವೈಯಕ್ತಿಕ ಸಂಬಂಧಗಳು, ನಿಮ್ಮ ಮನೋಗತಿಯ ಪ್ರಬುದ್ಧತೆಗೆ ಬರುತ್ತಿರುವುದರಿಂದ ಹೆಚ್ಚು ಆಹ್ಲಾದಕರವಾಗಲಿವೆ. ಹಣಕಾಸು ವ್ಯವಸ್ಥೆಯನ್ನು ಸರಿಯಾಗಿ ಪರಿಪಾಲಿಸಬೇಕು ಹಾಗೂ ಆಸ್ತಿಗೆ ಸಂಬಂಧಿಸಿದ ತಕರಾರು ವರ್ಷದ ಮಧ್ಯದಲ್ಲಿ ತಲೆದೋರಲಿವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ವರ್ಷದ ಮೊದಲ ಭಾಗವು ಚೆನ್ನಾಗಿದ್ದು , ಎರಡನೇ ಭಾಗದಲ್ಲಿ ಜಾಗರೂಕರಾಗಿರಬೇಕು. ಪ್ರೀತಿ ಪಾತ್ರರೊಂದಿಗೆ ಚೆನ್ನಾಗಿ ಕಾಲ ಕಳೆಯುವಿರಿ. ಅರ್ಹರಿಗೆ ಕಂಕಣಭಾಗ್ಯವಿದೆ.
 
ವೃಷಭ : ಹಸನಾದ ವರ್ಷ ಎದುರು ನೋಡುತ್ತಿದೆ. ವೈಯಕ್ತಿಕ ಹಾಗೂ ವೃತ್ತಿ ಜೀವನ ಉತ್ತಮವಾಗಿರುವುದು. ಅತಿಯಾದ ಭೌತಿಕ ಲೋಲುಪತೆ ಶಾಂತಿ ಸಮಾಧಾನಗಳನ್ನು ದೂರ ಮಾಡಲಿದೆ. ಕಠಿಣ ಪರಿಶ್ರಮ ಕೆಲಸದಲ್ಲಿ ಉತ್ತಮ ತಿರುವು ತರಲಿದೆ. ಉದ್ಯೋಗ ಹಾಗೂ ನೆಲೆಯಲ್ಲಿ ಬದಲಾವಣೆಯ ಬಯಕೆ ಈಡೇರಲಿದೆ. ಹಣ ಹರಿದು ಬರುವುದರಿಂದ ಹಣಕಾಸಿನ ಅಸ್ಥಿರತೆ ಕಡಿಮೆಯಾಗುವುದು. ಅಧ್ಯಾತ್ಮಿಕ ಒಲವು ಹೆಚ್ಚಲಿದೆ. ಸಂಬಂಧಗಳಿಂದ ಸಂತೃಪ್ತಿ ಪ್ರಾಪ್ತವಾಗಲಿವೆ. ಶಿಸ್ತಿನ ನಿತ್ಯ ಜೀವನದಿಂದ ಆರೋಗ್ಯ ಸಮಸ್ಯೆಗಳು ಪರಿಹಾರವಾಗಲಿವೆ.
 
ಮಿಥುನ : ಈ ವರ್ಷವು ಮಿಥುನ ರಾಶಿಯವರಿಗೆ ವೃತ್ತಿಪರ ಹಾಗೂ ಜೀವನದ ಎಲ್ಲ ಉತ್ತರಗಳಿಗೂ ಆಂತರಿಕ ಅವಲೋಕಕ್ಕೆ ಪ್ರೇರೇಪಿಸುತ್ತದೆ. ನಿಮ್ಮ ತಳಮಳಗಳ ಮೂಲ ಕಾರಣ ಕಂಡುಕೊಳ್ಳಿ. ತದೇಕಚಿತ್ತವಾಗಿ ಕೆಲಸ ಮಾಡಿದರೆ ಬಯಸಿದ ಫಲಿತಾಂಶ ದೊರೆಯುವುದು ಹಾಗೂ ಒಂದು ಯೋಜನೆಯನ್ನು ಪೂರ್ತಿಗೊಳಿಸದೆ ಇನ್ನೊಂದನ್ನು ಕೈಗೆತ್ತಿಕೊಳ್ಳುವ ಉಮೇದನ್ನು ನಿಯಂತ್ರಿಸಿಕೊಳ್ಳಿ. ಮಿಥುನ ಬುದ್ಧಿಮತ್ತೆಯನ್ನು ಸತತವಾಗಿ ಬಳಸುವುದು. ಫಲ ನೀಡುವುದು. ಒಂದು ಹವ್ಯಾಸ ಬೆಳೆಸಿಕೊಂಡರೆ ಅದು ಭಾರಿ ತಿರುವಿಗೆ ಕಾರಣವಾಗುವುದು. ಸಣ್ಣ ಪುಟ್ಟ ಪ್ರವಾಸ ಉತ್ಸಾಹದ ರಂಗೇರಿಸಬಲ್ಲದು. ಕಿರಿಕಿರಿ ಉಂಟು ಮಾಡುವ ನೋವು ಹೊರತುಪಡಿಸಿ ಆರೋಗ್ಯ ಉತ್ತಮವಾಗಿಯೇ ಇರುತ್ತದೆ.
 
ಕರ್ಕಾಟಕ : ನಿಮಗೆ ನೀವೇ ಹಾಕಿರುವ ಕಡಿವಾಣ ಮುರಿದು ಹೊರಬರಲು ಈ ವರ್ಷ ಸೂಕ್ತ ಕಾಲ. ನಿಮ್ಮ ನಿಜ ತಾಕತ್ತನ್ನು ಅರಿಯಬಲ್ಲ ಭಯ ನಿಮ್ಮನ್ನು ತಡೆಹಿಡಿಯದಿರಲಿ. ನಿಮ್ಮನ್ನು ನೀವೇ ತಡೆಹಿಡಿಯುವುದು ಬಂದರಿನಲ್ಲಿರುವ ಹಡಗಿನಂತೆ, ನೀರನ್ನು ಪರೀಕ್ಷಿಸದೆ, ಇಲ್ಲಿ ಇರಬೇಕಾದುದು ಎಂದು ನಂಬಿಕೊಂಡಂತೆ. ಹೊಸ ಚಿಂತನೆಗಳಿಗೆ ಹಾಗೂ ಸಲಹೆಗಳಿಗೆ ಸ್ವಾಗತವಿರಲಿ. ನಿಮ್ಮ ಪರಿಸರ ನಿಮಗೆ ನೀಡುವುದಕ್ಕೆ ತೃಪ್ತರಾಗಿ ಇರಬೇಡಿ. ನೆರವು ಕೇಳಿ. ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಪ್ರಯಾಣದ ಸಾಧ್ಯತೆಯಿದೆ ಅಥವಾ ವಿದೇಶದಲ್ಲಿ ಮನೆ ಮಾಡಲೂಬಹುದು. ಹಣಕಾಸನ್ನು ಎಚ್ಚರದಿಂದ ನಿಭಾಯಿಸುವುದು ಅಗತ್ಯ.
 
ಸಿಂಹ : ಈ ವರ್ಷ ಹೊಸ ಅವಕಾಶಗಳು ಕಾದಿವೆ. ಹೊಸ ಅವಕಾಶಗಳನ್ನು ತಮ್ಮ ಹಳೆಯ ಅಭ್ಯಾಸ ಹಾಗೂ ಸಹಜ ಪ್ರವೃತ್ತಿಗೆ ಪಕ್ಕಾಗದೆ ಬಳಸಿಕೊಳ್ಳುವುದರಲ್ಲಿ ಅವರ ಯಶಸ್ಸು ಅಡಗಿದೆ. ವೈಯಕ್ತಿಕ ಸವಾಲುಗಳನ್ನು ಮೀರಿ ನಿಲ್ಲುವುದು ; ತಂಡದಲ್ಲಿ ಹೆಚ್ಚು ಸಹಕರಿಸುವುದು ; ಕೆಲಸಗಳನ್ನು ಇತರರಿಗೆ ವಹಿಸುವುದು; ಇತಿಮಿತಿಗಳನ್ನು ಒಪ್ಪಿಕೊಳ್ಳುವುದು ಹಾಗೂ ಹೆಚ್ಚು ಚೈತನ್ಯವನ್ನು ಈ ಎಲ್ಲ ಸಂದರ್ಭಗಳಲ್ಲಿ ತಂದು ಕೊಳ್ಳುವುದು ತುಂಬಾ ಮುಖ್ಯ. ಹೀಗಿದ್ದಲ್ಲಿ ಉನ್ನತಿಗೇರುವುದನ್ನು ತಡೆಯುವುದು ಅಸಾಧ್ಯ. ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ ವ್ಯಾಯಾಮ ರೂಢಿಸಿಕೊಂಡು ಆರೋಗ್ಯ ಕಾಪಾಡುವುದು ಅಗತ್ಯ.
 
ಕನ್ಯಾ : ಈ ವರ್ಷ ವಿಭಿನ್ನ ಪ್ರವೃತ್ತಿ ತೋರುತ್ತದೆ. ಈ ವರ್ಷ ಆರೋಗ್ಯ, ಆಹಾರ ಅಥವಾ ಸ್ವಯಂ ಸ್ವರೂಪ ಹೇಗೆ ನೋಡಿದರೂ ಸ್ವಯಂ ಸುಧಾರಣೆಯೇ ಗೋಚರಿಸುತ್ತದೆ. ವಿವರಗಳನ್ನು ಕಡೆಗಣಿಸದೆ, ನಿಮ್ಮನ್ನು ನೀವೇ ಹೊಸ ಚಿಂತನೆ ಹಾಗೂ ಸಂಪರ್ಕದ ನಮೂನೆಗಳಿಗೆ ಮುಕ್ತರಾಗಿಸಿ. ಹಣದ ಹರಿವಿನಿಂದ ಆರ್ಥಿಕ ಸಂಕಷ್ಟ ತಿಳಿಯಾಗಲಿದೆ. ವರ್ಷದ ಎರಡನೇ ಭಾಗ ಪ್ರಯಾಣ ಹಾಗೂ ಪ್ರಗತಿಪೂರಕ ಬದಲಾವಣೆಗಳನ್ನು ತರಲಿದೆ. ಆರೋಗ್ಯ ಹಾಗೂ ವೈವಾಹಿಕ ಸಂಬಂಧಗಳು ಉತ್ತಮಗೊಳ್ಳುವುದು. ಚಿರ ಆಸ್ತಿಗಳಲ್ಲಿ ಹಣ ವಿನಿಯೋಗಿಸುವ ಸಂಭವವಿದೆ.
 
ತುಲಾ : ಶಾಂತ್ರಿ ಪ್ರಿಯ ತುಲಾ ರಾಶಿಯವರಿಗೆ ತುಸು ಕಷ್ಟ ಕಾಲ. ಎದುರಾಗಲಿರುವ ಕೆಲವು ಸನ್ನಿವೇಶಗಳಿಂದ ದೃಢ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗುವುದು ಮತ್ತು ಪ್ರತಿಯೊಬ್ಬರನ್ನೂ ಸಂಪ್ರೀತಿಗೊಳಿಸುವುದು, ಎಲ್ಲ ಕಾಲಕ್ಕೂ ಅಸಾಧ್ಯ ಹಾಗೂ ನೀವು ಒಂದು ನಿಲುವು ತೆಗೆದುಕೊಂಡಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅಮೂಲ್ಯ ಪಾಠ ಕಲಿಯುವಿರಿ. ಆರ್ಥಿಕ ಸ್ಥಿತಿ ಸುಧಾರಿಸುವುದು ಮತ್ತು ಕೆಲಸದ ನಿಬಂಧನೆ ಹಾಗೂ ಪರಿಸ್ಥಿತಿಗೆ ಸಂಬಂಧಿಸಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುವುದು. ಹೆಚ್ಚು ಪ್ರಯಾಣದ ಅವಕಾಶವಿದೆ. ಕೆಲಸ ಹಾಗೂ ಮೋಜುಮಸ್ತಿಯನ್ನು ಪ್ರತ್ಯೇಕವಾಗಿಡಿ.
 
ವೃಶ್ಚಿಕ : ನಿಮಗಿದು ಒಂದು ಜಟಿಲವಾದ ವರ್ಷ. ನೀವು ಅಸ್ಥಿರವಾದ ಅಧಿಕಾರದ ಸ್ಥಾನವನ್ನು ವಿನಯ ಹಾಗೂ ಸಹಪಾತದಿಂದ ನಿಭಾಯಿಸಬಲ್ಲಿರಾ ಎಂದು ಪರೀಕ್ಷಿಸುವ ಸಲುವಾಗಿ ಹೊಸ ಸನ್ನಿವೇಶಗಳು ಮತ್ತು ಸವಾಲುಗಳು ಎದುರಾಗಲಿವೆ. ನಿಮಗೆ ಎದುರಾಗಲಿರುವ ವಿವಿಧ ಸನ್ನಿವೇಶಗಳು ವೃತ್ತಿಪರ ಸಾಮರ್ಥ್ಯ ಹಾಗೂ ಮಾನವೀಯತೆಯಿಂದ ಸೇವೆ ಸಲ್ಲಿಸುವ ಅವಕಾಶ ಒದಗಿಸುತ್ತವೆ. ನಿಮ್ಮ ಸಂಪರ್ಕಗಳನ್ನು ಬಳಸಿರಿ ಹಾಗೂ ಒಂದು ಮಹತ್ತರವಾದ ಗುರಿಯ ಸಲುವಾಗಿ ಬದಲಾವಣೆಯ ಯಂತ್ರ ನೀವಾಗಿ. ವರ್ಷದ ಎರಡನೇ ಅರ್ಧ ಭಾಗದಲ್ಲಿ ದೂರದ ತಾಣಗಳಿಗೆ ಪ್ರಯಾಣ ಅಥವಾ ಅಲ್ಲಿನವರೊಂದಿಗೆ ಸಂಪರ್ಕ ಸಾಧ್ಯ.
 
ಧನುಸ್ಸು : ಅತಿ ವಿಶೇಷ ವರ್ಷ. ವೃತ್ತಿಯಲ್ಲಿ ಮೇಲೇರಲು ಮತ್ತು ಮಿಂಚಲು ಹಲವು ಹಾದಿಗಳು ತೆರೆಯುವುದು. ಸಮರ್ಪಕ ಸಂವಹನದ ಅಭಾವ ಕಾರಣ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಸಾಮಾಜಿಕ ವಿಚಾರ ವಿನಿಮಯ ಸಂದರ್ಭದಲ್ಲಿ ಆದರ ಹಾಗೂ ಶಿಷ್ಟ ಪ್ರವೃತ್ತಿಯಿರಲಿ - ಅದುವೇ ಯಶಸ್ಸಿನ ಕೀಲಿ ಕೈ. ಹಣಕಾಸು ಉತ್ತಮವಾಗಿದೆ. ಆದರೆ ಖರ್ಚು ಲಾಭವನ್ನು ಮೀರಲಿದೆ. ಅವಿವಾಹಿತರು ಹಾಗೂ ಅರ್ಹರಿಗೆ ಹೊಸ ಸಂಬಂಧಗಳು ದೊರೆಯಲಿವೆ.
 
ಮಕರ : ಪೂರ್ತಿ ಆತ್ಮ ವಿಶ್ವಾಸದೊಂದಿಗೆ ನಿಮ್ಮ ಚಿಂತನೆಗಳು ಮತ್ತು ಸಲಹೆಗಳನ್ನು ಅನುಮೋದಿಸುವಂತೆ ಮಾಡುವುದು. ಆರ್ಥಿಕ ಅಥವಾ ಕೌಟುಂಬಿಕ ಅಭದ್ರತೆಯು ನಿಮ್ಮ ಹಕ್ಕಿನ ಸ್ಥಾನವನ್ನು ನಿರಾಕಾರಿಸದಂತೆ ನೋಡಿಕೊಳ್ಳಿ ಮತ್ತು ನಿಮ್ಮ ಸಾಮರ್ಥ್ಯವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿ. ಹಣ ವಿನಿಯೋಗದಲ್ಲಿ ಎಚ್ಚರವಿರಲಿ, ಸಂದೇಹಗಳಿದ್ದಾಗ ತಜ್ಞರ ಸಲಹೆ ಪಡೆಯಿರಿ. ನಿಮ್ಮ ನೆಲೆ ಹಾಗೂ ಆಸ್ತಿಯಲ್ಲಿ ಬದಲಾವಣೆ ಬರುವುದು. ನಿಮ್ಮ ಅಥವಾ ನಿಮ್ಮ ಪ್ರೀತಿ ಪಾತ್ರರ ಆರೋಗ್ಯವೂ ಒಂದು ಸಮಸ್ಯೆ ಎನಿಸಬಹುದು. ಅಧ್ಯಾತ್ಮಿಕ ಪ್ರಗತಿಗೆ ಒಂದು ಅಮೋಘ ವರ್ಷ ಇದು.
 
ಕುಂಭ : ನಿಮ್ಮ ಸುಪ್ತ ಪ್ರತಿಭೆಯನ್ನು ಹೊರ ತರಲು ಮಹೋನ್ನತ ವರ್ಷ. ಕೆಲಸಕ್ಕೆ ಸಂಬಂಧಿಸಿದ ಹೊಸ ಪ್ರಯಾಣಗಳು ಈ ವರ್ಷ ಇರಬಹುದು. ವೃತ್ತಿಪರವಾಗಿ ಮೆಟ್ಟಿಲುಗಳನ್ನು ಏರಲು ದೊರೆವ ಅವಕಾಶಗಳನ್ನು ಕಳೆದುಕೊಳ್ಳಬೇಡಿ. ವೃತ್ತಿಪರವಾಗಿ ಹಾಗೂ ವ್ಯಕ್ತಿಗತವಾಗಿ, ನಿಮ್ಮ ಹಳೆಯ ಸ್ವರೂಪವನ್ನು ತೆಗೆದುಹಾಕಿ. ನಿಮ್ಮನ್ನು ವಿಕಾಸಗೊಳಿಸುವ ಹಾಗೂ ಮಾರ್ಪಡಿಸುವ ನಿಮಗೆ ದಕ್ಕಲೇಬೇಕಾದ ಯಶಸ್ಸು ತರುವ ಅವಕಾಶಗಳು ಈ ವರ್ಷ ನಿಮಗೆ ಪ್ರಾಪ್ತವಾಗಲಿದೆ. ಆರೋಗ್ಯ ಕಾಪಾಡಲು ಆತಂಕ ಹಾಗೂ ಕೆಲಸದ ಬಳಲಿಕೆಯನ್ನು ತಡೆಗಟ್ಟಿ, ಧ್ಯಾನ (ಮೆಡಿಟೇಷನ್) ಅಥವಾ ಯಾವುದಾದರೂ ವಿಧದ ವ್ಯಾಯಾಮ ಪ್ರಯತ್ನಿಸಿ. ಪ್ರಸಿದ್ಧ ಹಾಗೂ ಸಾರ್ವಜನಿಕ ಪ್ರಶಂಸೆ ಈ ವರ್ಷ ದೊರೆಯ ಬಹುದು.
 
ಮೀನ : ಹಣಕಾಸು ವರ್ಷದ ವಿಷಯ. ಹಠಾತ್ತನೆ ಬರುವ ಹಣದ ಒಳಹರಿವು ನೀವು ಅದನ್ನು ವಿನಿಯೋಗಿಸುವ ಮಾರ್ಗಗಳನ್ನು ಅರಸುವಂತೆ ಮಾಡುವುದು. ಮನೆ ಮತ್ತು ಆಸ್ತಿ, ಹೊಸ ವಹಿವಾಟು ಅಥವಾ ಉನ್ನತ ವಿದ್ಯಾಭ್ಯಾಸದಲ್ಲಿ ಹಣ ತೊಡಗಿಸುವುದು ನಿಮಗಿರುವ ಒಂದೆರಡು ಅವಕಾಶಗಳು. ಯಾರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮುನ್ನ ಅಥವಾ ವಿನಿಯೋಗಿಸುವ ಮುನ್ನ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಿ. ಭಾವನಾತ್ಮಕ ಪ್ರತಿಕ್ರೆಯೆ, ನಿಮ್ಮ ವೈಯಕ್ತಿಕ ಸಂಬಂಧಗಳನ್ನು ಪರೀಕ್ಷೆಗೆ ಒಡ್ಡ ಬಹುದು. ವಿದೇಶಗಳಿಗೆ ಪ್ರಯಾಣ ಮತ್ತು ಹಳೆಯ ಸಂಬಂಧಗಳೊಂದಿಗೆ ಮರು ಸಂಪರ್ಕದ ಸಾಧ್ಯತೆ ತುಂಬಾ ಹೆಚ್ಚಾಗಿದೆ. ನಿಮ್ಮ ಪ್ರೀತಿ ಪಾತ್ರರಲ್ಲಿ ಒಬ್ಬರ ಆರೋಗ್ಯದಲ್ಲಿ ಸಮಸ್ಯೆ ಬರಬಹುದು. ಚರ ಆಸ್ತಿಯನ್ನು ಹೊಂದುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ