ಪ್ರೀತ್ಸೆ ಪ್ರೀತ್ಸೆ ಅಂದಿದ್ದಕ್ಕೆ ಮುಗಿಸಿಯೇ ಬಿಟ್ಟಳು

ಬುಧವಾರ, 11 ಮೇ 2016 (10:56 IST)
ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ರಾಯಚೂರಿನ ಮಾನವಿ ತಾಲ್ಲೂಕಿನ ಕುರ್ಡಿಯಲ್ಲಿ ನಡೆದಿದ್ದ ಹತ್ಯೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶ ಕಂಡಿದ್ದಾರೆ. 
 
ಆರೋಪಿಗಳನ್ನು ಶ್ವೇತಾ ಕುಮಾರಿ, ಪ್ರವೀಣ್ ಕುಮಾರ್, ಚಿನ್ನು, ಸ್ವಾಮಿದಾಸ್, ರಾಜು ಎಂದು ಗುರುತಿಸಲಾಗಿದೆ. ಇವರೆಲ್ಲ ಸೇರಿ ಆಂಧ್ರದ ಗುಂಟೂರಿನ ತೆನಾಲಿ ಗ್ರಾಮದ ಮಧುಕರಸ ಎಂಬ ಯುವಕನನ್ನು ಸುಟ್ಟು ಹತ್ಯೆಗೈದಿದ್ದರು.
 
ಆರೋಪಿ ಶ್ವೇತಕುಮಾರಿ, ಬ್ಯಾಂಕ್ ಪರೀಕ್ಷೆ ಬರೆಯಲು ಹೋಗಿದ್ದಾಗ ಮಧುಕರಸನ ಪರಿಚಯವಾಗಿತ್ತು. ಅವರಿಬ್ಬರು ಫೋನ್ ಮೂಲಕ ಸಂಪರ್ಕದಲ್ಲಿದ್ದರು. ಕೆಲ ದಿನಗಳ ಬಳಿಕ ಮಧುಕರಸ ತನ್ನನ್ನು ಪ್ರೀತಿಸೆಂದು ಶ್ವೇತಾಳನ್ನು ಕಾಡಿದ್ದಾನೆ. ಆತನ ಕಾಟಕ್ಕೆ ಬೇಸತ್ತ ಶ್ವೇತಾ ತನ್ನ ತಂದೆಗೆ ವಿಷಯ ತಿಳಿಸಿದ್ದಳು. ಬಳಿಕ ತಂದೆ ಮತ್ತು ಇತರ ಮೂವರ ಜತೆ ಸೇರಿ ಮಧುಕರಸನನ್ನು ಸುಟ್ಟು ಹತ್ಯೆಗೈದಿದ್ದರು. 
 
ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವೆಬ್ದುನಿಯಾವನ್ನು ಓದಿ