ಮೇಕೆದಾಟು ಯೋಜನೆಗೆ 25 ಕೋಟಿ ರೂ. ಬಿಡುಗಡೆ: ಸಿದ್ದರಾಮಯ್ಯ

ಭಾನುವಾರ, 29 ಮಾರ್ಚ್ 2015 (15:20 IST)
ಮೇಕೆದಾಟು ಯೋಜನೆಗೆ 25 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಗಡಿ ತಾಲೂಕು ಸೋಲೂರಿನಲ್ಲಿ ಹೇಳಿದರು.  ಯಾವ ಕಾರಣಕ್ಕೂ ಮೇಕೆದಾಟು ಯೋಜನೆ ಕೈಬಿಡುವುದಿಲ್ಲ ಎಂದು ಸಿಎಂ ಹೇಳಿದರು. ಯಾವುದೇ ಕಂಟಕಗಳು ಎದುರಾದರೂ ಮೇಕೆದಾಟು ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಸಿಎಂ ಹೇಳಿದರು.

 ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ 48 ಟಿಎಂಸಿ ನೀರು ಸಂಗ್ರಹಿಸುವ ಕರ್ನಾಟಕದ ಯೋಜನೆಗೆ ತಮಿಳುನಾಡು ರೈತರು ವಿರೋಧ ವ್ಯಕ್ತಪಡಿಸಿದ್ದು, ಅನೇಕ ಜಿಲ್ಲೆಗಳಲ್ಲಿ ಬಂದ್ ಆಚರಿಸಿದ್ದಾರೆ. ರೈತರ ವಿರೋಧಕ್ಕೆ ರಾಜಕೀಯ ಪಕ್ಷಗಳು ಕೂಡ ಕೈಗೂಡಿಸಿವೆ. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಹೊರಬಿದ್ದಿದೆ.

 ಮೇಕೆದಾಟು ಯೋಜನೆಯ ಮೂಲಕ ನೀರು ಸಂಗ್ರಹ ಮಾಡಿ ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ನೀರಿನ ಅಭಾವದ ಪ್ರದೇಶಗಳಿಗೆ ನೀರು ಪೂರೈಕೆ ಮಾಡುವುದು ಯೋಜನೆಯ ಉದ್ದೇಶವಾಗಿದೆ. ರಾಜ್ಯದಲ್ಲಿ ಮತ್ತೆ ಸಾರಾಯಿ ಮಾರಾಟ ಆರಂಭಿಸುವ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ ಎಂದೂ ಸಿಎಂ ಈ ಸಂದರ್ಭದಲ್ಲಿ ಹೇಳಿದರು.

ವೆಬ್ದುನಿಯಾವನ್ನು ಓದಿ